Weekly Astrology: ನವೆಂಬರ್ ಎರಡನೇ ವಾರದಲ್ಲಿ ಮೂರು ರಾಶಿಯವರಿಗೆ ಅದೃಷ್ಟ

0
264
Weekly Astrology

Weekly Astrology

ಇದು ನವೆಂಬರ್ ತಿಂಗಳ ಎರಡನೇ ವಾರವಿದಾಗಿದೆ. ೧೦-೧೧-೨೦೨೪ರಿಂದ ೧೬-೧೧-೨೦೨೪ರವರೆಗೆ ಇರಲಿದೆ. ಕುಜನು ನೀಚ ಹಾಗೂ ಸೂರ್ಯನು ನಿಚಸ್ಥಾನವನ್ನು ಬಿಟ್ಟು ಮುಂದಕ್ಕೆ ಸಾಗಿದ್ದಾನೆ.‌ ತಡೆಯಾಗಿದ್ದ ಕಾರ್ಯಗಳು ಒಂದೊಂದಾಗಿಯೇ ಆರಂಭವಾಗಲಿದೆ. ಸೂರ್ಯಾರಾಧನೆಯನ್ನು ಮಾಡಿದರೆ ಎಷ್ಟೋ ಕಾರ್ಯಗಳಿಗೆ ಚಾಲನೆ ಸಿಗಲಿದೆ.

ಮೇಷ ರಾಶಿ

ಮೊದಲ ರಾಶಿಯವರಿಗೆ ಈ ವಾರ ಒಳಿತಾಗಲಿದೆ. ಈ ವಾರ ಮೇಷ ರಾಶಿಯವರಿಗೆ ಅದೃಷ್ಟವಿದೆ. ಮಾಡಿದ ಶ್ರಮಕ್ಕೆ ಪ್ರತಿಫಲ ಸಿಗಲಿದೆ. ಹಣ ವ್ಯಯವಾದರೂ ಲಾಭ ಸಹ ಇರಲಿದೆ. ಮನೆಯಲ್ಲಿ ಸಂತೋಷ ಇರಲಿದೆ. ವೃತ್ತಿಯಲ್ಲಿ ಮೇಲ್ದರ್ಜೆಗೆ ಏರಲಿದೆ. ಬೇರೆಯವರ ಮಾತಿಗೆ ತಲೆಕೆಡಿಸಿಕೊಳ್ಳಬೇಡಿ. ಒಳ್ಳೆಯ ಸುದ್ದಿಯೊಂದು ಬರಲಿದೆ. ದೇವರ ಆಶೀರ್ವಾದ ಪಡೆಯಿರಿ.

ವೃಷಭ ರಾಶಿ

ವೃಷಭ ರಾಶಿಗೆ ಮಿಶ್ರ ಪ್ರತಿಫಲ ಸಿಗಲಿದೆ. ಸಂಗಾತಿಯಿಂದ ಶುಭ ವಾರ್ತೆ ಸಿಗಲಿದೆ. ಬಂಧುಗಳೊಟ್ಟಿಗೆ ಸಂಬಂಧ ಸರಿ ಹೋಗಲಿದೆ. ಅನಾರೋಗ್ಯ ಕಾಡಲಿದೆ. ಕಾರ್ಯಕ್ರಮಗಳಲ್ಲಿ ಭಾಗಿ ಆಗುವಿರಿ, ದೊಡ್ಡವರ ಗೆಳೆತನ ಸಿಗಲಿದೆ. ಯಾರೊಂದಿಗಾದರೂ ಮಾತನಾಡುವ ಬಯಕೆ ಆಗುವುದು. ಆಪ್ತರೊಟ್ಟಿಗೆ ಜಗಳ ಆಗಲಿದೆ.

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಈ ವಾರ ಅಷ್ಟು ಶುಭವಿಲ್ಲ. ಅವರಿಗೆ ಮಾನಸಿಕ ಕ್ಷೋಭೆ ಹೆಚ್ಚಾಗಲಿದೆ. ಮಾನಸಿಕ ಕೆಲವು ಬೇಸರಗಳು ಕಾಡಲಿವೆ, ಸೋತ ಅನುಭವ ಆಗಲಿದೆ. ಆದರೆ ಧೃತಿಗೆಡಬೇಡಿ. ಕುಟುಂಬದಲ್ಲಿ ಕೆಲ ಸಮಸ್ಯೆಗಳು ಇರಲಿವೆ, ನಿಮ್ಮ ಕೆಲಸ ಮುಂದುವರೆಸಿ, ಕೆಲಸ ಬಿಡುವ ಮನಸ್ಸಾಗುತ್ತದೆ ಆದರೆ ಈಗಲೇ ಬೇಡ. ಖರ್ಚು ವೆಚ್ಚ ಹೆಚ್ಚಾಗಲಿದೆ. ಉಳಿತಾಯ ಕಷ್ಟವಾಗಲಿದೆ. ಗೆಳೆಯರೊಟ್ಟಿಗೆ ಮುನಿಸು ಮೂಡಲಿದೆ. ದೇವರ ಅನುಗ್ರಹ ಪಡೆದುಕೊಳ್ಳಿ.

