MS Dhoni
ಮಹೇಂದ್ರ ಸಿಂಗ್ ಧೋನಿ ಭಾರತ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಹಾಲಿ ಸಿಎಸ್’ಕೆ ತಂಡದ ಆಟಗಾರ. ನಿವೃತ್ತಿಯ ಬಳಿಕ ಯಾವುದೇ ವಿವಾದಗಳಿಂದ ದೂರ ಉಳಿದು ಆರಾಮದ ಜೀವನ ನಡೆಸುತ್ತಿದ್ದಾರೆ ಧೋನಿ. ಆದರೆ ಈಗ ಅವರ ವಿರುದ್ಧ ದೂರು ದಾಖಲಾಗಿದೆ. ಧೋನಿಯ ಮಾಜಿ ಪಾಲುದಾರನೇ ಈಗ ಧೋನಿ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಜಾರ್ಖಂಡ್ ನ್ಯಾಯಾಲಯ ಧೋನಿಗೆ ನೋಟೀಸ್ ಸಹ ನೀಡಿದೆ.
ಮಹೇಂದ್ರ ಸಿಂಗ್ ಧೋನಿ ಜೊತೆಗೆ ಪಾಲುದಾರರಾಗಿದ್ದ ಮಿಹಿರ್ ದಿವಾಕರ್ ಹಾಗೂ ಸೌಮ್ಯಾ ದಾಸ್ ಅವರುಗಳು ಧೋನಿ ವಿರುದ್ಧ ದೂರು ನೀಡಿದ್ದಾರೆ. ದೂರಿನ ವಿಚಾರಣೆ ನಡೆಸಿದ ಜಾರ್ಖಂಡ್ ಹೈಕೋರ್ಟ್ ಧೋನಿಗೆ ನೊಟೀಸ್ ನೀಡಿದ್ದು, ನಿಗದಿತ ಸಮಯದ ಒಳಗೆ ಉತ್ತರ ನೀಡುವಂತೆ ಸೂಚಿಸಿದೆ. ಅಷ್ಟಕ್ಕೂ ಮಾಜಿ ಪಾಲುದಾರರು, ಧೋನಿ ವಿರುದ್ಧ ದೂರು ನೀಡಲು ಕಾರಣ ಏನು?
ಅರ್ಕ ಸ್ಪೋರ್ಟ್ಸ್ ಆಂಡ್ ಮ್ಯಾನೇಜ್’ಮೆಂಟ್ ಸಂಸ್ಥೆಯು ಧೋನಿ ಹೆಸರಿನಲ್ಲಿ ಕ್ರಿಕೆಟ್ ಅಕಾಡೆಮಿ ತೆರೆಯಲು ಒಪ್ಪಂದ ಮಾಡಿಕೊಂಡಿತ್ತು. ಆದರೆ ಇದೇ ವರ್ಷ ಜನವರಿ ತಿಂಗಳಲ್ಲಿ ಧೋನಿ, ರಾಂಚಿಯಲ್ಲಿ ಮಿಹಿರ್ ಹಾಗೂ ಸೌಮ್ಯಾ ದಾಸ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು. 2021 ರಲ್ಲಿ ತಮ್ಮ ಒಪ್ಪಂದ ಮುಗಿದಿದ್ದರೂ ಸಹ ಈ ಇಬ್ಬರು ತನ್ನ ಅಂದರೆ ಧೋನಿ ಹೆಸರು ಬಳಸಿಕೊಂಡು ಅಕಾಡೆಮಿ ತೆರೆಯಲು ಮುಂದಾಗಿದ್ದು, ಇದರಿಂದ ತಮಗೆ 15 ಕೋಟಿ ನಷ್ಟವಾಗಿದೆ ಎಂದು ಧೋನಿ ಆರೋಪ ಮಾಡಿದ್ದರು. ಮಿಹಿರ್ ಹಾಗೂ ಸೌಮ್ಯಾ ದಾಸ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿತ್ತು.
Australia Cricket: ಆಸ್ಟ್ರೇಲಿಯಾ ಕ್ರಿಕೆಟ್ಟಿಗರಿಗೆ ವಿರಾಟ್ ಕೊಹ್ಲಿಗಿಂತ ಈ ಆಟಗಾರನ ಕಂಡರೆ ಭಯ ಹೆಚ್ಚು
ಇದಕ್ಕೆ ಪ್ರತಿಯಾಗಿ ಜಾರ್ಖಂಡ್ ಹೈಕೋರ್ಟ್ ಮೊರೆ ಹೋದ ಮಿಹಿರ್ ಹಾಗೂ ಸೌಮ್ಯಾ ದಾಸ್, ಧೋನಿ ವಿರುದ್ಧ ಒಪ್ಪಂದದ ಉಲ್ಲಂಘನೆ ದೂರು ದಾಖಲಿಸಿದ್ದಲ್ಲದೆ, ತಮ್ಮ ವಿರುದ್ಧ ಕ್ರಿಮಿನಲ್ ದಾಖಲೆ ಮಾಡಿದ್ದನ್ನು ಸಹ ಪ್ರಶ್ನೆ ಮಾಡಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಾಲಯ ಧೋನಿಗೆ ನೊಟೀಸ್ ನೀಡಿದ್ದು ಆರೋಪಗಳಿಗೆ ಉತ್ತರ ನೀಡುವಂತೆ ಸೂಚಿಸಿದೆ.