Bigg Boss: ಬಿಗ್​ಬಾಸ್​ನಿಂದ ಎಲಿಮಿನೇಟ್ ಆದ ಸ್ಪರ್ಧಿ ಯಾರು? ಇಲ್ಲಿದೆ ಉತ್ತರ

0
104
Bigg Boss

Bigg Boss kannada

ಬಿಗ್​ಬಾಸ್ ಕನ್ನಡ ಸೀಸನ್ 11 ರ ವಾರದ ಪಂಚಾಯಿತಿಗೆ ಸುದೀಪ್ ಬಂದಿರಲಿಲ್ಲ. ಸುದೀಪ್ ಅವರ ತಾಯಿ ನಿಧನ ಹೊಂದಿದ ಕಾರಣ ಕಳೆದ ವಾರ ಹಾಗೂ ಈ ವಾರ ಅವರು ಬಿಗ್​ಬಾಸ್ ಶೋ ನಡೆಸಿಕೊಡಲಿಲ್ಲ. ಕಳೆದ ವಾರ ಸುದೀಪ್, ವಾರದ ಪಂಚಾಯಿತಿ ನಡೆಸಿಕೊಡದ ಕಾರಣ ಯಾರನ್ನೂ ಎಲಿಮಿನೇಟ್ ಮಾಡಿರಲಿಲ್ಲ. ಇನ್ನು ಈ ವಾರ ಸಹ ಸುದೀಪ್ ಬಂದಿರಲಿಲ್ಲ ಆದರೂ ಸಹ ಈ ವಾರ ಖುದ್ದು ಬಿಗ್​ಬಾಸ್ ಎಲಿಮಿನೇಷನ್ ಪ್ರಕ್ರಿಯೆ ನಡೆಸಿಕೊಟ್ಟರು. ಬಿಗ್​ಬಾಸ್ ಮನೆಗೆ ಎರಡು ಟಾಟಾ ಕರ್ವ್ ಕಾರು ಬಂದವು. ಒಂದು ಕಾರಿನ ಬಳಿ ಹಂಸಾ ಇನ್ನೊಂದು ಕಾರಿನ ಬಳಿ ಮೋಕ್ಷಿತಾ ನಿಂತರು. ಇಬ್ಬರೂ ಕಾರಿಗೆ ಹತ್ತಿದರು ಆದರೆ ಯಾವ ಕಾರು ಮರಳಿ ಬಂತು? ಯಾವ ಬರಲಿಲ್ಲ ಎಂಬುದನ್ನು ನಿನ್ನೆಯ ಎಪಿಸೋಡ್​ನಲ್ಲಿ ತೋರಿಸಲಿಲ್ಲ.

ಆದರೆ ಪಕ್ಕಾ ವರದಿಯ ಪ್ರಕಾರ ಹಂಸಾ ಈ ವಾರ ಎಲಿಮಿನೇಟ್ ಆಗಿದ್ದಾರೆ, ಮೋಕ್ಷಿತಾ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ. ಇದು ಖಾತ್ರಿ ಆಗಿದ್ದು ಹಂಸಾ ಅವರನ್ನು ಎಲಿಮಿನೇಟ್ ಮಾಡಲಾಗಿದೆ. ಆದರೆ ಅವರನ್ನು ಬಿಗ್​ಬಾಸ್ ಸೆಟ್​ನಿಂದ ಹೊರಗೆ ಬಿಟ್ಟಿಲ್ಲ. ಬಿಗ್​ಬಾಸ್​ನ ಇಂದಿನ ಎಪಿಸೋಡ್ ಪ್ರಸಾರ ಆದ ಬಳಿಕವಷ್ಟೆ ಹಂಸಾ ಅವರನ್ನು ಹೊರಗೆ ಬಿಡಲಾಗುತ್ತದೆ. ಆದರೆ ಹಂಸಾ ಬಿಗ್​ಬಾಸ್ ಮನೆಯಿಂದ ಹೊರಗೆ ಬಂದಿರುವುದು ಖಾತ್ರಿ ಎನ್ನಲಾಗುತ್ತಿದೆ.