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯವರಿಗೆ ಈ ವಾರ ಶುಭವಿದೆ. ಹೊಸ ಹಣಕಾಸಿನ ಮೂಲ ಸಿಗಲಿದೆ. ಆರೋಗ್ಯದ ಕಡೆಗೆ ಗಮನ ಹರಿಸಿ, ಸಾಲ ಕೊಡುವ ಮುನ್ನ ಎಚ್ಚರ ಇರಲಿ. ಮನೆಯ ವಾತಾವರಣ ತಿಳಿಯಾಗಲಿದೆ. ಕೆಲಸದ ಸ್ಥಳದಲ್ಲಿ ಗೌರವ ಸಿಗಲಿದೆ. ದೂರ ಪ್ರಯಾಣದ ಅವಕಾಶ ಸಿಗಲಿದೆ. ತುಸು ಆಯಾಸವೂ ಆಗಲಿದೆ.

ಸಿಂಹ ರಾಶಿ

ಸಿಂಹ ರಾಶಿವರಿಗೆ ಈ ವಾರ ಶುಭ ಸಮಯ ಇದೆ. ಈ ವಾರ ಜಯ ನಿಮ್ಮದಾಗಲಿದೆ. ಅವಿವಾಹಿತರಿಗೆ ಶುಭ ಸುದ್ದಿ ಬರಲಿದೆ. ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯುವಿರಿ. ಅನ್ಯರೊಟ್ಟಿಗೆ ಅನವಶ್ಯಕ ಚರ್ಚೆ ಬೇಡ, ವ್ಯಾಪಾರಿಗಳಿಗೆ ತುಸು ನಷ್ಟ ಆಗಬಹುದು ಎಚ್ಚರಿಕೆಯಿಂದ ವ್ಯವಹರಿಸಿ. ಅನುಭವಿಗಳ ಮಾರ್ಗದರ್ಶನ ಪಡೆಯಿರಿ.

ಕನ್ಯಾ ರಾಶಿ

ಕನ್ಯಾ ರಾಶಿಗೆ ಈ ವಾರ ಅಶುಭ ಫಲವಿದೆ. ಮನೆಯಲ್ಲಿ ಕಲಹಗಳು ನಡೆಯಲಿದೆ. ಮಾಡಿದ ಕೆಲಸಕ್ಕೆ ಪ್ರತಿಫಲ ಸಿಗದು, ಬುದ್ಧಿಹೀನ ಕಾರ್ಯ ನಿಮ್ಮಿಂದ ಆಗಿಬಿಡಲಿದೆ. ಯಾವುದೇ ಕೆಲಸ ಮಾಡುವ ಮುನ್ನ ಯೋಚಿಸಿ ಮಾಡಿ, ನಿಮ್ಮಿಂದ ಬೇರೆಯವರು ನಿಂದನೆ ಮಾಡಿಸಿಕೊಳ್ಳುವುರು. ನಿಮ್ಮ ಪ್ರಗತಿ ನಿಂತಂತೆ ಅನಿಸುತ್ತದೆ, ಮಾನಸಿಕ ದ್ವಂದ್ವ ನಿರ್ಮಾಣ ಆಗಲಿದೆ. ದೇವರ ಧ್ಯಾನ ಮಾಡಿ.

ತುಲಾ ರಾಶಿ

ತುಲಾ ರಾಶಿಯವರಿಗೆ ಈ ವಾರ ನಿಮ್ಮ ಕಾರ್ಯದಿಂದ ನಿಮಗೆ ಸಮಸ್ಯೆ ಆಗಲಿದೆ. ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ನಿಮ್ಮ ಕೋಪ ನಿಮಗೆ ಶತ್ರು ಆಗಲಿದೆ. ಮಕ್ಕಳ ಬಗ್ಗೆ ಗಮನ ಇರಲಿ, ಹೊಸ ಉದ್ಯಮ ಆರಂಭಿಸುವ ಮನಸ್ಸಾಗಲಿದೆ. ಪಾಲುದಾರರನ್ನು ಎಚ್ಚರಿಕೆಯಿಂದ ಆರಿಸಿ. ಈ ವಾರ ನಿಮಗೆ ಕೆಲ ಹೊಸಬರ ಪರಿಚಯ ಆಗಲಿದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಈ ವಾರ ಸವಾಲಿನದ್ದು, ಕೆಲಸ ಹೆಚ್ಚಾಗಲಿದೆ. ನಿಮಗೆ ದೊಡ್ಡವರ ಪರಿಚಯ ಆಗಲಿದೆ. ಕೆಲವರ ಪ್ರಭಾವಕ್ಕೆ ನೀವು ಸಿಲುಕಲಿದ್ದೀರಿ. ಯಾರೊಂದಿಗೂ ಕೆಟ್ಟದಾಗಿ ನಡೆದುಕೊಳ್ಳಬೇಡಿ, ಅದು ನಿಮಗೆ ಸಮಸ್ಯೆ ತರಬಹುದು. ನಿಮ್ಮ ಕೆಲಸಕ್ಕೆ ಅಡ್ಡಿ ಮಾಡುವವರಿಗೆ ಸಮಸ್ಯೆ ಆಗಲಿದೆ. ಕುಟುಂಬದೊಟ್ಟಿಗೆ ಸಮಯ ಕಳೆಯಲಿದ್ದೀರಿ, ಸಣ್ಣ ಅನಾರೋಗ್ಯವೂ ಕಾಡಬಹುದು.

ಧನು ರಾಶಿ

ಧನು ರಾಶಿ ಅವರಿಗೆ ಈ ವಾರ ಸಾಧಾರಣವಾಗಿರಲಿದೆ. ಖರ್ಚು ಹೆಚ್ಚಾದ ಅನುಭವ ಆಗಲಿದೆ. ಮೂರನೇಯವರ ಸಮಸ್ಯೆಗೆ ತಲೆ ಹಾಕಲು ಹೋಗಬೇಡಿ. ಕೆಲ ಸಮಸ್ಯೆಗಳು ಪರಿಹಾರ ಆಗಲಿದೆ, ಆತ್ಮಸ್ಥೈರ್ಯ ಮೂಡಲಿದೆ. ಕೆಲ ಸಮಸ್ಯೆಗಳು ನಿಮ್ಮೆದುರು ಬರಲಿವೆ. ಮನಸ್ಸಿನಲ್ಲಿ ಗೊಂದಲ ಮೂಡಲಿದೆ.

ಮಕರ ರಾಶಿ

ಮಕರ ರಾಶಿಯವರು ಈ ವಾರ ತುಸು ಎಚ್ಚರಿಕೆಯಿಂದ ಇರಬೇಕು. ಹಲವು ಸಮಸ್ಯೆಗಳು ನಿಮ್ಮನ್ನು ಈ ವಾರ ಕಾಡಬಹುದು, ಆದರೆ ಎಲ್ಲವೂ ನಿವಾರಣೆ ಆಗಲಿವೆ. ನಿಮ್ಮ ಶಕ್ತಿ, ಪ್ರತಿಭೆ ತೋರಿಸುವ ಅವಕಾಶ ಸಿಗಲಿದೆ. ಕೆಲವರ ಸಲಹೆಯಿಂದ ಒಳ್ಳೆಯದಾಗಲಿದೆ. ಕೆಲವರ ಮೇಲೆ ಪ್ರೀತಿ ಮೂಡಲಿದೆ. ಈ ವಾರ ಎಚ್ಚರಿಕೆಯಿಂದ ಪ್ರಯಾಣ ಮಾಡಿ.

Weekly Astrology: ನವೆಂಬರ್ ಮೊದಲ ವಾರದಲ್ಲಿ ಮೂರು ರಾಶಿಗಳಿಗೆ ಅದೃಷ್ಟ

ಕುಂಭ ರಾಶಿ

ಕುಂಭ ರಾಶಿಯವರಿಗೆ ಈ ವಾರ ಸಾಧಾರಣವಾಗಿದೆ. ಈ ವಾರ ಹಣ ಹರಿದು ಬರಲಿದೆ, ಎಚ್ಚರಿಕೆಯಿಂದ ಹೂಡಿಕೆ ಮಾಡಿ. ಹೋಯಿತೆಂದುಕೊಂಡ ಹಣ ಮರಳಿ ಬರಲಿದೆ. ನಿಮ್ಮ ಹಿರಿಯ ಸಹೋದ್ಯೋಗಿಯಿಂದ ಸಹಾಯ ಸಿಗಲಿದೆ. ವ್ಯವಹಾರಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿ. ಗಣ್ಯರ ಸಹವಾಸ ಮಾಡಿ, ಒಳ್ಳೆಯ ಜನರನ್ನು ಗುರುತಿಸಿ, ಕೆಟ್ಟವರ ಸಹವಾಸದಿಂದ ನಷ್ಟ ಆಗುವ ಸಾಧ್ಯತೆ ಇದೆ.

ಮೀನ ರಾಶಿ

ಮೀನ ರಾಶಿಯವರಿಗೆ ಈ ವಾರ ಮಿಶ್ರಫಲ ಇದೆ. ಆತುರದ ನಿರ್ಧಾರಗಳು ಈ ವಾರ ಬೇಡ. ಕೆಟ್ಟ ಚಟಗಳನ್ನು ಆದಷ್ಟು ಬೇಗ ಬಿಡಲೇ ಬೇಕು ನೀವು. ಕೆಲಸಗಳನ್ನು ಮುಂದೂಡಬೇಡಿ. ವ್ಯಾಪಾರಿಗಳಿಗೆ ಲಾಭದಾಯಕ ವಾರ ಇದು. ವಿದ್ಯಾರ್ಥಿಗಳಿಗೆ ಸಹ ಒಳ್ಳೆಯ ಸಮಯ. ಕೆಲಸದ ಸ್ಥಳದಲ್ಲಿ ಎಚ್ಚರಿಕೆಯಿಂದ ಇರಿ.

LEAVE A REPLY

Please enter your comment!
Please enter your name here