Weekly Astrology: ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ ಎರಡು ರಾಶಿಯ ಅದೃಷ್ಟ ಬದಲಾಗಲಿದೆ

0
257
Weekly Horoscope

Weekly Astrology

ಅಕ್ಟೋಬರ್ ತಿಂಗಳ ಕೊನೆಯ ವಾರ ಅಕ್ಟೋಬರ್ 28 ರಿಂದ ನವೆಂಬರ್ 03 ರ ವರೆಗೆ ಇರಲಿದೆ. ಇದು ದೀಪಾವಳಿ ಹಬ್ಬ ನಡೆಯುವ ವಾರವಾಗಿದ್ದು, ಈ ವಾರದಲ್ಲಿ ಕೆಲ ಗ್ರಹಗಳ ಸಂಚಾರ ಇರಲಿದೆ. ಈ ವಾರ ಎರಡು ರಾಶಿಗೆ ಬಹಳ ಒಳ್ಳೆಯ ಅದೃಷ್ಟ ಇದೆ. ಕೆಲ ರಾಶಿಗಳಿಗೆ ಅಪಾಯಗಳೂ ಸಹ ಇವೆ.

ಮೇಷ ರಾಶಿ

ಮೇಷ ರಾಶಿಗೆ ಈ ವಾರ ಶುಭ ಫಲ ಇದೆ. ಸಣ್ಣ ಪುಟ್ಟ ಕಾರ್ಯಗಳಿಗೆ ಹಣ ಖರ್ಚಾಗುವುದಾದರೂ, ಅದಕ್ಕೆ ತಕ್ಕಂತೆ ಹಣದ ಹರಿವು ಸಹ ಇರಲಿದೆ. ನಿಮ್ಮ ಶತ್ರುಗಳು ಮಿತ್ರರಾಗಿ ಬದಲಾಗುವರು. ಸಾಮಾಜಿಕ ಗೌರವ ಸಿಗಲಿದೆ. ಮಾತುಗಳಿಗೆ ಗೌರವ ಇರಲಿದೆ. ಆದರೆ ಸಂಬಂಧಿಗಳು ಚುಚ್ಚು ನುಡಿಯಿಂದ ಬೇಸರ ಆಗಲಿದೆ.

ವೃಷಭ ರಾಶಿ

ವೃಷಭ ರಾಶಿಗೆ ಮಿಶ್ರ ಫಲ ಇದೆ. ಎದುರಾಗಿರುವ ಸಮಸ್ಯೆಗಳು ದೊಡ್ಡದಾಗುವುದು, ಕಷ್ಟಪಟ್ಟರೂ ಕಷ್ಟಗಳ ಪರಿಹಾರ ಆಗುವುದಿಲ್ಲ. ಕೆಲಸದಲ್ಲಿ ನಿರಾಸಕ್ತಿ ಮೂಡಲಿದೆ. ವಿರಾಮ ತೆಗೆದುಕೊಳ್ಳಲಿದ್ದೀರಿ. ವೃತ್ತಿ ಬದುಕಿನಲ್ಲಿ ಹಿಂದೆ ಬೀಳಲಿದ್ದೀರಿ. ಕೆಲಸದ ಸ್ಥಳದಲ್ಲಿ ಅವಮಾನ ಆಗಲಿದೆ.

ಮಿಥುನ ರಾಶಿ

ಮಿಥುನ ರಾಶಿಗೆ ಈ ವಾರವೂ ಅಶುಭವೇ. ಕುಟುಂಬದಲ್ಲಿ ಕಲಹ ಏರ್ಪಡಲಿದೆ. ಹಿರಿಯರ ಸಲಹೆ ಪಡೆದು ಕೆಲಸ ಮಾಡಿ. ಉದ್ಯೋಗ ಬಿಡುವ ಆಲೋಚನೆ ಮಾಡುವಿರಿ, ಕೆಲಸದಲ್ಲಿ ದ್ವಂದ್ವ ಏರ್ಪಾಟಾಗಲಿದೆ. ಪ್ರಯಾಣದ ಯೋಗ ಇದೆ. ಆರೋಗ್ಯದಲ್ಲಿ ಏರು-ಪೇರು ಸಂಭವಿಸಲಿದೆ.

