Learn Coding
ಹಣ ಗಳಿಸಬೇಕು ಎಂದರೆ ಚೆನ್ನಾಗಿ ಓದಬೇಕು ಎಂಬುದು ದಶಕಗಳಿಂದಲೂ ನಂಬಿಕೊಂಡಿರುವ ಮಾತು. ಒದು ನಿಜವೂ ಹೌದು ಆದರೆ ಎಲ್ಲರಿಗೂ ಅಲ್ಲ. ಕಾಲೇಜು ಮೆಟ್ಟಿಲು ಸಹ ಹತ್ತದ ಯುವಕನೊಬ್ಬ ತನ್ನ ಸ್ವಂತ ಪರಿಶ್ರಮದಿಂದ ಈಗ 4000 ಕೋಟಿ ರೂಪಾಯಿ ಹಣದ ಒಡೆಯನಾಗಿದ್ದಾನೆ. ಆತನ ವಯಸ್ಸು ಇನ್ನೂ 30 ದಾಟಿಲ್ಲ!
ಅಸ್ಸಾಂನ ದಿಬ್ರು ಗರ್ ನ ಕಿಶನ್ ಬಗಾರಿಯಾ ಜೀವನದಲ್ಲೇ ಕಾಲೇಜು ಮೆಟ್ಟಿಲು ಹತ್ತಿಲ್ಲ. ದ್ವಿತೀಯ ಪಿಯುಸಿ ಸಹ ಪಾಸ್ ಆಗಿಲ್ಲ. ಆದರೆ ಆತ ನಿರ್ಮಿಸಿದ ಅಪ್ಲಿಕೇಶನ್ 4 ಸಾವಿರ ಕೋಟಿಗೂ ಹೆಚ್ಚು ಮೊತ್ತಕ್ಕೆ ಮಾರಾಟ ಆಗಿದೆ. ತನ್ನ 12 ನೇ ವಯಸ್ಸಿನಲ್ಲೇ ಕೋಡಿಂಗ್ ಕಡೆಗೆ ಆಸಕ್ತಿ ಬೆಳೆಸಿಕೊಂಡ ಕಿಶನ್, ಆಗಿನಿಂದಲೂ ಕೋಡಿಂಗ್ ಮಾಡುತ್ತಿದ್ದ. ತನಗೆ ತೋಚಿದಂತೆ ಕೋಡಿಂಗ್ ಮಾಡುತ್ತಾ, ಕಲಿಯುತ್ತಾ, ಹಲವು ಕೋಡಿಂಗ್ ಭಾಷೆಗಳಲ್ಲಿ ಪರಿಣಿತಿ ಗಳಿಸಿಕೊಂಡ.
ಮೈಕ್ರೋಸಾಫ್ಟ್ ಸೇರಿದಂತೆ ಹಲವು ಕಂಪೆನಿಗಳಿಗೆ ಫ್ರೀಲ್ಯಾನ್ಸರ್ ಆಗಿಯೂ ಕೆಲಸ ಮಾಡಿದ ಕಿಶನ್ 2020 ರ ಸಮಯದಲ್ಲಿ ಮೊಬೈಲ್ ನಲ್ಲಿ ಬರುವ ವಿವಿಧ ಮೆಸೇಜ್ ಗಳನ್ನು ಓದುವ ಟೆಕ್ಸ್ಟ.ಕಾಮ್ ಅಪ್ಲಿಕೇಶನ್ ಅನ್ನು ಕೋಡ್ ಮಾಡಿದ. ಆರಂಭದಲ್ಲಿ ತನ್ನ ಗೆಳೆಯರಿಗೆ ಇದನ್ನು ನೀಡಿ ಬಳಸುವಂತೆ ಸೂಚಿಸಿದ. ಎಲ್ಲೆಡೆಯಿಂದ ಧನಾತ್ಮಕ ಪ್ರತಿಕ್ರಿಯೆಗಳೇ ವ್ಯಕ್ತವಾದವು. ಅಪ್ಲಿಕೇಶನ್ ನಲ್ಲಿ ಇದ್ದ ಸಣ್ಣ ಪುಟ್ಟ ಕೊರತೆಗಳನ್ನು ಸರಿ ಮಾಡಿ ಈ ಅಪ್ಲಿಕೇಶನ್ ಅನ್ನು ಒನ್ನಷ್ಟು ಬಲಗೊಳಿಸಿದ.
Investment: ಹಣ ಎಲ್ಲಿ ಹೂಡಿಕೆ ಮಾಡ್ತೀರಿ? ಬೆಂಗಳೂರಿನ ಕೋಟ್ಯಧೀಶ ಕೊಟ್ಟರು ಉತ್ತರ
ಅಪ್ಲಿಕೇಶನ್ ಬಳಸುವವರ ಸಂಖ್ಯೆ ಹೆಚ್ಚಾದಂತೆ, ಅಪ್ಲಿಕೇಶನ್ ಮೇಲೆ ಅಂತರಾಷ್ಟ್ರೀಯ ಸಂಸ್ಥೆಯಾದ ಆಟೊಮ್ಯಾಟಿಕ್’ನ ಕಣ್ಣು ಬಿತ್ತು. ವಿಶ್ವದಾದ್ಯಂತ ಬಳಸಾಗುತ್ತಿರುವ ವರ್ಲ್ಡ್ ಪ್ರೆಸ್ ನ ಮಾಲೀಕ ಸಂಸ್ಥೆ ಇದು. ಕಿಶನ್ ತಯಾರಿಸಿದ Texts.com ಅನ್ನು ಖರೀದಿಸಲು ಅಟೊಮ್ಯಾಟಿಕ್ ಸಂಸ್ಥೆ ಮುಂದಾಯ್ತು. ಬರೋಬ್ಬರಿ ಮೂರು ತಿಂಗಳ ಸತತ ಮೀಟಿಂಗ್, ಟೆಸ್ಟಿಂಗ್ ಎಲ್ಲದರ ಬಳಿಕ ಆಟೊಮ್ಯಾಟಿಕ್ ಕಂಪೆನಿಯ ಮಾಲೀಕ ಮ್ಯಾಟ್ ಮುಲ್ಲೆನ್ ವೆಂಗ್ ಸ್ವತಃ ಕಿಶನ್ ಅನ್ನು ಭೇಟಿಯಾಗಿ ಡೀಲ್ ಮಾಡಿಕೊಂಡರು.
ಕಿಶನ್ ತಯಾರಿಸಿದ ಅಪ್ಲಿಕೇಶನ್ ಗೆ ಬರೋಬ್ಬರಿ 50 ಮಿಲಿಯನ್ ಡಾಲರ್ ಅಂದರೆ 4160 ಕೋಟಿ ರೂಪಾಯಿ ಹಣ ನೀಡಿ ಮ್ಯಾಟ್ ಖರೀದಿ ಮಾಡಿದರು. ಮಾತ್ರವಲ್ಲದೆ Texst.com ಅನ್ನು ಕಿಶನ್ ಮುಂದಾಳತ್ವದಲ್ಲೇ ಮುಂದುವರೆಸುವುದಾಗಿ ಹೇಳಿದರಲ್ಲದೆ, ಈ ಜನರೇಷನ್’ನ ತಂತ್ರಜ್ಞಾನದ ಜೀನಿಯಸ್ ಎಂದು ಕೊಂಡಾಡಿದರು.