Bhushan Kumar: ಹಣ್ಣು ಮಾರುತ್ತಿದ್ದ ಈ ಕುಟುಂಬ ಇಂದು ಬಾಲಿವುಡ್’ನ ಅತ್ಯಂತ ಶ್ರೀಮಂತ ಕುಟುಂಬ

0
81
Bhushan Kumar

Bhushan Kumar

ಬಾಲಿವುಡ್’ನ ಶ್ರೀಮಂತರು ಯಾರೆಂದರೆ ಮೊದಲಿಗೆ ನೆನಪಿಗೆ ಬರುವುದು ಶಾರುಖ್ ಖಾನ್, ಸಲ್ಮಾನ್ ಖಾನ್ ಅಥವಾ ಕಪೂರ್ ಕುಟುಂಬ. ಇವರು ಶ್ರೀಮಂತರು ಹೌದು, ಆದರೆ ಇಡೀ ಬಾಲಿವುಡ್’ನ ಅತ್ಯಂತ ಶ್ರೀಮಂತ ಕುಟುಂಬ ಖಾನ್ ಅಥವಾ ಕಪೂರ್ ಅಥವಾ ರೋಷನ್ ಕುಟುಂಬ ಅಲ್ಲ ಬದಲಿಗೆ, ಹೆಚ್ಚು ಜನರಿಗೆ ಹೆಸರೇ ಗೊತ್ತಿಲ್ಲದ ಕುಮಾರ್ ಕುಟುಂಬ. ಒಂದು ಕಾಲದಲ್ಲಿ ಜೀವನ ನಿರ್ವಹಣೆ ಮಾಡುತ್ತಿದ್ದ ಈ ಕುಟುಂಬ ಈಗ ಇಡೀ ಬಾಲಿವುಡ್’ನ ಶ್ರೀಮಂತ ಕುಟುಂಬ.

2024 ರ ಹೂರನ್ ಸಂಸ್ಥೆ ವರದಿ ಪ್ರಕಾರ ಕುಮಾರ್ ಕುಟುಂಬದ ಒಟ್ಟು ಆಸ್ತಿ‌ 10 ಸಾವಿರ ಕೋಟಿಗೂ ಹೆಚ್ಚು. ಕುಮಾರ್ ಕುಟುಂಬದ ಹೆಸರು ಹೆಚ್ಚು ಸಿನಿಮಾ ಪ್ರೇಮಿಗಳು ಕೇಳಿರಲಿಕ್ಕಿಲ್ಲ ಆದರೆ ಅವರ ಸಂಸ್ಥೆಯ ಹೆಸರು ಕೇಳದ ಸಿನಿಮಾ ಹಾಗೂ ಸಂಗೀತ ಪ್ರೇಮಿಗಳು ಬಹಳ ವಿರಳ. ಕುಮಾರ್ ಕುಟುಂಬದ ಆಡಿಯೋ ಹಾಗೂ ನಿರ್ಮಾಣ ಸಂಸ್ಥೆಯ ಹೆಸರು ಟಿ ಸೀರೀಸ್.

ದಶಕಗಳಿಂದಲೂ ಉದ್ಯಮದಲ್ಲಿರುವ ಟಿ ಸೀರೀಸ್ 70-80 ರ ದಶಕದಲ್ಲಿ ಭಾರತದ ಟಾಪ್ ಮ್ಯೂಸಿಕ್ ಆಡಿಯೋ ಸಂಸ್ಥೆ ಆಗಿತ್ತು. ಸಿನಿಮಾ ನಿರ್ಮಾಣವನ್ನೂ ಆರಂಭಿಸಿ ಹಿಂದಿಯ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದೆ. ಈಗಲೂ ಸಹ ಹಲವು ಅದ್ಭುತ ಸಿನಿಮಾಗಳ ನಿರ್ಮಾಣ ಮಾಡುತ್ತಿದೆ. ಕುಮಾರ್ ಕುಟುಂಬದ ಮೊದಲ ತಲೆಮಾರು, ಅಂದರೆ ಗುಲ್ಷಣ್ ಕುಮಾರ್ ದೆಹಲಿಯಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದರು. ಆ ನಂತರ ಅವರು ಕ್ಯಾಸೆಟ್ ಅಂಗಡಿಯೊಂದನ್ನು ತೆರೆದರು. ಅದಾದ ಬಳಿಕ ಸೂಪರ್ ಕ್ಯಾಸೆಟ್ ಪ್ರಾರಂಭ ಮಾಡಿದರು. ಹಾಗೆಯೇ ಬೆಳೆಯುತ್ತಾ ಸಾಗಿ ಮುಂಬೈಗೆ ಸ್ಥಳಾಂತರಗೊಂಡು ಆಡಿಯೋ ಕಂಪೆನಿ ಆರಂಭ ಮಾಡಿದರು.

Pavitra Gowda: ಪವಿತ್ರಾ ಗೌಡ ಜಾಮೀನಿಗೆ ಅಡ್ಡಗಾಲು ಹಾಕಲಾಗುತ್ತಿದೆಯೇ?

ಆದರೆ ಮುಂಬೈನಲ್ಲಿ ಭೂಗತ ಪಾತಕಿಗಳ ಹಾವಳಿ ಹೆಚ್ಚಾಗಿ, ಗುಲ್ಷಣ್ ಕುಮಾರ್ ಅವರನ್ನು ದಾವೂದ್’ನ ಗುಂಪಿನವರು ಶೂಟ್ ಮಾಡಿ ಕೊಂದು ಬಿಟ್ಟರು. ಆದರೆ ಅವರ ಪುತ್ರ ಭೂಷಣ್ ಕುಮಾರ್ ಹಾಗೂ ಅವರ ಸಹೋದರಿಯರು ಉದ್ಯಮ ಮುಂದುವರೆಸಿದರು. ಟಿ ಸೀರೀಸ್ ಸಾವಿರಾರು ಸಿನಿಮಾಗಳ ಆಡಿಯೋ ಹಕ್ಕು ಹೊಂದಿದೆ. ಹಲವಾರು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿರ್ಮಾಣ ಮಾಡಿದೆ. ಭಾರತದ ಈ ವರೆಗಿನ ಅತಿದೊಡ್ಡ ಬಜೆಟ್ ಸಿನಿಮಾ ಎನಿಸಿಕೊಂಡಿರುವ ಪ್ರಭಾಸ್ ನಟನೆಯ ‘ಆದಿಪುರುಷ್’ ಅನ್ನು ನಿರ್ಮಿಸಿದ್ದು ಇದೇ ಭೂಷಣ್ ಕುಮಾರ್. ಈಗಲೂ ಒಟ್ಟಿಗೆ ನಾಲ್ಕು ಹಿಂದಿ ಒಂದು ತಮಿಳು ಸಿನಿಮಾ ಮೇಲೆ ಭೂಷಣ್ ಕುಮಾರ್ ಬಂಡವಾಳ ಹೂಡಿದ್ದಾರೆ.

LEAVE A REPLY

Please enter your comment!
Please enter your name here