ಕರ್ಕಾಟಕ ರಾಶಿ

ಕರ್ನಾಟಕ ರಾಶಿಗೆ ಈ ವಾರ ಮಿಶ್ರಫಲ ಇದೆ. ಆಸ್ತಿಯ ಸಲುವಾಗಿ ಜಗಳ ನಡೆಯಲಿದೆ. ಮಕ್ಕಳ ಕೆಲಸಗಳ ಬಗ್ಗೆ ಬೇಸರ ಮೂಡಲಿದೆ. ನಿಮ್ಮ ಅಕ್ಕ-ಪಕ್ಕದವರು ಕತ್ತಿ ಮಸೆಯಲಿದ್ದಾರೆ. ಕೆಲವು ಸಮಸ್ಯೆ ಎದುರಾಗಲಿವೆ ಎಚ್ಚರದಿಂದ ಎದುರಿಸಿ. ಶಿಕ್ಷಣದಲ್ಲಿ ಪ್ರಗತಿ ಕಾಣುವಿರಿ. ಸಹೋದರನ ಜೊತೆ ವ್ಯಾಜ್ಯ ನಡೆಯಲಿದೆ.

ಸಿಂಹ ರಾಶಿ

ಸಿಂಹ ರಾಶಿಗೆ ಈ ವಾರ ಮಿಶ್ರ ಫಲ ಇದೆ. ಹಿರಿಯರ ಜೊತೆ ವಿವಾದ ಉಂಟಾಗಲಿದೆ. ಪತ್ನಿಯಿಂದ ಸಂತೋಷ ಸಿಗಲಿದೆ. ಕೆಲಸದ ಸ್ಥಳದಲ್ಲಿ ಉಲ್ಲಾಸ ಇರಲಿದೆ. ಸಾಲಗಳಿಗೆ ಸಿಲುಕಲಿದ್ದೀರಿ, ಹಣ ನಷ್ಟ ಆಗಲಿದೆ. ಕುಟುಂಬದಲ್ಲಿ ನೆಮ್ಮದಿ ಹೋಗಲಿದೆ. ದೇವರ ಆರಾಧನೆ ಮರೆಯದಿರಿ.

ಕನ್ಯಾ ರಾಶಿ

ಕನ್ಯಾ ರಾಶಿಗೆ ಈ ವಾರ ಶುಭ ಆಗಿದೆ. ಕೆಲಸದ ಸ್ಥಳದಲ್ಲಿ ಬೇಸರದ ಘಟನೆ ನಡೆಯಲಿದೆ. ನಿಮ್ಮ ಪ್ರತಿಭೆಯನ್ನು ಗುರುತಿಸುವುದಿಲ್ಲ. ಆದರೆ ತಾಳ್ಮೆ ಕಳೆದುಕೊಳ್ಳಬೇಡಿ, ಒಳ್ಳೆಯ ದಿನಗಳು ಮುಂದೆ ಇವೆ. ವಿವಾಹ ಸಂಬಂಧ ಉತ್ತಮಗೊಳ್ಳಲಿದೆ. ಕೆಲ ಸ್ಥಳಗಳಲ್ಲಿ ನಿಮಗೆ ಗೌರವ ಸಿಗಲಿದೆ.

ತುಲಾ ರಾಶಿ

ತುಲಾ ರಾಶಿಗೆ ಈ ವಾರ ಮಿಶ್ರ ಫಲ ಸಿಗಲಿದೆ. ನಿಮ್ಮ ಕೆಲಸದಿಂದ ಜನ ಪ್ರಭಾವಿತರಾಗಲಿದ್ದಾರೆ. ಗೌರವ ಪ್ರಾಪ್ತಿ ಆಗಲಿದೆ. ಪತ್ನಿಯೊಟ್ಟಿಗೆ ವಿರಸ ಮೂಡಲಿದೆ. ಈ ಸಮಯದಲ್ಲಿ ತಾಳ್ಮೆಯಿಂದ ಇರಿ. ಶತ್ರುಕಾಟದಿಂದ ಮುಕ್ತಿ ಸಿಗಲಿದೆ. ಎಲ್ಲ ಸಂದರ್ಭಗಳಲ್ಲಿಯೂ ತಾಳ್ಮೆ ಇರಲಿ. ದೇವಾಲಯಕ್ಕೆ ಭೇಟಿ ನೀಡಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಶುಭ ವಾರ ಇದು. ಅಂದುಕೊಂಡ ಕಲಸಗಳು ಸುಗಮವಾಗಿ ನಡೆಯಲಿದೆ. ನೌಕರಿಯಲ್ಲಿ ಮುಂಬಡ್ತಿ ಸಿಗಲಿದೆ. ಕಳೆದು ಹೋಗಿದ್ದ ಹಣ ಮತ್ತೆ ಸಿಗುವುದು, ಬಾರದು ಎಂದುಕೊಂಡ ಹಣ ಬರುವುದು. ಮಕ್ಕಳಾಗದವರಿಗೆ ಶುಭ ಸುದ್ದಿ ಸಿಗಲಿದೆ. ಆದರೆ ತಂತ್ರಜ್ಞಾನದ ಬಗ್ಗೆ ಎಚ್ಚರದಿಂದ ಇರಿ. ಬಂದ ಹಣವನ್ನು ಸರಿಯಾಗಿ ಬಳಸಿಕೊಳ್ಳಿ.

