Bengaluru Habba: ಚಿತ್ರ ಬಿಡಿಸುವ ಆಸೆಯಿದೆಯೆ? ಇಡೀ ಬೆಂಗಳೂರೇ ನಿಮ್ಮ ಕ್ಯಾನ್ವಸ್

0
99
Bengaluru Habba

Bengaluru Habba

ಚಿತ್ರ ಬಿಡಿಸುವ ಆಸೆಯಿದ್ದರೆ, ನಿಮ್ಮ ಆ ಸುಂದರ ಚಿತ್ರಗಳನ್ನು ಹಾಳೆಗಳಿಗೆ ಏಕೆ ಸೀಮಿತಪಡಿಸುತ್ತೀರಿ? ಇಡೀ ಬೆಂಗಳೂರನ್ನೇ ಬಣ್ಣಗಳಿಂದ ತೋಯಿಸಿ, ಈಗ ಬೆಂಗಳೂರೇ ನಿಮ್ಮ ಕ್ಯಾನ್ವಸ್! ಬೆಂಗಳೂರು ಫೌಂಡೇಷನ್‌, ಬಿಎಂಆರ್‌ಸಿಎಲ್‌ ಸಹಯೋಗದೊಂದಿದೆ ‘ಗೋಡೆ ಬೆಂಗಳೂರು’ ಶೀರ್ಷಿಕೆಯಡಿ ಬೆಂಗಳೂರಿನ ಗೋಡೆಗಳ ಮೇಲೆ ಚಿತ್ರಗಳನ್ನು ಬರೆಯುವ ಕಾರ್ಯಕ್ರಮವನ್ನು ಘೋಷಿಸಲಾಗಿದೆ. ಬೆಂಗಳೂರಿನಾದ್ಯಂತ ಇರುವ ಗೋಡೆಗಳ ಮೇಲೆ ನಮ್ಮ ಕಲೆ, ಸಂಸ್ಕೃತಿ, ಆಚರಣೆ ಇತ್ಯಾದಿ ಸೊಬಗನ್ನು ಬಿಂಬಿಸುವ ಚಿತ್ರಗಳನ್ನು ಬಿಡಿಸುವ ಚಟುವಟಿಕೆ ನಡೆಸುತ್ತಿದೆ.

ನವೆಂಬರ್ 30 ರಿಂದ ಡಿಸೆಂಬರ್ 15ರ ವರೆಗೆ “ಬೆಂಗಳೂರು ಹಬ್ಬ”ವನ್ನು ಅದ್ಧೂರಿಯಿಂದ ಆಚರಿಸಲು ಮುಂದಾಗಿದೆ ಅನ್‌ಬಾಕ್ಸಿಂಗ್‌ ಫೌಂಡೇಷನ್‌. ಇದರ ಭಾಗವಾಗಿ ‘ಗೋಡೆ ಬೆಂಗಳೂರು’ ಚಟುವಟಿಕೆಗೆ ಚಾಲನೆ ನೀಡಿದೆ. ಸಂಸ್ಕೃತಿ ಹಾಗೂ ಕ್ರಿಯಾತ್ಮಕ ಮನೋಭಾವದ ಚಿತ್ರಗಳನ್ನು ಗೋಡೆಗಳ ಮೇಲೆ ಚಿತ್ರಿಸಿ ನಮ್ಮ ನಗರವನ್ನು ಸುಂದರವಾಗಿಸಲು ಪ್ರಯತ್ನಿಸಲಾಗುತ್ತಿದೆ. ಮೆಟ್ರೋ ನಿಲ್ದಾಣಗಳು, ನಗರದ ಪ್ರಮುಖ ಗೋಡೆಗಳ ಮೇಲೆ ಚಿತ್ರಗಳನ್ನು ಬರೆಯಬಹುದಾಗಿದೆ. ಬೆಂಗಳೂರಿನ ನಿವಾಸಿಗಳು ಹಾಗೂ ಬೆಂಗಳೂರಿಗೆ ಭೇಟಿ ನೀಡುವ ಪ್ರವಾಸಿಗರು ಈ ಸುಂದರ ಕಲೆಗಳ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು.

