Darshan: ದರ್ಶನ್ ಸಿನಿಮಾ ರೀ ರಿಲೀಸ್, ಚಿತ್ರಮಂದಿರಗಳು ಖಾಲಿ, ತಪ್ಪು ಯಾರದ್ದು?

0
112
Darshan

Darshan

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ನಟನೆಯ ಹಳೆಯ ಸಿನಿಮಾ ‘ಸಂಗೊಳ್ಳಿ ರಾಯಣ್ಣ’ ಇಂದು (ನವೆಂಬರ್ 22) ಮರು ಬಿಡುಗಡೆ ಆಗಿದೆ. ಆದರೆ ಸಿನಿಮಾ ನೋಡಲು ಜನರೇ ಬಂದಿಲ್ಲ. ‘ಸಂಗೊಳ್ಳಿ ರಾಯಣ್ಣ’ ಸಿನಿಮಾದ ಬಹುತೇಕ ಶೋಗಳಿಗೆ ಜನರೇ ಇರಲಿಲ್ಲ. ಚಿತ್ರಮಂದಿರಗಳೆಲ್ಲ ಖಾಲಿ ಇದ್ದವು. ಆದರೆ ಇದು ದರ್ಶನ್ ಅಭಿಮಾನಿಗಳಿಗೆ ಬೇಸರ ಮೂಡಿಸಿದ್ದು, ಆಕ್ರೋಶ ಹೊರಹಾಕಿದ್ದಾರೆ.

ಬೆಳಿಗ್ಗೆ ಸಿದ್ದಲಿಂಗೇಶ್ವರ ಚಿತ್ರಮಂದಿರದಲ್ಲಿ ಶೋ ನೋಡಲು ಬಂದಿದ್ದ ಅಭಿಮಾನಿಗಳು, ‘ಸಂಗೊಳ್ಳಿ ರಾಯಣ್ಣ’ ಸಿನಿಮಾದ ನಿರ್ಮಾಪಕರು ಹಾಗೂ‌ ವಿತರಕರ ಮೇಲೆ ಸಿಟ್ಟು ಹೊರಹಾಕಿದ್ದಾರೆ. ದರ್ಶನ್ ಸಿನಿಮಾ ನೋಡುವ ಅಭಿಮಾನಿಗಳ ಸಂಖ್ಯೆ ದೊಡ್ಡದಿದೆ. ಆದರೆ ಸಿನಿಮಾದ ವಿತರಕರು ಮತ್ತು ನಿರ್ಮಾಪಕರು ಸಿನಿಮಾದ ಪ್ರಚಾರ ಮಾಡಿಲ್ಲ ಹಾಗಾಗಿ ಜನ ಬಂದಿಲ್ಲ ಎಂದು ನೆಪ ಹೇಳಿದ್ದಾರೆ.

ಸಿದ್ದಲಿಂಗ ಚಿತ್ರಮಂದಿರದಲ್ಲಿ ಬೆಳಿಗ್ಗೆ 10 ಗಂಟೆ ಶೋ ಫುಲ್ ಆಗಿದೆ ಎಂದು ಬುಕ್’ಮೈ ಶೋನಲ್ಲಿ‌ ತೋರಿಸುತ್ತಿತ್ತು, ಆದರೆ ಶೋಗೆ ಜನರೇ ಇರಲಿಲ್ಲ. ಸಿನಿಮಾ ನೋಡಲು ಜನ ಬಾರದೆ ಇರಲಿ ಎಂದೇ ಹೀಗೆ ಫೇಕ್ ಆಗಿ ಟಿಕೆಟ್ ಬುಕ್ ಆಗಿದೆ ಎಂದು ತೋರಿಸಲಾಗಿದೆ ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದರು. ದರ್ಶನ್ ಅನ್ನು ತುಳಿಯಲೆಂದೇ ಕೆಲವರು‌ ಹೀಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು ಕೆಲ ದರ್ಶನ್ ಅಭಿಮಾನಿಗಳು.

Darshan: ದರ್ಶನ್ ವಿರುದ್ಧ ಸಿಕ್ಕಿದೆ ಪ್ರಬಲ‌ ಸಾಕ್ಷಿ, ತಪ್ಪಿಸಿಕೊಳ್ಳುವುದು ಅಸಾಧ್ಯ

ಅಸಲಿ‌ ವಿಷಯವೆಂದರೆ ಜೆಪಿ ನಗರದ ಸಿದ್ದಲಿಂಗೇಶ್ವರ ಚಿತ್ರಮಂದಿರದಲ್ಲಿ ಮಾತ್ರವೇ 10 ಗಂಟೆ ಶೋ ಬುಕ್ ಆಗಿದೆ ಎಂದು ತೋರಿಸಲಾಗಿತ್ತು, ಬೆಂಗಳೂರಿನ ಬೇರೆ ಚಿತ್ರಮಂದಿರಗಳಲ್ಲಿ ಟಿಕೆಟ್ ಬುಕಿಂಗ್’ಗೆ ಓಪನ್ ಇತ್ತು. ಆದರೆ ಬೇರೆ ಚಿತ್ರಮಂದಿರಗಳಲ್ಲಿಯೂ ಸಹ ‘ಸಂಗೊಳ್ಳಿ ರಾಯಣ್ಣ’ ಸಿನಿಮಾ ನೋಡಲು ಹೆಚ್ಚಿನ ಜನರು ಬಂದಿರಲಿಲ್ಲ. ಬಹುತೇಕ ಚಿತ್ರಮಂದಿರಗಳು ಖಾಲಿ ಹೊಡೆಯಿತ್ತಿದ್ದವು.

ದರ್ಶನ್, ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಬಳಿಕ ಕೆಲ ನಿರ್ಮಾಪಕರು,  ವಿತರಕರು ಹಣ ಮಾಡಿಕೊಳ್ಳಲು ದರ್ಶನ್ ಅವರ ಹಳೆ ಸಿನಿಮಾಗಳನ್ನು ಮರು ಬಿಡುಗಡೆ ಮಾಡುತ್ತಿದ್ದಾರೆ. ‘ಕರಿಯ’ ಸಿನಿಮಾ ಮರಿ ಬಿಡುಗಡೆ ಆಗಿ ಚೆನ್ನಾಗಿ ಪ್ರದರ್ಶನ ಕಂಡಿತು. ಅದಾದ ಬಳಿಕ ಬಿಡುಗಡೆ ಆದ ಯಾವ ಸಿನಿಮಾ ಸಹ ಒಳ್ಳೆ ಪ್ರದರ್ಶನ ಕಾಣಲಿಲ್ಲ. ಇತ್ತೀಚೆಗೆ ಬಿಡುಗಡೆ ಆಗಿದ್ದ ‘ನವಗ್ರಹ’ ಸಿನಿಮಾ ತುಸು ಒಳ್ಳೆಯ ಪ್ರದರ್ಶನ ಕಂಡಿತು. ಮುಂದಿನ ತಿಂಗಳು ‘ನಮ್ಮ ಪ್ರೀತಿಯ ರಾಮು’ ಸಿನಿಮಾ ಮರು ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ.

LEAVE A REPLY

Please enter your comment!
Please enter your name here