Darshan Thoogudeepa: ಇಂದು ದರ್ಶನ್’ಗೆ ಸಿಗುತ್ತಾ ಜಾಮೀನು? ಏನೆನ್ನುತ್ತಾರೆ ಹಿರಿಯ ವಕೀಲ

0
78
Darshan Thoogudeepa

Darshan Thoogudeepa

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ ಐದು ತಿಂಗಳಾಗಿವೆ. ಈ ಹಿಂದೆ ಸಲ್ಲಿಸಲಾಗಿದ್ದ ಜಾಮೀನು ಅರ್ಜಿ ವಜಾ ಗೊಂಡಿದೆ. ಈಗ ಮತ್ತೊಮ್ಮೆ ಹೈಕೋರ್ಟ್ ನಲ್ಲಿ ಜಾಮೀನು ಅರ್ಜಿ ಸಲ್ಲಿಸಲಾಗಿದೆ‌. ಆದರೆ ಈ ಬಾರಿ ಬೆನ್ನು ನೋವಿನ ಕಾರಣ ನೀಡಿ ಜಾಮೀನು ಅರ್ಜಿ ಸಲ್ಲಿಸಲಾಗಿದೆ. ನಿನ್ನೆ ಹೈಕೋರ್ಟ್ ನಲ್ಲಿ ವಿಚಾರಣೆ ನಡೆದಿದ್ದು, ಇಂದು (ಅಕ್ಟೋಬರ್ 29) ಆದೇಶ ಪ್ರಕಟ ಆಗಲಿದೆ.

ದರ್ಶನ್ ಗೆ ಆರೋಗ್ಯ ಸಮಸ್ಯೆ ಇದ್ದು, ಅವರಿಗೆ ತೀವ್ರ ಬೆನ್ನು ನೋವು ಕಾಡುತ್ತಿದೆ. ಅವರು ಶಸ್ತ್ರಚಿಕಿತ್ಸೆಗೆ ಒಳಗಾಗದೇ ಇದ್ದರೆ ಅವರ ಜೀವಕ್ಕೆ ಸಮಸ್ಯೆ ಎದುರಾಗಲಿದೆ. ಅವರ ಕಾಲುಗಳಿಗೆ ಪಾರ್ಶ್ವವಾಯು ತಗುಲಲಿದೆ. ಅವರ ಬೆನ್ನಿನ ಮೂಳೆ ಸವೆದಿದ್ದು, ಅಲ್ಲಿ ರಕ್ತ ಸಂಚಾರ ಆಗುತ್ತಿಲ್ಲ. ಶೀಘ್ರವೇ ಶಸ್ತ್ರ ಚಿಕಿತ್ಸೆ ಮಾಡದೇ ಹೋದರೆ ಅವರ ಸೊಂಟದ ಕೆಳಗಿನ ಭಾಗಕ್ಕೆ ಪಾರ್ಶ್ವವಾಯು ತಗುಲಲಿದೆ ಎಂದಿದ್ದಾರೆ.

ಇಂದು ಹೈಕೋರ್ಟ್ ನ್ಯಾಯಮೂರ್ತಿಗಳು ಪ್ರಕರಣದ ಬಗ್ಗೆ ಆದೇಶ ಹೊರಡಿಸಲಿದ್ದು, ಪ್ರಕರಣವನ್ನು ಹತ್ತಿರದಿಂದ ಗಮನಿಸುತ್ತಿರುವ 20 ವರ್ಷಗಳ ಅನುಭವವುಳ್ಳ ವಕೀಲ ನಾರಾಯಣಸ್ವಾಮಿ ಈ ಬಗ್ಗೆ ಸಮಸ್ತ ಜೊತೆ ಮಾತನಾಡಿದ್ದು, ‘ಇಂದು ದರ್ಶನ್ ಗೆ ಜಾಮೀನು ದೊರಕುವ ಸಾಧ್ಯತೆ ಹೆಚ್ಚಿದೆ’ ಎಂದಿದ್ದಾರೆ. ಆದರೆ ಜಾಮೀನಿಗೆ ಬಹಳ ಷರತ್ತುಗಳು ಇರಲಿದ್ದು, ಈ ಜಾಮೀನನ್ನು ಕೇವಲ ಶಸ್ತ್ರಚಿಕಿತ್ಸೆಗಾಗಿ ಮಾತ್ರವೇ ನೀಡುವ ಸಾಧ್ಯತೆ ಇದೆ ಎಂದಿದ್ದಾರೆ ವಕೀಲರು.

Bigg Boss: ಬಿಗ್​ಬಾಸ್​ನಿಂದ ಎಲಿಮಿನೇಟ್ ಆದ ಸ್ಪರ್ಧಿ ಯಾರು? ಇಲ್ಲಿದೆ ಉತ್ತರ

ಹಿಂದೆ ಸಹ ಈ ರೀತಿಯ ಹಲವು ಪ್ರಕರಣಗಳನ್ನು ನಾವು ನೋಡಿದ್ದೀವಿ. ಆ ಪ್ರಕರಣಗಳಲ್ಲಿ ಕೇವಲ ಚಿಕಿತ್ಸೆಗಾಗಿ ಮಾತ್ರವೇ ಜಾಮೀನು ನೀಡಲಾಗಿದೆ. ಅಂದರೆ ಮನೆಗೆ ಹೋಗುವಂತಿಲ್ಲ, ಬೇರೆ ವ್ಯಕ್ತಿಗಳ ಭೇಟಿಗೆ ಅವಕಾಶ ಇರುವುದಿಲ್ಲ, ಪೊಲೀಸರ ನಿಗಾ ಇರುತ್ತದೆ. ಹೀಗೆ, ಕೆಲವು ಕಠಿಣ ಷರತ್ತುಗಳನ್ನು ವಿಧಿಸಿ ಜಾಮೀನು ನೀಡಲಾಗುತ್ತದೆ. ದರ್ಶನ್ ಪ್ರಕರಣದಲ್ಲಿ ಹಾಗೆಯೇ ಆಗುವ ಸಾಧ್ಯತೆ ಇದೆ ಎಂದಿದ್ದಾರೆ ವಕೀಲ ನಾರಾಯಣಸ್ವಾಮಿ.

LEAVE A REPLY

Please enter your comment!
Please enter your name here