Election: ಚುನಾವಣೆ ಗೆದ್ದ ಅಭ್ಯರ್ಥಿಗೆ ಗೆಳೆಯರ ಭರ್ಜರಿ ಸನ್ಮಾನ

0
325
Election

Election

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ನಿರ್ದೇಶಕರ ಚುನಾವಣೆಗೆ ಆರೋಗ್ಯ ಕ್ಷೇತ್ರದಿಂದ ಸ್ಪರ್ಧಿಸಿ ಜಯ ಗಳಿಸಿರುವ ಕುಂದಾಣ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕ ನಾರಾಯಣಗೌಡ ಅವರನ್ನು ವಿಜಯಪುರ ಹುಡುಗರು ಬಳಗದ ಅವರ ಸದಸ್ಯರು ಮತ್ತು ಅವರ ಆತ್ಮೀಯರು ಅದ್ಧೂರಿಯಾಗಿ ಅಭಿನಂದಿಸಿ ಸನ್ಮಾನ ಮಾಡಿದರು.

ದಶಕಕ್ಕೂ ಹೆಚ್ಚು ಸಮಯದಿಂದ ವಿಜಯಪುರದಲ್ಲಿ ಸಾಮಾಜಿಕ, ಧಾರ್ಮಿಕ ಹಾಗೂ ಕ್ರೀಡಾ ಸ್ಪೂರ್ತಿ ಮೂಡಿಸುವ ಕಾರ್ಯಗಳಲ್ಲಿ ನಿರತವಾಗಿರುವ ಹುಡುಗರು ಬಳಗದ ಸದಸ್ಯರು ತಮ್ಮದೇ ಸಂಘದ ಹಿರಿಯ ಸದಸ್ಯರಾದ ನಾರಾಯಣಗೌಡರು ಚುನಾವಣೆಯಲ್ಲಿ ವಿಜೇತರಾಗಿ ಗೌರವಾನ್ವಿತ ಹುದ್ದೆಯನ್ನು ಅಲಂಕರಿಸುತ್ತಿರುವುದನ್ನು ಅದ್ಧೂರಿಯಾಗಿ ಸಂಭ್ರಮಿಸಿದರು.

ವಿಜಯಪುರದ ಡೈರಿ ರಸ್ತೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಹುಡುಗರು ಬಳಗದ ಸದಸ್ಯರು, ಚುನಾವಣೆಯಲ್ಲಿ ಗೆದ್ದು ನಿರ್ದೇಶಕರಾಗಿ ಆಯ್ಕೆ ಆಗಿರುವ ನಾರಾಯಣಗೌಡರಿಗೆ ಹಾರ, ಶಾಲು ಹಾಕಿ ಸನ್ಮಾನಿಸಿದ್ದಲ್ಲದೆ ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡಿದರು. ನಾರಾಯಣಗೌಡರ ಮೇಲೆ ಪುಷ್ಪವೃಷ್ಟಿಯನ್ನು ಮಾಡಿದ್ದು ವಿಶೇಷವಾಗಿತ್ತು. ಚುನಾವಣೆಯಲ್ಲಿ ಜಯಭೇರಿ ಭಾರಿಸಿರುವ ನಾರಾಯಣಗೌಡರಿಗೆ ನೆನಪಿನ ಕಾಣಿಕೆಯನ್ನು ನೀಡಿ ಅಭಿನಂದಿಸಿದರು. ಸಿಹಿ ಹಂಚಿ ತಮ್ಮದೇ ಬಳಗದ ಹಿರಿಯ ಮುಖಂಡರ ಗೆಲುವನ್ನು ಸಂಭ್ರಮಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಾರಾಯಣಗೌಡರು, ‘ಎದುರಿಸಿದ ಮೊದಲ ಚುನಾವಣೆಯಲ್ಲಿಯೇ ಜಯ ದೊರೆತು, ಜವಾಬ್ದಾರಿಯುತ ಸ್ಥಾನ ದೊರೆತಿದೆ. ಹಿರಿಯರ ಮಾರ್ಗದರ್ಶನದಲ್ಲಿ ನೌಕರರ ಕ್ಷೇಮಾಭಿವೃದ್ಧಿಗೆ ಕೆಲಸ ಮಾಡುವ ಗುರಿ ಇದೆ. ಗೆಲುವಿಗೆ ಸಹಕರಿಸಿದ ನೌಕರ ಮಿತ್ರರಿಗೆ, ನನ್ನ ಗೆಲುವನ್ನು ತಮ್ಮ ಗೆಲುವೆಂಬಂತೆ ಸಂಭ್ರಮಿಸುತ್ತಿರುವ ಹುಡುಗರ ಬಳಗದ ಹಿರಿಯ-ಕಿರಿಯ ಗೆಳೆಯರಿಗೆ ಧನ್ಯವಾದಗಳು’ ಎಂದರು.

DK Shivakumar: ಸಿಎಂ ಆಗೋದು ಹೇಗೆ? ಡಿಕೆ ಶಿವಕುಮಾರ್ ಉತ್ತರ ಹೀಗಿತ್ತು

ಹುಡುಗರು ಬಳಗದ ಪ್ರಮುಖ ಸದಸ್ಯರಾದ ಕಿಶೋರ್ ಗೌಡ, ಎಸ್ ಗಿರೀಶ್, ಪ್ರಮೋದ್, ಮೋಹನ್ ಶ್ರೀವತ್ಸ, ಮಹೇಶ್ ಕುಮಾರ್, ಸಂತೋಷ್, ವರದರಾಜ್, ರಕ್ಷಿತ್, ಮಂಜು, ಅಭಿ, ಸ್ವರೂಪ್, ಗಂಗಾಧರ, ಗಿರೀಶ್ ಇನ್ನೂ ಇತರೆ ಸದಸ್ಯರು ಹಾಜರಿದ್ದರು.

LEAVE A REPLY

Please enter your comment!
Please enter your name here