KSRTC: ಮೆಜೆಸ್ಟಿಕ್ ನಲ್ಲಿ ಗೌರಿಬಿದನೂರು ಜನರ ಪರದಾಟ, ಅಧಿಕಾರಿಗಳ ಅರಚಾಟ

0
95
KSRTC

KSRTC

ಕೆಎಸ್’ಆರ್’ಟಿಸಿ ದೇಶದಲ್ಲಿಯೇ ಅತ್ಯುತ್ತಮ ಸಾರಿಗೆ ಸೇವಾ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಲವು ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳಿಗೂ ಸಹ ಭಾಜನವಾಗಿದೆ KSRTC. ಆದರೆ ನೀವು ಗೌರಿಬಿದನೂರು, ಶಿಡ್ಲಘಟ್ಟ, ಬಾಗೇಪಲ್ಲಿ ಇಂಥಹಾ ಗಡಿ ಭಾಗಗಳಿಗೆ KSRTC ಯಲ್ಲಿ ಪ್ರಯಾಣಿಸುವ ಪ್ರಯಾಣಿಕರಾದರೆ KSRTC ಯ ನಿಜ ಬಣ್ಣ ನೋಡಲು ಸಿಗುತ್ತದೆ.

ಮೆಜೆಸ್ಟಿಕ್’ನ KSRTC ಬಸ್ ಸ್ಟ್ಯಾಂಡ್ ಟರ್ನಿಮನ್ 2 ನಲ್ಲಿ ಗೌರಿಬಿದನೂರು, ಶಿಢ್ಲಘಟ್ಟ, ಬಾಗೇಪಲ್ಲಿ, ಚಿಕ್ಕಬಳ್ಳಾಪುರಗಳಿಗೆ ಹೋಗುವ ಬಸ್ಸುಗಳು ನಿಲ್ಲುತ್ತವೆ. ಬಸ್ಸು ಸ್ಟ್ಯಾಂಡ್ ಗೆ ಬರುವಷ್ಟರಲ್ಲಿ ಇಡೀ ಬಸ್ ಭರ್ತಿ ಆಗಿರುತ್ತದೆ. ಭರ್ತಿ ಎಂದರೆ ಕೇವಲ ಸೀಟು ಭರ್ತಿ ಎಂದಲ್ಲ. ಜನ ನಿಂತು ಕೊಂಡು ಪ್ರಯಾಣಿಸಲು ಅಣಿಯಾಗಿರುತ್ತಾರೆ. ಬಹುತೇಕ ಪ್ರತಿ ಬಸ್ಸುಗಳು ಸಹ ಮೆಜೆಸ್ಟಿಕ್ ನಲ್ಲಿಯೇ ಭರ್ತಿ ಆಗಿಬಿಡುತ್ತವೆ. ಹೆಚ್ಚುವರಿ ಬಸ್ಸುಗಳಿಗೆ ಭಾರಿ ಬೇಡಿಕೆ ಈ ರೂಟ್ ಗಳಲ್ಲಿ ಇದೆಯಾದರೂ KSRTC ನಿಗಮ ಹೆಚ್ಚುವರಿ ಬಸ್ ಹಾಕಿಲ್ಲ.

ಇದು ಶಿಡ್ಲಘಟ್ಟ, ಬಾಗೇಪಲ್ಲಿ ರೂಟ್ ನ ಕತೆಯಾದರೆ, ಗೌರಿಬಿದನೂರಿಗೆ ಹೋಗುವ ಪ್ರಯಾಣಿಕರ ಪಾಡು ಆ ದೇವರಿಗೇ ಪ್ರಿಯ. ದೊಡ್ಡ ಸಂಖ್ಯೆಯ ಪ್ರಯಾಣಿಕರು ಗೌರಿಬಿದನೂರಿಗೆ ಪ್ರತಿನಿತ್ಯ ಮೆಜೆಸ್ಟಿಕ್ ನಿಂದ ಪ್ರಯಾಣ ಮಾಡುತ್ತಾರೆ. ಆದರೆ ಗೌರಿಬಿದನೂರಿಗೆ ಗಂಟೆಗೆ ಒಂದು ಬಸ್ ಸಹ ಸರಿಯಾಗಿ ಬರುವುದಿಲ್ಲ. ಅಕ್ಟೋಬರ್ 24 ರಂದು ಸಂಜೆ ಸುಮಾರು ಎರಡು ಗಂಟೆ ಬಸ್’ಗಾಗಿ ಕಾದ ಜನ KSRTC ಅಧಿಕಾರಿಗಳ‌ ಜೊತೆ ಜಗಳವಾಡಿದರು. ಒಬ್ಬ ಅಧಿಕಾರಿ ಸಾರ್ವಜನಿಕರನ್ನು ಏಕವಚನದಲ್ಲಿ ಬೈದ ಘಟನೆಯೂ ನಡೆಯಿತು.

Bengaluru Habba: ಚಿತ್ರ ಬಿಡಿಸುವ ಆಸೆಯಿದೆಯೆ? ಇಡೀ ಬೆಂಗಳೂರೇ ನಿಮ್ಮ ಕ್ಯಾನ್ವಸ್

ಸಾರ್ವಜನಿಕರು ಹಾಗೂ ರೂಟ್ ಆಫೀಸರ್ ಜಗಳ ತಾರಕಕ್ಕೆ ಹೋದಾಗ KSRTC ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರಬೇಕಾಯ್ತು. ಕಾದು ಸುಸ್ತಾಗಿ ಸಿಟ್ಟಾಗಿದ್ದ ಸಾರ್ವಜನಿಕರನ್ನು ಸಮಾಧಾನ ಪಡಿಸಿದ KSRTC ಹಿರಿಯ ಅಧಿಕಾರಿ ಆ ನಂತರ ಗೌರಿಬಿದನೂರು ಡಿಪೋಟ್ ಗೆ ಕರೆ ಮಾಡಿ ಹೆಚ್ಚುವರಿ ಬಸ್ ಅನ್ನು ಕಳಿಸುವಂತೆ ಹೇಳಿದರು. ಆ ನಂತರ ಬಸ್ ಬಂದಿತಾದರೂ ಸುಮಾರು ಮೂರು ಬಸ್ ಗಳಿಗೆ ಆಗುವಷ್ಟು ಜನ ಒಂದು ಬಸ್ ನಲ್ಲಿ ಪ್ರಯಾಣಿಸುವಂತಾಯ್ತು.

LEAVE A REPLY

Please enter your comment!
Please enter your name here