Beer Bottle: ಬಿಯರ್ ಬಾಟಲಿಗಳ ಬಣ್ಣಗಳು ಬೇರೆ ಇರುವುದು ಏಕೆ? ಇದರ ಹಿನ್ನೆಲೆ ಏನು?

0
83
Beer Bottle

Beer Bottle

ವಿಶ್ವದಲ್ಲಿಯೇ ಅತಿ ಹೆಚ್ಚು ಮಾರಾಟವಾಗುವ ಆಲ್ಕೋಹಾಲ್ ಬಿಯವರೇಜ್ ಎಂದರೆ ಅದು ಬಿಯರ್. ಆಲ್ಕೋಹಾಲ್ ಹೊರತಾಗಿಯೂ ಸಹ ವಿಶ್ವದಲ್ಲಿ ಅತಿ ಹೆಚ್ಚು ಕುಡಿಯಲಾಗುವ ದ್ರವಗಳಲ್ಲಿ ನೀರು, ಕಾಫಿಯ ಬಳಿಕದ ಸ್ಥಾನ ಇರುವುದು ಬಿಯರ್​ಗೆ. ವಿಶ್ವದಾದ್ಯಂತ ಭಾರಿ ಜನಪ್ರೀತಿ ಪಡೆದಿರುವ ಬಿಯರ್ ಭಾರತದಲ್ಲಿಯೂ ಸಹ ಅತಿ ಹೆಚ್ಚು ಮಾರಾಟವಾಗುವ ಆಲ್ಕೋಹಾಲ್. ಬೆಂಗಳೂರನ್ನು ಬಿಯರ್ ಕ್ಯಾಪಿಟಲ್ ಎಂದೇ ಕರೆಯಲಾಗುತ್ತದೆ.

ಬಿಯರ್​ ದ್ರವ ಸಾಮಾನ್ಯವಾಗಿ ಚಿನ್ನದ ಬಣ್ಣದಲ್ಲಿರುತ್ತದೆ. ಕೆಲವು ಕಾಫಿ ಬಣ್ಣದಲ್ಲಿಯೂ ಇರುತ್ತವೆ. ಆದರೆ ಬಿಯರ್ ಬಾಟಲಿಗಳ ಬಣ್ಣ ಒಂದೇ ರೀತಿ ಇರುವುದಿಲ್ಲ. ಕೆಲವು ಬಿಳಿ, ಕೆಲವು ಹಸಿರು ಇನ್ನು ಕೆಲವು ತಿಳಿ ಕಾಫಿ ಬಣ್ಣದ ಬಾಟಲಿಗಳು ಇರುತ್ತವೆ. ಭಿನ್ನವಾದ ಬಣ್ಣದ ಬಾಟಲಿಗಳನ್ನು ಏಕೆ ಬಳಸಲಾಗುತ್ತದೆ. ಇದಕ್ಕೆ ಕಾರಣ ಇದೆಯೇ? ಖಂಡಿತ ಇದೆ.

ಬಿಯರ್​ಗಳನ್ನು ಮೊದಲಿಗೆ ಬಿಳಿ ಬಣ್ಣದ ಬಾಟಲಿಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಆದರೆ ಆ ಬಿಳಿ ಬಣ್ಣದ ಬಾಟಲಿಗಳು ಪಾರದರ್ಶಕ ಆಗಿದ್ದು, ಸೂರ್ಯನ ಕಿರಣಗಳು ಅದರಿಂದ ಸುಲಭವಾಗಿ ಹಾದು ಹೋಗುತ್ತಿದ್ದವಾದ್ದರಿಂದ ಅವು ಬಿಯರ್​ನ ರುಚಿಯನ್ನು ಬದಲಾವಣೆ ಮಾಡಿಬಿಡುತ್ತಿದ್ದವು. ಅಲ್ಲದೆ ಒಂದು ರೀತಿಯ ಕೆಟ್ಟ ವಾಸನೆಯ ಉತ್ಪಾದನೆಗೆ ಕಾರಣ ಆಗುತ್ತಿದ್ದವು. ಹಾಗಾಗಿ ಬಿಯರ್ ಅನ್ನು ಬಿಳಿ ಬಣ್ಣದ ಬಾಟಲಿಗಳಲ್ಲಿ ದಾಸ್ತಾನು ಮಾಡುವುದು ಬಿಡಲಾಯ್ತು.