ತಮ್ಮ ಪತ್ನಿ ಬಿಗ್​ಬಾಸ್ ಮನೆಯಿಂದ ಹೊರಗೆ ಬಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಂಸಾ ಅವರ ಪತಿ ಜಯ ಪ್ರತಾಪ್, ‘ನನ್ನ ಹೆಂಡ್ತಿ ಹೊರಗೆ ಬಂದಿದ್ದಾರೆ ಅಂತ ಹೇಳುತ್ತಿದ್ದಾರೆ. ಲಾಯರ್ ಜಗದೀಶ್ ಜೊತೆ ನನ್ನ ಪತ್ನಿ ಕ್ಲೋಸ್ ಆಗಿ ಇದ್ದಿದ್ದು ನನಗೆ ಬೇಜಾರಿಲ್ಲ ಅದೆಲ್ಲ ಅವರು ಸ್ಪೋಟಿವ್ ಆಗಿ ತೆಗೆದು ಮಾಡಿದ್ದು, ಹೇಳ್ಬೇಕು ಅಂದರೆ ಅವರಿಬ್ಬರ ಕಾಂಬಿನೇಶನ್ ನನಗೆ ಮತ್ತು ಮಗನಿಗೆ ತುಂಬಾ ಇಷ್ಟ ಆಯ್ತು. ಲಾಯರ್ ಜಗದೀಶ್ ಇದ್ದಿದ್ದರೆ ಅವರೇ ಫಿನಾಲೆಗೆ ಬರ್ತಿದ್ದರು. ಹಂಸ ಕೂಡ ಫಿನಾಲೆಗೆ ಬರುತ್ತಿದ್ದರು. ಒಳಗೆ ಇರಬೇಕಾದರೋ ಹೊರಗೆ ಇದ್ದಾರೆ ಹೊರಗಡೆ ಇರಬೇಕಾದೋರೋ ಒಳಗಡೆ ಇದ್ದಾರೆ. ನನ್ನ ಪತ್ನಿ ಮತ್ತು ಜಗದೀಶ್ ತುಂಟಾಟ ನಂಗೇನು ಬೇಜಾರ್ ಆಗಿಲ್ಲ, ನನ್ನ ಪತ್ನಿ ಏನು ಅಂತ ನನಗೆ ಗೊತ್ತು ಜಗದೀಶ್ ಅಂಥಹಾ 10 ಜನ ಬಂದ್ರು ಹಂಸ ಬೀಳೋದಿಲ್ಲ. ನಮ್ಮದು 24 ವರ್ಷ ಲವ್ ಮ್ಯಾರೇಜ್’ ಎಂದಿದ್ದಾರೆ.

Yash: ಮುಖ್ಯ ಪಾತ್ರಕ್ಕೆ ನೋ ಹೇಳಿ, ವಿಲನ್ ಪಾತ್ರ ಆಯ್ದುಕೊಂಡ ಯಶ್

ಈ ವಾರ ಮಾನಸ ಎಲಿಮಿನೇಟ್ ಆಗುತ್ತಾರೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಮಾನಸ ಸೇಫ್ ಆಗಿದ್ದಾರೆ. ಮೋಕ್ಷಿತಾ ಮತ್ತು ಹಂಸಾ ಎಲಿಮಿನೇಷನ್ ಬಾಗಿಲಿಗೆ ಹೋಗಿದ್ದಾರೆ. ಅಲ್ಲಿಂದ ಹಂಸಾ ಎಲಿಮಿನೇಟ್ ಆಗಿದ್ದರೆ ಮೋಕ್ಷಿತಾ ಬಚಾವ್ ಆಗಿದ್ದಾರೆ.

LEAVE A REPLY

Please enter your comment!
Please enter your name here