ಧನು ರಾಶಿ

ಧನು ರಾಶಿಯವರಿಗೆ ಈ ವಾರ ಅಶುಭ ಫಲ ಇದೆ. ನಿಮ್ಮ ಮಾತುಗಳಿಂದ ಸಮಸ್ಯೆ ಆಗಲಿದೆ. ಮಾತುಗಳ ಮೇಲೆ ನಿಗಾ ಇಡಲಿ. ನಿಮ್ಮ ಬಗ್ಗೆ ಕೆಲವರು ಋಣಾತ್ಮಕವಾಗಿ ಮಾತನಾಡಲಿದ್ದಾರೆ. ಆದರೆ ನೀವು ಪ್ರತಿಕ್ರಿಯಿಸಬೇಡಿ. ನಿಮ್ಮನ್ನು ಅವಮಾನ ಮಾಡುವರು. ಗೌರವ ಕಡಿಮೆ ಆಗುವುದು. ಕೋಪ ಮಾಡಿಕೊಳ್ಳಬೇಡಿ, ತಾಳ್ಮೆಯಿದ್ದರಷ್ಟೆ ಏಳಿಗೆ ಸಾಧ್ಯ. ವೃತ್ತಿಯಲ್ಲಿ ಸಮಸ್ಯೆ ಎದುರಾಗುವುದು ಎಲ್ಲವನ್ನೂ ಎದುರಿಸಿ.

weekly horoscope: ಅಕ್ಟೋಬರ್ ತಿಂಗಳ ಈ ವಾರ ಎರಡು ರಾಶಿಯವರಿಗೆ ಭಾರಿ ಅದೃಷ್ಟ

ಮಕರ ರಾಶಿ

ಮಕರ ರಾಶಿಯವರಿಗೆ ಈ ವಾರ ಶುಭ ಫಲ ಸಿಗಲಿದೆ. ನಿಮ್ಮ ವೃತ್ತಿ ಜೀವನದಲ್ಲಿ ಏರಿಕೆ ಆಗಲಿದೆ. ಉದ್ಯಮದಲ್ಲಿ ಲಾಭ ಹೆಚ್ಚಾಗಲಿದೆ. ಆರೋಗ್ಯ ಸುಧಾರಣೆ ಆಗಲಿದೆ. ಹೊಸ ವಸ್ತು ಖರೀದಿ ಮಾಡುವಾಗ ಎಚ್ಚರಿಕೆಯಿಂದ ಇರಿ.

ಕುಂಭ ರಾಶಿ

ಕುಂಭ ರಾಶಿಯವರಿಗೆ ಈ ವಾರ ಶುಭ ಫಲ ಸಿಗಲಿದೆ. ಕುಟುಂಬದಲ್ಲಿ ಶಾಂತಿ ನೆಲೆಸಲಿದೆ. ನಿಮ್ಮ ಯೋಚನೆ ಪಾಸಿಟಿವ್ ಆಗಿ ಇರಲಿದೆ. ಋಣಾತ್ಮಕತೆ ಕಡಿಮೆ ಆಗಲಿದೆ. ಹಳೆಯ ಗೆಳೆಯರು, ಆತ್ಮೀಯ ಗೆಳೆಯರು ಸಿಗಲಿದ್ದು, ಅವರೊಡನೆ ಸಮಯ ಕಳೆಯಲಿದ್ದೀರಿ.

ಮೀನ ರಾಶಿ

ಮೀನ ರಾಶಿಯವರಿಗೆ ಈ ವಾರ ಶುಭವಾಗಿದೆ. ಶಿಕ್ಷಣದಲ್ಲಿ ಏಳ್ಗೆ, ಅಂದುಕೊಂಡ ಕೆಲಸ ಅಂದುಕೊಂಡ ರೀತಿಯಲ್ಲಿಯೇ ನಡೆಯಲಿದೆ. ಇಷ್ಟಪಟ್ಟ ಕೆಲಸ ಸಿಗಲಿದೆ. ಶಿಕ್ಷಣದ ಕಾರಣಕ್ಕೆ ಬೇರೆ ನಗರಕ್ಕೆ ಹೋಗಬೇಕಾಗುತ್ತದೆ, ಹೀಗೆ ಬೇರೆ ನಗರಕ್ಕೆ ಹೋದವರಿಗೆ ಒಳಿತಾಗಲಿದೆ. ಹೊಸ ಯೋಜನೆಗಳನ್ನು ಹಾಕಿಕೊಳ್ಳುವಿರಿ ಅದರಿಂದ ಲಾಭ ಪಡೆಯಲಿದ್ದೀರಿ.

LEAVE A REPLY

Please enter your comment!
Please enter your name here