Delhi: ಬದಲಾಗಲಿದೆಯೇ ಭಾರತದ ರಾಜಧಾನಿ? ದೆಹಲಿಯ ಸಮಸ್ಯೆ ಏನು?

0
114
Delhi

Delhi

ಭಾರತಕ್ಕೆ ಸ್ವಾತಂತ್ರ್ಯ ಬರುವ ಮುಂಚಿನಿಂದಲೂ ದೆಹಲಿ ಭಾರತದ ರಾಜಧಾನಿ. ಬ್ರಿಟೀಷರು ಭಾರತಕ್ಕೆ ಬರುವ ಮುಂಚೆಯೂ ಸಹ ಹಲವು ರಾಜರಿಗೆ ದೆಹಲಿ ರಾಜಧಾನಿ ಆಗಿತ್ತು. ಆದರೆ ಇತ್ತೀಚೆಗಿನ ದಿನಗಳಲ್ಲಿ ಭಾರತದ ರಾಜಧಾನಿಯನ್ನು ಬದಲಾಯಿಸುವ ಚರ್ಚೆಗಳು ತುಸು ಹೆಚ್ಚಾಗಿ ಕೇಳಿ ಬರುತ್ತಿದೆ. ಕೆಲವು ಹಿರಿಯ ರಾಜಕಾರಣಿಗಳು, ಕೆಲ ಉದ್ಯಮಿಗಳು ಸಹ ದೆಹಲಿಯನ್ನು ಬದಲಾಯಿಸುವಂತೆ ಸೂಚಿಸಿದ್ದಾರೆ.

ದೆಹಲಿ, ವಿಶ್ವದ ಅತ್ಯಂತ ಮಲಿನ ನಗರಗಳಲ್ಲಿ ಒಂದೆನಿಸೊಕೊಂಡಿದೆ. ದೆಹಲಿಯ ವಾಯುಮಾಲಿನ್ಯ ಅಪಾಯದ ಮಟ್ಟವನ್ನು ಮೀರಿಬಿಟ್ಟಿದೆ. ದೆಹಲಿ ಸರ್ಕಾರ ಶಾಲಾ ಮಕ್ಕಳಿಗೆ ಆನ್’ಲೈನ್ ತರಗತಿಗಳನ್ನು ಘೋಷಣೆ ಮಾಡಿದೆ. ಕಚೇರಿಗಳಿಗೆ ವರ್ಕ್’ಫ್ರಂ ಹೋಮ್ ಕಡ್ಡಾಯ ಮಾಡಿದೆ. ಸಿಗರೇಟಿನ ಹೊಗೆಗಿಂತಲೂ ಹತ್ತು ಪಟ್ಟು ಅಪಾಯಕಾರಿಯಾಗಿ ಪರಿಣಮಿಸಿದೆ.

ದೆಹಲಿಯ ವಾಯು ಮಾಲಿನ್ಯ ಅಪಾಯಕಾರಿ ಮಟ್ಟ ತಲುಪಿರುವ ಕಾರಣದಿಂದಾಗಿ, ದೆಹಲಿ ಮೇಲಿನ ಒತ್ತಡ ತಗ್ಗಿಸಲು ದೆಹಲಿಯ ಬದಲಿಗೆ ಭಾರತದ ಬೇರೆ ನಗರಗಳನ್ನು ರಾಜಧಾನಿಯನ್ನಾಗಿ ಮಾಡಬೇಕು ಎಂಬ ಮನವಿ ಎದ್ದಿದೆ. ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ, ಶಶಿ ತರೂರ್ ಸಹ ಈ ಬಗ್ಗೆ ಟ್ವೀಟ್ ಮಾಡಿದ್ದು, ‘ಭಾರತದ ರಾಜಧಾನಿ ಆಗುವ ಕ್ಷಮತೆಯನ್ನು ದೆಹಲಿ ಇನ್ನೂ ಉಳಿಸಿಕೊಂಡಿದೆಯೇ’ ಎಂದು ಪ್ರಶ್ನೆ ಮಾಡಿದ್ದಾರೆ.

