Pushpa 2
‘ಪುಷ್ಪ 2’ ಸಿನಿಮಾದ ಟ್ರೈಲರ್ ನಿನ್ನೆಯಷ್ಟೆ ಬಿಡುಗಡೆ ಆಗಿದೆ. 2 ನಿಮಿಷಕ್ಕೂ ದೀರ್ಘವಾಗಿರುವ ಈ ಟ್ರೈಲರ್ ಗಮನ ಸೆಳೆಯುತ್ತಿದೆ. ಟ್ರೈಲರ್ನಲ್ಲಿ ಸಿನಿಮಾದ ಕೆಲವು ಪ್ರಮುಖ ದೃಶ್ಯಗಳ ಸಣ್ಣ ತುಣುಕುಗಳನ್ನು ಸೇರಿಸಲಾಗಿದೆ. ಸಿನಿಮಾದಲ್ಲಿ ನಟಿಸಿರುವ ಹಲವು ಪಾತ್ರಗಳ ಝಲಕ್ಗಳು ಟ್ರೈಲರ್ನಲ್ಲಿ ಕಂಡು ಬರುತ್ತವೆ. ಆದರೆ ಸಿನಿಮಾದಲ್ಲಿ ನಟಿಸಿರುವ ಕನ್ನಡಿಗ ಡಾಲಿ ಧನಂಜಯ್ ಪಾತ್ರ ಟ್ರೈಲರ್ನಲ್ಲಿ ಕಾಣಿಸಿಲ್ಲ. ಆದರೆ ಮತ್ತೊಬ್ಬ ಕನ್ನಡದ ನಟನ ದೃಶ್ಯವೊಂದು ಹೀಗೆ ಬಂದು ಹಾಗೆ ಕಣ್ಮರೆ ಆಗಿಬಿಡುತ್ತದೆ.
‘ಪುಷ್ಪ 2’ ಸಿನಿಮಾನಲ್ಲಿ ನಾಯಕಿಯಾಗಿ ಕನ್ನಡತಿ ರಶ್ಮಿಕಾ ಮಂದಣ್ಣ ನಾಯಕಿ, ಈ ಸಿನಿಮಾದ ಐಟಂ ಹಾಡಿನಲ್ಲಿ ಡ್ಯಾನ್ಸ್ ಮಾಡಿರುವುದು ಸಹ ಕನ್ನಡತಿ ಶ್ರೀಲೀಲಾ. ಇವರಿಬ್ಬರ ಹೊರತಾಗಿ ಸಿನಿಮಾದಲ್ಲಿ ಜಾಲಿ ರೆಡ್ಡಿ ಪಾತ್ರದಲ್ಲಿ ಡಾಲಿ ಧನಂಜಯ್ ನಟಿಸಿದ್ದಾರೆ. ಆದರೆ ಇದೀಗ ಮತ್ತೊಬ್ಬ ಕನ್ನಡದ ನಟ ‘ಪುಷ್ಪ 2’ ತಂಡ ಸೇರಿಕೊಂಡಿದ್ದಾರೆ. ಮಾತ್ರವಲ್ಲದೆ ಪವರ್ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನಿನ್ನೆ ಬಿಡುಗಡೆ ಆಗಿರುವ ‘ಪುಷ್ಪ 2’ ಟ್ರೈಲರ್ನಲ್ಲಿ ಪ್ರಮುಖವಾಗಿ ಗಮನ ಸೆಳೆದಿದ್ದು, ವ್ಯಕ್ತಿಯೊಬ್ಬ ಅರ್ಧ ತಲೆ ಬೋಳಿಸಿಕೊಂಡು ವಿಚಿತ್ರ ಮೇಕಪ್ ಹಾಕಿಕೊಂಡು ವಿಚಿತ್ರವಾಗಿ ನಗುತ್ತಿರುವ ದೃಶ್ಯ. ಥಟ್ಟನೆ ಬಂದು ಹೋಗುವ ಈ ಪಾತ್ರದಲ್ಲಿ ನಟಿಸಿರುವುದು ಕನ್ನಡದ ನಟ ತಾರಕ್ ಪೊನ್ನಪ್ಪ. ಕನ್ನಡದ ‘ಕೆಜಿಎಫ್’ ಸಿನಿಮಾದಲ್ಲಿ ದಯಾ ಪಾತ್ರದಲ್ಲಿ ನಟಿಸಿರುವ ತಾರಕ್ ಪೊನ್ನಪ್ಪ ಇದೀಗ ‘ಪುಷ್ಪ 2’ ಸಿನಿಮಾದ ಪವರ್ಫುಲ್ ಪಾತ್ರದಲ್ಲಿ ನಟಿಸಿದ್ದಾರೆ.
ತಾರಕ್ ಪೊನ್ನಪ್ಪ, ತೆಲುಗಿನ ಜೂ ಎನ್ಟಿಆರ್ ನಟನೆಯ ‘ದೇವರ’ ಸಿನಿಮಾನಲ್ಲಿ ಸೈಫ್ ಅಲಿ ಖಾನ್ ಪುತ್ರ ಪಸುರ ಪಾತ್ರದಲ್ಲಿ ನಟಿಸಿದ್ದರು. ಇದೀಗ ‘ಪುಷ್ಪ 2’ ಟ್ರೈಲರ್ ನೋಡಿದವರು ಭೈರನ (ಸೈಫ್ ಅಲಿ ಖಾನ್ ಪಾತ್ರ) ಮಗ ಎಂದು ತಾರಕ್ ಪೊನ್ನಪ್ಪ ಅವರನ್ನು ಗುರುತಿಸುತ್ತಿದ್ದಾರೆ. ತಾರಕ್ ಪೊನ್ನಪ್ಪ ಕನ್ನಡದಲ್ಲಿಯೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
Disha Patani: ಸೆಕ್ಸಿ ನಟಿಯ ತಂದೆಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಐನಾತಿಗಳು
ತಾರಕ್ ಪೊನ್ನಪ್ಪ ‘ಕನ್ನಡ ದೇಶದೋಳ್’, ‘ಅಜರಾಮರ’, ‘ಯುವರತ್ನ’, ‘ಕೋಟಿಗೊಬ್ಬ 3’, ‘ಗಿಲ್ಕಿ’ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ತೆಲುಗಿನಲ್ಲಿ ಸಹ ‘ಪುಷ್ಪ 2’ ತಾರಕ್ರ ಮೊದಲ ಸಿನಿಮಾ ಏನಲ್ಲ. ಈ ಹಿಂದೆ ತೆಲುಗಿನ ‘ಸಿಎಸ್ಐ ಸನಾತನ’, ‘ರಜಾಕರ್: ದಿ ಸೈಲೆಂಟ್ ಜೆನೊಸೈಡ್’ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.