Gautam Adani: ಅಮೆರಿಕದಲ್ಲಿ ಗೌತಮ್ ಅದಾನಿ‌ ವಿರುದ್ಧ ಗಂಭೀರ ಆರೋಪ, ಬಂಧನ ವಾರೆಂಟ್

0
114
Gautam Adani

Gautam Adani

ಗೌತಮ್ ಅದಾನಿ, ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತದ ಎರಡನೇ ಅತಿದೊಡ್ಡ ಶ್ರೀಮಂತ ಗೌತಮ್ ಅದಾನಿ ವಿರುದ್ಧ ಅಮೆರಿಕದಲ್ಲಿ ಗಂಭೀರ ಆರೋಪ ಕೇಳಿ ಬಂದಿದ್ದು, ಅದಾನಿ ವಿರುದ್ಧ ದೂರು ಸಹ ದಾಖಲಾಗಿದೆ. ಗೌತಮ್ ಅದಾನಿ ಮಾತ್ರವೇ ಅಲ್ಲದೆ ಅವರ ಹತ್ತಿರದ ಸಂಬಂಧಿ ಸಾಗರ್ ಅದಾನಿ ವಿರುದ್ಧವೂ ದೂರು ದಾಖಲಾಗಿದೆ.

ಅಮೆರಿಕದ ದೊಡ್ಡ ಸೋಲಾರ್ ಪ್ರಾಜೆಕ್ಟ್ ಪಡೆದುಕೊಳ್ಳಲು ನೂರಾರು ಮಿಲಿಯನ್ ಡಾಲರ್ ಹಣವನ್ನು ಅಲ್ಲಿನ ಅಧಿಕಾರಿಗಳಿಗೆ ಲಂಚವನ್ನಾಗಿ ಕೊಡಲು ಅದಾನಿ ಮುಂದಾಗಿದ್ದು, ಇದೇ ವಿಷಯವಾಗಿ ಅಮೆರಿಕದ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ. ಗೌತಮ್ ಅದಾನಿ, ಸಾಗರ್ ಅದಾನಿಯ ಜೊತೆಗೆ ಇನ್ನೂ ಏಳು ವ್ಯಕ್ತಿಗಳ‌ ವಿರುದ್ಧ ದೂರು ದಾಖಲಾಗಿದೆ.

ಅಮೆರಿಕದಲ್ಲಿನ ಭಾರತದ ಅಧಿಕಾರಿಗಳಿಗೆ ಬರೋಬ್ಬರಿ 2100 ಕೋಟಿಗೂ ಹೆಚ್ಚಯ ಹಣವನ್ನು ಲಂಚವನ್ನಾಗಿ ನೀಡಲು ಗೌತಮ್ ಅದಾನಿ ಮುಂದಾಗಿದ್ದರಂತೆ. ಅಮೆರಿಕದ ದೊಡ್ಡ ಸೋಲಾರ್ ಪವರ್ ಕಾಂಟ್ರಾಕ್ಟ್ ಅನ್ನು ಪಡೆದುಕೊಳ್ಳಲು ಇಷ್ಟು ದೊಡ್ಡ ಮೊತ್ತದ ಲಂಚವನ್ನು ಅದಾನಿ ಕೊಡಲು ಮುಂದಾಗಿದ್ದರು. ಅದಾನಿ ಪಡೆದುಕೊಳ್ಳಲು ಮುಂದಾಗಿದ್ದ ಸೋಲಾರ್ ಪವರ್ ಪ್ರಾಜೆಕ್ಟ್’ನ ಒಟ್ಟು ಗಾತ್ರ ಸುಮಾರು 20 ಸಾವಿರ ಕೋಟಿ ರೂಪಾಯಿಗಳು.

Exit Poll: ಮತಗಟ್ಟೆ ಸಮೀಕ್ಷಾ ವರದಿ: ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆಯಲ್ಲಿ ಗೆಲುವು ಯಾರಿಗೆ?

ಅದಾನಿ ಗ್ರೀನ್ ಪ್ರಾಜೆಕ್ಟ್’ನ ಗೀತಾ ಜೈನ್ ಮತ್ತಿತರರು ಸುಮಾರು 1 ಲಕ್ಷ ಕೋಟಿ ಹಣವನ್ನು ಬಾಂಡ್ ಹಾಗೂ ಸಾಲದ ರೂಪದಲ್ಲಿ ತೆಗೆದುಕೊಂಡಿದ್ದು, ಇಷ್ಟು ಹಣವನ್ನು ಬ್ಯಾಂಕ್ ಇನ್ನಿತರೆಗಳಿಂದ ತೆಗೆದುಕೊಳ್ಳಲು ಭಾರಿ ಮೊತ್ತದ ಲಂಚವನ್ನು  ನೀಡಿದ್ದಾರೆ ಎಂದು ಅಮೆರಿಕದ ಕಾನ್ಸಲೇಟರ್’ಗಳು ಆರೋಪಿಸಿದ್ದಾರೆ. ಇದೀಗ ಅದಾನಿ ಹಾಗೂ ಇತರರ ಮೇಲೆ ಅಮೆರಿಕದ ಲಂಚ ತಡೆ ಕಾಯ್ದೆಯ ಅಡಿ ಪ್ರಕರಣ ದಾಖಲಾಗಿದೆ. ಇದರ ಜೊತೆಗೆ ವಿದೇಶಿ ಭ್ರಷ್ಟಾಚಾರ ತಡೆ ಕಾಯ್ದೆಯ ಅಡಿಯಲ್ಲಿಯೂ ಪ್ರಕರಣ ದಾಖಲಾಗಿದೆ. ಗೌತಮ್ ಅದಾನಿ, ಸಾಗರ್ ಅದಾನಿ ಹಾಗೂ ಇತರ ಆರೋಪಿಗಳ ಮೇಲೆ ಅರೆಸ್ಟ್ ವಾರೆಂಟ್ ಸಹ ಹೊರಡಿಸಲಾಗಿದೆ‌.

ಗೌತಮ್ ಅದಾನಿ ಖುದ್ದಾಗಿ ಕೆಲವು ಅಧಿಕಾರಿಗಳನ್ನು ಭೇಟಿ ಮಾಡಿ ಲಂಚದ ಆಮಿಷ ಒಡ್ಡಿದ್ದರು ಎನ್ನಲಾಗುತ್ತಿದೆ‌.

LEAVE A REPLY

Please enter your comment!
Please enter your name here