Exit Poll
ಇಂದು (ನವೆಂಬರ್ 20) ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳ ವಿಧಾನಸಭೆ ಚುನಾವಣೆ ನಡೆದಿದೆ. ಮಹಾರಾಷ್ಟ್ರದ 288 ಹಾಗೂ ಜಾರ್ಖಂಡ್’ನ 81 ವಿಧಾನಸಭಾ ಕ್ಷೇತ್ರಕ್ಕೆ ಮತದಾನ ನಡೆದಿದೆ. ಫಲಿತಾಂಶ ಕೇವಲ ಮೂರೇ ದಿನದಲ್ಲಿ ಅಂದರೆ ನವೆಂಬರ್ 23 ಕ್ಕೆ ಹೊರಬೀಳಲಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ, ಏಕನಾಥ ಶಿಂಧೆಯ ಶಿವಸೇನೆ, ಅಜಿತ್ ಪವಾರ್ ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಇನ್ನೂ ಮೂರು ಪಕ್ಷಗಳು ಸೇರಿ ಮಹಾ ಯುಟಿ ಹೆಸರಿನ ಮೈತ್ರಿ ಮಾಡಿಕೊಂಡಿವೆ.
ಇನ್ನೊಂದೆಡೆ ಕಾಂಗ್ರೆಸ್, ಉದ್ಧವ್ ಠಾಕ್ರೆಯ ಶಿವಸೇನೆ, ಶರದ್ ಪವಾರ್ ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ, ಸಮಾಜವಾದಿ ಪಕ್ಷ, ಕಮ್ಯುನಿಸ್ಟ್ ಪಕ್ಷಗಳು ಸೇರಿಕೊಂಡು ಮಹಾ ವಿಕಾಸ್ ಅಗಾದಿ ಹೆಸರಿನ ಮೈತ್ರಿ ಮಾಡಿಕೊಂಡಿವೆ.
ಇನ್ನು ಜಾರ್ಖಂಡ್ ನಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ, ಕಾಂಗ್ರೆಸ್, ಆರ್’ಜೆಡಿ, ಕಮ್ಯೂನಿಸ್ಟ್ ಸೇರಿಕೊಂಡು ಮಹಾಘಟಬಂಧನ್ ಮಾಡಿಕೊಂಡಿವೆ. ಬಿಜೆಪಿ, ಸ್ಟೂಡೆಂಟ್ ಯೂನಿಯನ್, ಜೆಡಿಯು ಸೇರಿ ಒಟ್ಟಿಗೆ ಚುನಾವಣೆ ಎದುರಿಸಿವೆ. ಇಂದು ಸಂಜೆ ಮತದಾನ ಮುಗಿಯುತ್ತಿದ್ದಂತೆ ಮತಗಟ್ಟೆ ಸಮೀಕ್ಷೆ ವರದಿಗಳು ಹೊರಬಿದ್ದಿವೆ.
ಹೊರಬಿದ್ದಿರುವ ಮತಗಟ್ಟೆ ಸಮೀಕ್ಷೆಗಳಲ್ಲಿ ಬಹುತೇಕ ಸಮೀಕ್ಷೆಗಳು ಮಹಾರಾಷ್ಟ್ರದಲ್ಲಿ ಮತ್ತೊಮ್ಮೆ ಬಿಜೆಪಿ-ಶಿವಸೇನೆಯ ಮಹಾಯುತಿ ಮೈತ್ರಿ ಅಧಿಕಾರ ಹಿಡಿಯಲಿದೆ ಎನ್ನುತ್ತಿವೆ. ಆದರೆ ಯಾವುದೇ ಮೈತ್ರಿ ಪಕ್ಷಗಳು ಗೆದ್ದರೂ ಸಹ ಮತರ 20-30 ಸೀಟುಗಳಷ್ಟೆ ಇರಲಿವೆ ಎಂದಿವೆ. ಕೆಲವು ಸಮೀಕ್ಷೆಗಳು ಕಾಂಗ್ರೆಸ್-ಶಿವಸೇನೆ ಮೈತ್ರಿಗೆ ಸರಳ ಬಹುಮತ ಸಿಗಲಿದೆ ಎಂದಿವೆ ಸಹ. ಆದರೆ ಹೆಚ್ಚಿನ ಸಮೀಕ್ಷೆಗಳು ಬಿಜೆಪಿ-ಶಿವಸೇನೆ ಮೈತ್ರಿಗೆ ವಿಜಯ ಎಂದಿವೆ.
Bengaluru Railway Station: ಹೈಟೆಕ್ ಆಗಲಿದೆ ಬೆಂಗಳೂರಿನ ರೈಲ್ವೆ ನಿಲ್ದಾಣ, ಖರ್ಚಾಗಲಿದೆ ಸಾವಿರಾರು ಕೋಟಿ
ಇನ್ನು ಜಾರ್ಖಂಡ್ ನಲ್ಲಿ, ಮಹಾರಾಷ್ಟ್ರಕ್ಕಿಂತಲೂ ಹತ್ತಿರದ ಸ್ಪರ್ಧೆ ಇರಲಿದೆ ಎಂದಿವೆ ಸಮೀಕ್ಷೆಗಳು. ಆದರೆ ಹೆಚ್ಚಿನ ಸಮೀಕ್ಷೆಗಳು ಜಾರ್ಖಂಡ್ ಮುಕ್ತಿ ಮೋರ್ಚಾ ಮತ್ತು ಕಾಂಗ್ರೆಸ್ ಮೈತ್ರಿಗೆ ಸರಳ ಬಹುಮತ ಸಿಗಲಿದೆ ಎಂದು ವರದಿ ನೀಡಿವೆ. ಹೇಮಂತ್ ಸೂರೆನ್ ಸಿಎಂ ಆಗಲಿದ್ದಾರೆ ಎಂದೇ ಬಹುತೇಕ ಸಮೀಕ್ಷೆಗಳು ವರದಿ ನೀಡಿವೆ. ಅಂದಹಾಗೆ ನವೆಂಬರ್ 23 ಕ್ಕೆ ಮತ ಎಣಿಕೆ ನಡೆಯಲಿದ್ದು ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರಬೀಳಲಿದೆ.