Swiggy
ಭಾರತದ ಜನಪ್ರಿಯ ಫುಡ್ ಡೆಲಿವರಿ ಸಂಸ್ಥೆಗಳಲ್ಲಿ ಒಂದಾದ ಸ್ವಿಗ್ಗಿಯ ಕೃಪೆಯಿಂದ ಬರೋಬ್ಬರಿ 500 ಮಂದಿ ಒಂದೇ ಬಾರಿಗೆ ಕೋಟ್ಯಧೀಶರಾಗಲಿದ್ದಾರೆ. ಸ್ವಿಗ್ಗಿ ಒಂದೇ ಬಾರಿಗೆ ಬರೋಬ್ಬರಿ 5000 ಜನರಿಗೆ 9000 ಕೋಟಿಯನ್ನು ಹಂಚಲಿದೆ. ಭಾರತದ ಇತೊಹಾಸದಲ್ಲಿ ಕಂಪೆನಿಯೊಂದು ಒಂದೇ ಬಾರಿಗೆ ಇಷ್ಟಿ ದೊಡ್ಡ ಮೊತ್ತವನ್ನು ಇಷ್ಟು ಸಂಖ್ಯೆಯ ಜನರಿಗೆ ಸಿಗುವಂತೆ ಮಾಡಿದ್ದು ಇದು ಮೊದಲು ಎನ್ನಲಾಗುತ್ತಿದೆ. ಉದ್ಯಮದ ದೃಷ್ಟಿಯಿಂದ ಅಪರೂಪದ ವಿದ್ಯಮಾನವಿದು.
ಬಹುತೇಕರಿಗೆ ಗೊತ್ತಿರುವಂತೆ ಇತ್ತೀಚೆಗಷ್ಟೆ ಸ್ವಿಗ್ಗಿ ಸ್ಟಾಕ್ ಮಾರ್ಕೆಟ್’ಗೆ ಎಂಟ್ರಿ ಕೊಟ್ಟಿದೆ. ನಾಳೆ ಅಂದರೆ ನವೆಂಬರ್ 13 ರಂದು ಸ್ವಿಗ್ಗಿಯ ಷೇರು ಸ್ಟಾಕ್ ಎಕ್ಸ್ ಚೇಂಜ್’ನಲ್ಲಿ ಲಿಸ್ಟ್ ಆಗಲಿದೆ. ಈಗಾಗಲೇ ಸ್ವಿಗ್ಗಿಯ ಐಪಿಓ ಓವರ್ ಸಬ್’ಸ್ಕ್ರೈಬ್ ಆಗಿದ್ದು ಇದರಿಂದಾಗಿ ಮೂಲ ಬೆಲೆಗಿಂತಲೂ ಹೆಚ್ಚಿನ ಮೊತ್ತಕ್ಕೆ ಸ್ಟಾಕ್ ಲಿಸ್ಟ್ ಆಗುವ ಸಾಧ್ಯತೆ ಬಹಳ ಹೆಚ್ಚಿದೆ. ನಾಳೆ ಸ್ವಿಗ್ಗಿಯ ಐಪಿಒ ಸ್ಟಾಕ್ ಲಿಸ್ಟ್ ಆದ ಕೂಡಲೇ ಬರೋಬ್ಬರಿ 500 ಮಂದಿ ಕೋಟ್ಯಧೀಶರಾಗಲಿದ್ದಾರೆ.
ಇದು ಹೇಗೆ ಸಾಧ್ಯ?
ಸ್ವಿಗ್ಗಿ ಮೊದಲಿನಿಂದಲೂ ತನ್ನ ಸಿಬ್ಬಂದಿಗೆ ಇಸಾಪ್ಸ್ ಅಂದರೆ ಕಂಪೆನಿಯ ಷೇರನ್ನು ಬೋನಸ್ ಹಾಗೂ ವಾರ್ಷಿಕ ಹೈಕ್ ರೂಪದಲ್ಲಿ ನೀಡುತ್ತಾ ಬಂದಿತ್ತು. ಕಂಪೆನಿಯಲ್ಲಿ ವರ್ಷಗಳಿಂದ ಕೆಲಸ ಮಾಡಿದ ಸುಮಾರು 5000 ಹಾಲಿ ಮತ್ತು ಮಾಜಿ ಉದ್ಯೋಗಿಗಳಿಗೆ ಈಗ ಇಸಾಪ್ಸ್’ನ ಲಾಭ ಸಿಗಲಿದ್ದು, ಅವರ ಬಳಿ ಈ ಮೊದಲೇ ಇದ್ದ ಷೇರುಗಳ ಮೌಲ್ಯ ಈಗ ಗಗನಕ್ಕೇರಲಿವೆ.
ಸ್ವಿಗ್ಗಿಯ 9000 ಕೋಟಿ ರೂಪಾಯಿ ಮೌಲ್ಯದ ಷೇರುಗಳು ಸಂಸ್ಥೆಯ 5000 ಸಿಬ್ಬಂದಿ ಬಳಿ ಇವೆ. ಅದರಲ್ಲಿ 500 ಕ್ಕೂ ಹೆಚ್ಚು ಸಿಬ್ಬಂದಿ ಬಳಿ ಒಂದು ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಷೇರುಗಳಿವೆ. ಕೆಲವರ ಬಳಿಯಂತೂ ಸಾವಿರ ಕೋಟಿ ಮೌಲ್ಯದ ಷೇರುಗಳಿವೆ. ಸ್ವಿಗ್ಗಿಯು ಐಪಿಓ ರಿಲೀಸ್ ಮಾಡುವ ಕೆಲ ತಿಂಗಳ ಮುಂಚೆಯೇ ಸ್ವಿಗ್ಗಿಯ ಸಿಇಓ ಸೇರಿದಂತೆ ಕೆಲವು ಮೇಲ್ಸ್ತರದ ಉದ್ಯೋಗಿಗಳು ಕಂಪೆನಿಯ ಇಸಾಪ್’ಗಳನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದರು. ಈ ಬಗ್ಗೆ ಈ ಹಿಂದೆಯೇ ಸುದ್ದಿ ಆಗಿತ್ತು.
Zomato: ಬೆಂಗಳೂರಿಗ ಕೊಟ್ಟ ಸಲಹೆ ಮೆಚ್ಚಿ, ಕೆಲಸ ಆಫರ್ ಮಾಡಿದ ಜೊಮ್ಯಾಟೊ ಮಾಲೀಕ
ಫ್ಲಿಪ್’ಕಾರ್ಟ್ ಸಹ ಈ ಹಿಂದೆ ಇದೇ ರೀತಿ ತನ್ನ ಸಂಸ್ಥೆಯ ಸಿಬ್ಬಂದಿಯನ್ನು ಒಂದೇ ಬಾರಿಗೆ ಶ್ರೀಮಂತರನ್ನಾಗಿಸಿತ್ತು. ಸಂಸ್ಥೆಯ ಷೇರುಗಳನ್ನು ಮುಂಚಿತವಾಗಿ ಬೋನಸ್ ರೂಪದಲ್ಲಿ ಹಂಚಿಕೆ ಮಾಡಿತ್ತು. ಸುಮಾರು 12500 ಕೋಟಿ ರೂಪಾಯಿ ಹಣ ಫ್ಲಿಪ್’ಕಾರ್ಟ್ ಸಿಬ್ಬಂದಿಗೆ ದೊರಕಿತ್ತು.