Share Market: ಕರಡಿ ಆಟ: ಎರಡು ದಿನದಲ್ಲಿ‌ 13 ಲಕ್ಷ ಕೋಟಿ ಕಳೆದುಕೊಂಡ ಹೂಡಿಕೆದಾರರು

0
213
Share Market

Share Market

ಷೇರು ಮಾರುಕಟ್ಟೆಯಲ್ಲಿ ಮತ್ತೆ ಕರಡಿ ಆಟ ಶುರುವಾಗಿದೆ‌. ಸತತವಾಗಿ ಷೇರು ಸೂಚ್ಯಂಕ ಕುಸಿಯುತ್ತಲೇ ಇದೆ. ಕಳೆದ ಎರಡು ದಿನದಲ್ಲಿ ಅಂದರೆ ಗುರುವಾರ ಹಾಗೂ ಬುಧವಾರ ಮಾತ್ರವೇ ಹೂಡಿಕೆದಾರರು ಬರೋಬ್ಬರಿ 13 ಲಕ್ಷ ಕೋಟಿ ಕಳೆದುಕೊಂಡಿದ್ದಾರೆ. ಮಾರುಕಟ್ಟೆ ಇನ್ನೂ ಕುಸಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ ಈ ಬೆಳವಣಿಗೆ ಹೊಸ ಹೂಡಿಕೆದಾರರಿಗೆ ಹೊಸ ಅವಕಾಶ ಸೃಷ್ಟಿಸಿಕೊಟ್ಟಿದೆ.

ಅಸಲಿಗೆ ಕಳೆದ ಎರಡು ವಾರದಿಂದಲೂ ಷೇರು ಮಾರುಕಟ್ಟೆ ಕುಸಿಯುತ್ತಲೇ ಸಾಗಿದೆ. ತಿಂಗಳ ಹಿಂದೆ 25000 ಮುಟ್ಟಿದ್ದ ನಿಫ್ಟಿ ಗುರುವಾರದ ಅಂತ್ಯಕ್ಕೆ 23500 ಕ್ಕೆ ತಲುಪಿದೆ. ಕೇವಲ ಒಂದು ತಿಂಗಳಲ್ಲಿ 1500 ಅಂಕಗಳು ಕುಸಿದಿವೆ. ಆ ಮೂಲಕ ಹೂಡಿಕೆದಾರರ ಸುಮಾರು ಲಕ್ಷ ಕೋಟಿ ಹಣ ಕರಗಿ ಹೋಗಿದೆ. ಈ‌ ಸತತ ಕುಸಿತಕ್ಕೆ ನಾನಾ ಕಾರಣಗಳನ್ನು ನೀಡಲಾಗುತ್ತಿದೆ. ಅಲ್ಲದೆ, ಈ ಕುಸಿತ ಇನ್ನೂ ಕೆಲ ದಿನ ಹೀಗೆಯೇ ಇರಲಿದೆ ಎನ್ನಲಾಗುತ್ತಿದೆ.

ಹಳೆ ಹೂಡಿಕೆದಾರರಿಗೆ ಈ ಕುಸಿತ ತಾತ್ಕಾಲಿಕ ನಷ್ಟ ಉಂಟು ಮಾಡಿದೆ, ಆದರೆ ಈ ಕುಸಿತ ಹೊಸ ಹೂಡಿಕೆದಾರರಿಗೆ ಅವಕಾಶವನ್ನು ಸೃಷ್ಟಿಸಿದೆ. ಹೊಸ ಹೂಡಿಕೆದಾರರು ಈಗ ಕಡಿಮೆ ಮೊತ್ತಕ್ಕೆ ಹೊಸ ಷೇರುಗಳನ್ನು ಖರೀದಿಸುವ ಅವಕಾಶ ಸೃಷ್ಟಿಯಾಗಿದೆ. ಮಾತ್ರವಲ್ಲದೆ ಮ್ಯೂಚ್ಯುಲ್ ಫಂಡ್ ಹೂಡಿಕೆಗೂ ಇದು ಸಕಾಲವಾಗಿ ಪರಿಗಣಿತವಾಗುತ್ತಿದೆ.

ಈ ಸತತ ಕುಸಿತಕ್ಕೆ ಎಫ್’ಐಐ (ಫಾರಿನ್ ಇನ್ಸ್ಟಿಟ್ಯೂಷನಲ್ ಇನ್ವೆಸ್ಟರ್) ಗಳು ಭಾರತೀಯ ಮಾರುಕಟ್ಟೆಯಿಂದ ತಮ್ಮ ಹೂಡಿಕೆಗಳನ್ನು ಹಿಂತೆಗೆದುಕೊಳ್ಳುತ್ತಿದ್ದಾರೆ. ಈ ಎಫ್’ಐಐ ಗಳು ಚೀನಾ ಮತ್ತು ಅಮೆರಿಕ ಮಾರುಕಟ್ಟೆಯ ಮೇಲೆ ಹೂಡಿಕೆ ಮಾಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಭಾರತೀಯ ಷೇರು ಮಾರುಕಟ್ಟೆ ಸತತವಾಗಿ ಕುಸಿಯುತ್ತಿದೆ.

Swiggy: ಸ್ವಿಗ್ಗಿಯಿಂದ ಕೋಟ್ಯಧೀಶರಾಗಲಿದ್ದಾರೆ 500 ಮಂದಿ

ಇದರ ಜೊತೆಗೆ, ಭಾರತದ ರೂಪಾಯಿ ಮೌಲ್ಯ, ಡಾಲರ್ ಎದುರು ಕುಸಿಯುತ್ತಲೇ ಸಾಗುತ್ತಿದೆ. ಈ ಕಾರಣಕ್ಕೂ ಸಹ ಷೇರು ಮಾರುಕಟ್ಟೆ ಕುಸಿಯಲಿದೆ. ಜೊತೆಗೆ ಈ ತ್ರೈಮಾಸದಲ್ಲಿ‌ ಉದ್ಯಮ ಕ್ಷೇತ್ರದ ಪ್ರಗತಿ ತುಸು ಕುಂಟಿತವಾಗಿದೆ. ಇದೂ ಸಹ ಷೇರು ಕುಸಿತಕ್ಕೆ ಕಾರಣ ಆಗಿದೆ.

LEAVE A REPLY

Please enter your comment!
Please enter your name here