iPhone: ಆಪಲ್ ಫೋನ್ ಬಳಸುವವರು ಓದಲೇ ಬೇಕಾದ ಸುದ್ದಿ ಇದು

0
242
iphone

iPhone

ಆಪಲ್ ಐಫೋನ್, ವಿಶ್ವದಲ್ಲಿ ಅತಿ ಹೆಚ್ಚು ಮಾರಾಟವಾಗುವ ಹಾಗೂ ದುಬಾರಿ ಮೊತ್ತಕ್ಕೆ ಮಾರಾಟವಾಗುವ ಫೋನು. ಐಫೋನ್ ಖರೀದಿ ಮಾಡುವುದು ಇಂದಿಗೂ ಕೋಟ್ಯಂತರ ಯುವಕರ ಕನಸು. ಆದರೆ ಐಫೋನ್ ಅನ್ನು ಎಲ್ಲರೂ ಖರೀದಿಸಲಾಗದು ಏಕೆಂದರೆ ಅದರ ಬೆಲೆ ಬಹಳ ಹೆಚ್ಚು. ಐಫೋನ್ 16 ಬೆಲೆ 1 ಲಕ್ಷಕ್ಕೂ ಹೆಚ್ಚಿದೆ. ಮೊಬೈಲ್ ಗೆ ಇಷ್ಟು ದೊಡ್ಡ ಮೊತ್ತ ಕೊಡುವುದು ಮೂರ್ಖತನ ಎಂಬುದು ಹಲವರ ವಾದ. ಆದರೆ ಆಪಲ್ ಫೋನ್ ಖರೀದಿ ಮಾಡುವ ಅದೇ ಹಣದಲ್ಲಿ ಆಪಲ್ ಷೇರು ಖರೀದಿಸಿದ್ದರೆ ನಿಮ್ಮ ಬಳಿ ಈಗ ಎಷ್ಟು ಹಣ ಇರುತ್ತಿತ್ತು? ಇಲ್ಲಿದೆ ವಿವರ.

ಆಪಲ್ ಫೋನ್ ಅಥವಾ ಐಫೋನ್ ಮೊದಲ ಬಾರಿಗೆ ಭಾರತದಲ್ಲಿ ಬಿಡುಗಡೆ ಆದಾಗ ಅದರ ಬೆಲೆ 19 ಸಾವಿರ ರೂಪಾಯಿಗಳಿತ್ತು. ಆಗ ಆಪಲ್ ಷೇರಿನ ಬೆಲೆ ಕೇವಲ 175 ರೂಪಾಯಿಗಳಿತ್ತು. ಈಗ ಹೊಸ ಐಫೋನ್ ಬೆಲೆ 1.20 ಲಕ್ಷ ರೂಪಾಯಿ ಇದೆ. ಅದೇ ಆಪಲ್’ನ ಒಂದು ಷೇರಿನ ಬೆಲೆ 19,740 ರೂಪಾಯಿಗಳಿಗಿದೆ. ಐಫೋನಿನ ಬೆಲೆ ಐದು ಪಟ್ಟು ಹೆಚ್ಚಾಗಿದೆ, ಆದರೆ ಅದರ ಷೇರಿನ ಮೌಲ್ಯ 50 ಪಟ್ಟು ಹೆಚ್ಚಾಗಿದೆ. ಮೊದಲ ಐಫೋನ್ ಖರೀದಿ ಮಾಡಿದವರು, ಐಫೋನ್ ಬದಲು ಅದೇ 19,960 ರೂಪಾಯಿ ಹಣವನ್ನು ಆಪಲ್’ನ ಷೇರಿನ ಮೇಲೆ ಬಂಡವಾಳ ಹಾಕಿದ್ದರೆ ಈಗ ಅವರ ಬಳಿ 23 ಲಕ್ಷ ರೂಪಾಯಿಗಳಿರುತ್ತಿತ್ತು.

ಇನ್ನೊಂದು ಸನ್ನಿವೇಷ ನೋಡೋಣ. ಈಗ ಐಫೋನ್ 16 ಚಾಲ್ತಿಯಲ್ಲಿದೆ. ಇಲ್ಲಿಯವರೆ ಐಫೋನ್’ನ 16 ಮಾಡೆಲ್’ಗಳು ಬಿಡುಗಡೆ ಆಗಿವೆ. ಪ್ರತಿ ಬಾರಿ ಹೊಸ ಐಫೋನ್ ಬಂದಾಗಲೂ ಅದನ್ನು ಖರೀದಿ ಮಾಡುವ ದೊಡ್ಡ ವರ್ಗವೇ ಇದೆ. ಒಂದೊಮ್ಮೆ ಪ್ರತಿ ಬಾರಿ ಐಫೋನ್ ಬಿಡುಗಡೆ ಆದಾಗ ಐಫೋನ್ ಖರೀದಿ ಮಾಡುವ ಬದಲು ಅದೇ ಐಫೋನ್ ಬೆಲೆಯಲ್ಲಿ ಆಪಲ್’ನ ಷೇರು ಖರೀದಿ ಮಾಡಿದರೆ ನಿಮ್ಮ ಬಳಿ ಈಗ ಎಷ್ಟು ಹಣ ಇರುತ್ತಿತ್ತು ಗೊತ್ತೆ? ಬರೋಬ್ಬರಿ 8.20 ಕೋಟಿ ರೂಪಾಯಿಗಳಿರುತ್ತಿತ್ತು!

Businessman: ತನ್ನ ಬಳಿ ಕೆಲಸ ಮಾಡುತ್ತಿದ್ದ 400 ಜನರನ್ನು ಕೋಟ್ಯಧೀಶರನ್ನಾಗಿ ಮಾಡಿದ ಮಾಲೀಕ

ಈಗಲೂ ಕಾಲ ಮಿಂಚಿಲ್ಲ, ನಿಮ್ಮ ಸುತ್ತ-ಮುತ್ತ ಒಮ್ಮೆ ಗಮನಿಸಿ ಯಾವುದಕ್ಕೆ ಬೇಡಿಕೆ ಹೆಚ್ಚಿದೆ. ಯಾವ ಸೆಕ್ಟರ್ ವೇಗವಾಗಿ ಬೆಳವಣಿಗೆ ಹೊಂದುತ್ತಿದೆ? ಯಾವ ಸೆಕ್ಟರ್ ಬಹಳ ವರ್ಷಗಳ ಕಾಲ ಉಳಿಯಲಿದೆ ಚಿಂತಿಸಿ ಅದರ ಮೇಲೆ ಹೂಡಿಕೆ ಮಾಡಿ. ಸೋಲಾರ್, ಕ್ವಿಕ್ ಸರ್ವೀಸ್, ಬ್ಯಾಟರಿ, ಫ್ಯಾಷನ್, ಮೆಡಿಕಲ್ ಹೀಗೆ ಹಲವು ಕ್ಷೇತ್ರಗಳು ಸಿಗಬಹುದು. ಅಂಥಹಾ ಕ್ಷೇತ್ರಗಳ ಮೇಲೆ ಹೂಡಿಕೆ ಮಾಡಿ, ತಾಳ್ಮೆಯಿಂದ ಕಾಯಿರಿ.

LEAVE A REPLY

Please enter your comment!
Please enter your name here