Women Safety: ಬೆಂಗಳೂರು ಎಲ್ಲಿ ಹೋದರು ಆ 485 ಯುವತಿಯರು

ಆಗಸ್ಟ್ ತಿಂಗಳಲ್ಲೇ ‘ಗೋಡೆ ಬೆಂಗಳೂರು’ ಕಾರ್ಯಕ್ರಮಕ್ಕೆ ವಿವಿಧ ಕಲಾವಿದರಿಂದ ಅರ್ಜಿ ಆಹ್ವಾನಿಸಿ, ಹತ್ತು ಪ್ರತಿಭಾವಂತ ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಆಯ್ಕೆಯಾಗಿರುವ ಹತ್ತು ಪ್ರತಿಭಾವಂತ ಕಲಾವಿದರು ಬೆಂಗಳೂರಿನ ಗೋಡೆಗಳ ಮೇಲೆ ಸುಂದರ ಕಲಾಕೃತಿಗಳನ್ನು ರಚಿಸಲಿದ್ದಾರೆ. ಈ ಕಲಾವಿದರು ‘ಬೆಂಗಳೂರು ವರ್ಣಗಳು’ ಎಂಬ ವಿಷಯದ ಸುತ್ತ ಚಿತ್ರಗಳನ್ನು ರಚಿಸಲಿದ್ದಾರೆ. ಇದು ನಗರದ ಸಾರವನ್ನು ಸೆರೆಹಿಡಿಯುವ ಪ್ರಯತ್ನವಾಗಲಿದೆ ಈ ‘ಗೋಡೆ ಬೆಂಗಳೂರು’.

ಸರ್ಕಾರದ ಬೆಂಬಲದೊಂದಿಗೆ ಬೆಂಗಳೂರು ಹಬ್ಬವನ್ನು ಆಯೋಜಿಸಲಾಗುತ್ತಿದ್ದು, ಇದು ಬೆಂಗಳೂರಿಗರನ್ನು ಆಧಾರವಾಗಿಟ್ಟುಕೊಂಡ ಉತ್ಸವವಾಗಿದೆ. ಉತ್ಸವದ ಎರಡನೇ ಆವೃತ್ತಿಯು ನವೆಂಬರ್ 30 ರಿಂದ ಡಿಸೆಂಬರ್ 15, 2024 ರವರೆಗೆ ನಡೆಯಲಿದೆ. ಬೆಂಗಳೂರು ಹಬ್ಬವನ್ನು ಅನ್‌ಬಾಕ್ಸಿಂಗ್‌ ಬಿಎಲ್‌ಆರ್ ಫೌಂಡೇಶನ್ ಆಯೋಜಿಸುತ್ತಿದೆ, ಇದು ಲಾಭೋದ್ದೇಶವಿಲ್ಲದ ವೇದಿಕೆ ಆಗಿದ್ದು, ಜನಸಾಮ್ಯರನ್ನು ಸಕ್ರಿಯಗೊಳಿಸುವ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ಬೆಂಗಳೂರಿನ ಪ್ರಯಾಣವನ್ನು ಜಾಗತಿಕ ಟೆಕ್ ಹಬ್ ಮತ್ತು ಸಾಂಸ್ಕೃತಿಕ ನಗರಿಯನ್ನಾಗಿ ಆಚರಿಸುತ್ತದೆ. ಬೆಂಗಳೂರು ಹಬ್ಬಾ ಬೆರಗುಗೊಳಿಸುವ ಪ್ರದರ್ಶನಗಳು ಮತ್ತು ಕಲಾತ್ಮಕ ಪ್ರದರ್ಶನಗಳು ಮತ್ತು ತಲ್ಲೀನಗೊಳಿಸುವ ಅನುಭವಗಳಿಂದ ನಗರದ ರೋಮಾಂಚಕ ಸಂಸ್ಕೃತಿಯನ್ನು ಆಚರಿಸುತ್ತದೆ.

LEAVE A REPLY

Please enter your comment!
Please enter your name here