‘ಅಧಿಕೃತವಾಗಿ ದೆಹಲಿ ವಿಶ್ವದ ಅತ್ಯಂತ ಮಲಿನ ನಗರವಾಗಿದೆ. ಅತ್ಯಂತ ಅಪಾಯಕಾರಿ ಮಟ್ಟವನ್ನು ಈಗಾಗಲೇ ಮೀರಿ ಬಿಟ್ಟಿದೆ. ಮಲಿನ ನಗರಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಢಾಕಾಗಿಂತಲೂ ಐದು ಪಟ್ಟು ಹೆಚ್ಚು ಮಲಿನಗೊಂಡಿದೆ ದೆಹಲಿ. 2015 ರಿಂದಲೂ ನಾನು ಕೆಲವು ಪ್ರಮುಖ ವ್ಯಕ್ತಿಗಳ ಜೊತೆಗೆ ವಾಯುಗುಣಮಟ್ಟದ ದುಂಡು ಮೇಜು ಸಭೆಗಳನ್ನು ಮಾಡುತ್ತಿದ್ದೆ. ಆದರೆ ಕಳೆದ ವರ್ಷ ಅದನ್ನು ಬಿಟ್ಟು ಬಿಟ್ಟೆ ಏಕೆಂದರೆ ದೆಹಲಿಯಲ್ಲಿ ಏನೂ ಬದಲಾವಣೆ ಆಗುತ್ತಿಲ್ಲ. ಆ ನಗರದ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಲೇ ಇದೆ. ನವೆಂಬರ್ ತಿಂಗಳಿಂದ ಫೆಬ್ರವರಿ ತಿಂಗಳ ವರೆಗೆ ಈ ನಗರದಲ್ಲಿ ಯಾರೂ ವಾಸಿಸುವಂತೆಯೇ ಇಲ್ಲ. ವರ್ಷದ ಇತರೆ ತಿಂಗಳುಗಳಲ್ಲಿ ಸಹ ಈ ನಗರ ಬದುಕಲು ಅತ್ಯಂತ ಅಪಾಯಕಾರಿ. ಹೀಗೊದ್ದಾಗಲೂ ದೆಹಲಿಯನ್ನು ಭಾರತದ ರಾಜಧಾನಿಯಾಗಿ ಮುಂದುವರೆಸಬೇಕೆ’ ಎಂದಿದ್ದಾರೆ ಶಶಿ ತರೂರ್.

Election: ಚುನಾವಣೆ ಗೆದ್ದ ಅಭ್ಯರ್ಥಿಗೆ ಗೆಳೆಯರ ಭರ್ಜರಿ ಸನ್ಮಾನ

ಇತ್ತೀಚೆಗಷ್ಟೆ ಇಂಡೋನೇಷ್ಯಾ ತನ್ನ ರಾಜಧಾನಿಯನ್ನು ಬದಲಾವಣೆ ಮಾಡುವ‌ ನಿರ್ಧಾರ ಮಾಡಿದೆ. ಜಕಾರ್ತ, ಇಂಡೋನೇಷ್ಯಾದ ರಾಜಧಾನಿ ಆಗಿತ್ತು. ಆದರೆ ಆ ನಗರದಲ್ಲಿ ವಾಯು ಮಾಲಿನ್ಯ ಹೆಚ್ಚಾದ ಕಾರಣ, ಇಂಡೋನೇಷ್ಯಾ ಹೊಸ ರಾಜಧಾನಿಯ ನಿರ್ಮಾಣಕ್ಕೆ ಮುಂದಾಗಿದೆ. ಜಕಾರ್ತ ದಲ್ಲಿ ವರ್ಷದಿಂದ ವರ್ಷಕ್ಕೆ ವಾಯು ಮಾಲಿನ್ಯ ಹೆಚ್ಚಾಗುತ್ತಲೇ ಇದ್ದು, ಅಲ್ಲಿ ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದೇ ಕಾರಣಕ್ಕೆ ಇಂಡೋನೇಷ್ಯಾ ರಾಜಧಾನಿ ಬದಲಾವಣೆ ಮಾಡುತ್ತಿದೆ. ಭಾರಯದಲ್ಲಿಯೂ ರಾಜಧಾನಿ ಬದಲಾವಣೆ ಆಗಬೇಕೆ? ಕಮೆಂಟ್ ಮಾಡಿ.

LEAVE A REPLY

Please enter your comment!
Please enter your name here