ಆದರೆ ಬಿಳಿ ಬಣ್ಣದ ಬದಲಿಗೆ ಗಾಢ ಕಾಫಿ ಬಣ್ಣದ ಅಥವಾ ಬ್ರೌನ್ ಬಣ್ಣದ ಬಾಟಲಿಗಳನ್ನು ಬಳಸಲಾಯ್ತು. ಇವು ಸೂರ್ಯನಿಂದ ಬರುವ ಯುವಿ ಕಿರಣಗಳನ್ನು ತಡೆದು ಬಿಯರ್​ನ ರುಚಿಯನ್ನು ಹಾಗೆಯೇ ಉಳಿಸುತ್ತದೆ. ವಾಸನೆಯೂ ಸಹ ಬದಲಾವಣೆ ಆಗುವುದಿಲ್ಲ. ಹಾಗಾಗಿ ಬ್ರೌನ್ ಬಾಟಲಿಯಲ್ಲಿ ಮಾರಾಟ ಮಾಡಲಾಗುವ ಬಿಯರ್​ಗಳು ಒಳ್ಳೆಯ ರುಚಿ ಹಾಗೂ ವಾಸನೆ ಹೊಂದಿರುತ್ತವೆ. ಫ್ರೆಶ್ ಆಗಿಯೂ ಇರುತ್ತವೆ.

ಇನ್ನು ಹಸಿರು ಬಣ್ಣದ ಬಾಟಲಿಗಳಲ್ಲಿಯೂ ಬಿಯರ್​ ಮಾರಾಟ ಮಾಡಲಾಗುತ್ತದೆ. ವಿಶ್ವಯುದ್ಧದ ಸಮಯದಲ್ಲಿ ಬ್ರೌನ್ ಅಥವಾ ಕಾಫಿ ಬಣ್ಣದ ಬಾಟಲಿ ಲಭ್ಯತೆ ಕಡಿಮೆ ಆಗಿತ್ತು. ಹಾಗಾಗಿ ಬಿಯರ್ ತಯಾರು ಮಾಡುವವರು ಆಗ ಹೆಚ್ಚಾಗಿ ಲಭ್ಯವಿದ್ದ ಹಸಿರು ಬಣ್ಣದ ಗಾಜಿನ ಬಾಟಲಿ ಬಳಸಲು ಪ್ರಾರಂಭಿಸಿದರು. ಬಿಳಿ ಬಣ್ಣಕ್ಕಿಂತಲೂ ಹಸಿರು ಬಣ್ಣದ ಬಾಟಲಿ ವಾಸಿಯಾದರೂ ಸಹ ಬ್ರೌನ್ ಬಾಟಲಿಯಷ್ಟು ಪರಿಣಾಮಕಾರಿ ಇವಲ್ಲ.

ಹಸಿರು ಬಣ್ಣದ ಬಾಟಲಿಗಳು ಯುವಿ ಕಿರಣಗಳನ್ನು ಪೂರ್ಣವಾಗಿ ತಡೆಯುವುದಿಲ್ಲ. ಹಾಗಾಗಿ ಹಸಿರು ಬಣ್ಣದ ಬಾಟಲಿಯಲ್ಲಿರುವ ಬಿಯರ್ ಸಹ ಹೊರಗಿನ ತಾಪಮಾನದಲ್ಲಿ ಕೆಡುವ ಸಾಧ್ಯತೆ ಇರುತ್ತದೆ. ಆದರೂ ಸಹ ಹಲವು ಬಿಯರ್ ಕಂಪೆನಿಗಳು ಕಡಿಮೆ ಬೆಲೆಯ ಹಸಿರು ಬಣ್ಣದ ಬಾಟಲಿಗಳನ್ನು ಬಳಸುತ್ತಲೇ ಇವೆ.

Real Estate: ಹೊಸಕೋಟೆಯಲ್ಲಿ ಬೃಹತ್ ಟೌನ್’ಶಿಪ್, 500 ಕೋಟಿ ವೆಚ್ಚ, ಕಟ್ಟುವ‌ ಮುಂಚೆಯೇ ಎಲ್ಲವೂ ಸೇಲ್!

ಇನ್ನು ಕೊರೊನಾ, ಕಿಂಗ್​ಫಿಷರ್ ಅಲ್ಟ್ರಾ ಇನ್ನೂ ಕೆಲವು ದುಬಾರಿ ಬಿಯರ್​ಗಳನ್ನು ಈಗಲೂ ಬಿಳಿ ಬಾಟಲಿಗಳಲ್ಲಿಯೇ ಮಾರಾಟ ಮಾಡಲಾಗುತ್ತದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಈ ಬಿಳಿ ಬಣ್ಣದ ಬಾಟಲಿಗಳಿಗೆ ಯುವಿ ಕಿರಣ ತಡೆಯುವ ಕೋಟಿಂಗ್ ಮಾಡಲಾಗಿರುತ್ತದೆ. ಹಾಗಾಗಿ ಕೊರೊನಾ, ಇನ್ನು ಕೆಲವು ದುಬಾರಿ ಬಿಯರ್​ಗಳನ್ನು ಬಿಳಿ ಬಣ್ಣದ ಬಾಟಲಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

LEAVE A REPLY

Please enter your comment!
Please enter your name here