Samsung
ವಿಶ್ವದಲ್ಲೇ ಅತಿ ಹೆಚ್ಚು ಮಾರಾಟವಾಗ ಮೊಬೈಲ್ಗಳಲ್ಲಿ ಸ್ಯಾಮ್ಸಂಗ್ ಸಹ ಒಂದು. ವಿಶ್ವದ ಮೊಬೈಲ್ ಕ್ಷೇತ್ರವನ್ನು ಆಳುತ್ತಿರುವ ಆಪಲ್ಗೆ ಸರಿಯಾದ ಠಕ್ಕರ್ ಕೊಡುತ್ತಿರುವ ಏಕೈಕ ಸಂಸ್ಥೆಯೆಂದರೆ ಅದು ಸ್ಯಾಮ್ಸಂಗ್. ಆಂಡ್ರಾಯ್ಡ್ ಫೋನ್ ತಯಾರಿಸುವ ಹಲವಾರು ಸಂಸ್ಥೆಗಳು ಮಾರುಕಟ್ಟೆಯಲ್ಲಿವೆ. ಆದರೆ ಅತ್ಯುತ್ತಮ ಗುಣಮಟ್ಟದ ಆಂಡ್ರಾಯ್ಡ್ ತಯಾರಿಸುವ ಸಂಸ್ಥೆ ಸ್ಯಾಮ್ಸಂಗ್. ಕೆಲ ತಿಂಗಳ ಹಿಂದಷ್ಟೆ ಆಪಲ್ ಹೊಸ ಐಫೋನ್ ಲಾಂಚ್ ಮಾಡಿದೆ. ಅದರ ಬೆನ್ನಲ್ಲೆ ಇದೀಗ ಸ್ಯಾಮ್ಸಂಗ್ ಸಹ ತಮ್ಮ ಹೊಸ ಫೋನ್ ಲಾಂಚ್ ಮಾಡುತ್ತಿದೆ. ಈ ಫೋನು, ಐಫೋನಿಗಿಂತಲೂ ಹೆಚ್ಚು ಬುದ್ಧಿಶಾಲಿ, ಹೆಚ್ಚು ಕಾರ್ಯಕ್ಷಮತೆ ಹೊಂದಿರಲಿದೆ ಎನ್ನಲಾಗುತ್ತಿದೆ.
ಸ್ಯಾಮ್ಸಂಗ್ ಹಲವು ಬಗೆಯ ಫೋನುಗಳನ್ನು ತಯಾರು ಮಾಡುತ್ತದೆ. ಎಫ್ ಸೀರೀಸ್, ಜೆ ಸೀರೀಸ್, ಎ ಸೀರೀಸ್, ಎಸ್ ಸೀರೀಸ್ ಹೀಗೆ ಹಲವು ಗುಣಮಟ್ಟದ ಫೋನುಗಳನ್ನು ಸ್ಯಾಮ್ಸಂಗ್ ತಯಾರು ಮಾಡುತ್ತದೆ. ಇವುಗಳಲ್ಲಿ ಎಸ್ ಸೀರೀಸ್ ಸ್ಯಾಮ್ಸಂಗ್ನ ಅತ್ಯುತ್ತಮ ಗುಣಮಟ್ಟದ ಮತ್ತು ಅತ್ಯಂತ ಶಕ್ತಿಶಾಲಿ ಮತ್ತು ಅತ್ಯಂತ ದುಬಾರಿ ಫೋನ್ ಆಗಿದೆ. ಇದೀಗ ಸ್ಯಾಮ್ಸಂಗ್ ತನ್ನ ಎಸ್ ಸರಣಿಯ ಹೊಸ ಫೋನು ಮಾರುಕಟ್ಟೆಗೆ ತರುತ್ತಿದೆ.
ಸ್ಯಾನ್ಸಂಗ್ ಎಸ್ 25 ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಆಗಲಿದೆ. ಸ್ಯಾಮ್ಸಂಗ್ ಎಸ್ 25 ಜನವರಿ 22 ಕ್ಕೆ ಮಾರುಕಟ್ಟೆಗೆ ಬಿಡುಗಡೆ ಆಗಲಿದೆ. ಎಸ್ 25, ಎಸ್ 25 ಅಲ್ಟ್ರಾ ಮತ್ತು ಎಸ್ 25 ಪ್ಲಸ್ ಎಂಬ ಮೂರು ವೇರಿಯೆಂಟ್ಗಳನ್ನು ಸ್ಯಾಮ್ಸಂಗ್ ಬಿಡುಗಡೆ ಮಾಡಲಿದೆ. ಈ ಮೂರು ವೇರಿಯೆಂಟ್ಗಳಲ್ಲಿ ಗಾತ್ರ ಮತ್ತು ಬಣ್ಣಗಳ ವ್ಯತ್ಯಾಸವಷ್ಟೆ ಇರಲಿದೆ.
Learn Coding: ಕಾಲೇಜು ಮೆಟ್ಟಿಲು ಹತ್ತದ ಯುವಕ ಸ್ವಂತ ಶ್ರಮದಿಂದ 4 ಸಾವಿರ ಕೋಟಿ ಒಡೆಯನಾದ
ಸ್ಯಾಮ್ಸಂಗ್ನ ಎಸ್ 25, ಯುಐ 7 ಆವೃತ್ತಿಯ ಆಂಡ್ರಾಯ್ಡ್ 15 ಅನ್ನ ಬಳಸಿಕೊಳ್ಳಲಿದೆ. ಇದು ಬಹಳ ಸ್ಮೂತ್ ಹಾಗೂ ಕಾರ್ಯಕ್ಷಮತೆಯುಳ್ಳ ಆಂಡ್ರಾಯ್ಡ್ ಆವೃತ್ತಿ ಆಗಿರಲಿದೆ. ಭಾರತದಲ್ಲಿ ಈ ಫೋನಿನ ಬೆಲೆ 80 ಸಾವಿರದಿಂದ ಪ್ರಾರಂಭವಾಗಿ 1.25 ಲಕ್ಷ ರೂಪಾಯಿ ವರೆಗೂ ಇರಲಿದೆ. ಬೇರೆ ಬೇರೆ ವೇರಿಯೆಂಟ್ಗಳ ಬೆಲೆ ಬೇರೆ ಬೇರೆ ಇರಲಿದೆ.