Rent Car
ಸೆಲ್ಪ್ ಡ್ರೈವ್’ಗೆ ಕಾರುಗಳನ್ನು ಬಾಡಿಗೆಗೆ ಕೊಡಯವ ಬ್ಯುಸಿನೆಸ್ ಕಳೆದ ಕೆಲ ವರ್ಷಗಳಿಂದ ನಡೆಯುತ್ತಿದೆ. ಕೆಲವು ಕಂಪೆನಿಗಳು ತಮ್ಮ ಕಾರುಗಳನ್ನು ಸೆಲ್ಫ್ ಡ್ರೈವ್’ಗಾಗಿ ಬಾಡಿಗೆಗೆ ಕೊಡುತ್ತಿವೆ. ಕೆಲವು ಟ್ರಾವೆಲ್ ಏಜೆನ್ಸಿಗಳು ಸಹ ಇದೇ ರೀತಿ ಸೆಲ್ಫ್ ಡ್ರೈವ್’ಗೆ ಬಾಡಿಗೆಗೆ ಕೊಡುತ್ತವೆ. ಆದರೆ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದಿರುವ ಘಟನೆಯೊಂದು ಹೀಗೆ ಸೆಲ್ಫ್ ಡ್ರೈವ್’ಗೆ ಕಾರು ಬಾಡಿಗೆಗೆ ಪಡೆವ ಮುನ್ನ 100 ಬಾರಿ ಯೋಚಿಸುವಂತೆ ಮಾಡಿದೆ.
ಕೆಲವು ಕಾಲೇಜು ಯುವಕರು ಇತ್ತೀಚೆಗೆ ಟ್ರಾವೆಲ್ ಏಜೆನ್ಸಿಯೊಂದರಿಂದ ಖಾಸಗಿ ಕಾರನ್ನು ಬಾಡಿಗೆಗೆ ಪಡೆದು ಮಡಿಕೇರಿ ಟ್ರಿಪ್’ಗೆ ಹೋಗಿ ಬರುವ ಯೋಜನೆ ಹಾಕಿದರು. ಮಾರುತಿ ನಗರದ ಟ್ರಾವೆಲ್ ಕಂಪೆನಿಯ ಮೂಲಕ ಕಿಯಾ ಕಾರೊಂದನ್ನು ಬಾಡಿಗೆಗೆ ಪಡೆದರು. ಅದಕ್ಕಾಗಿ ಅವರು 3000 ರೂಪಾಯಿ ಹಣವನ್ನೂ ಕೊಟ್ಟರು. ಕಾರು ಕೊಡಬೇಕಾದರೆ ಕೆಲವು ನಿಯಮಗಳನ್ನು ಹೇಳಿದ್ದ ಟ್ರಾವೆಲ್ ಏಜೆನ್ಸಿಯವರು, ಕಾರನ್ನು 100 ಕ್ಕಿಂತಲೂ ಹೆಚ್ಚು ವೇಗವಾಗಿ ಓಡಿಸಿದರೆ 1200 ರೂಪಾಯಿ ದಂಡ ಕಟ್ಟಬೇಕಾಗುತ್ತದೆ ಎಂದಿದ್ದರು. ಜೊತೆಗೆ ಭದ್ರತೆಗೆಂದು ಒಬ್ಬ ಯುವಕನ ಲ್ಯಾಪ್’ಟಾಪ್ ಅನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು.
ಸರಿಯೆಂದು ಭಾನುವಾರ ಮುಂಜಾನೆಯೇ ಮಡಿಕೇರಿಗೆ ಹೋದ ಕಾಲೇಜು ಗೆಳೆಯರು ಅದೇ ದಿನ ಸಂಜೆ 6 ಗಂಟೆಗೆ ವಾಪಸ್ಸಾಗಿ ಕಾರನ್ನು ಏಜೆನ್ಸಿಯವರಿಗೆ ನೀಡಿದರು. ಆದರೆ ಏಜೆನ್ಸಿಯವರು ನೀವು 120 ಬಾರಿ 100 ಕ್ಕೂ ಹೆಚ್ಚು ವೇಗವಾಗಿ ಕಾರು ಓಡಿಸಿದ್ದೀರಿ, ಈಗಲೇ 1.2 ಲಕ್ಷ ರೂಪಾಯಿ ಫೈನ್ ಕಟ್ಟಿ ಎಂದಿದ್ದಾರೆ. ಅದಕ್ಕೆ ಸಾಕ್ಷಿ ತೋರಿಸಿ ಎಂದು ಯುವಕರು ಕೇಳಿದಾಗ, ಮೂರು ಸ್ಕ್ರೀನ್ ಶಾಟ್’ಗಳನ್ನು ತೋರಿಸಿದ್ದಾರೆ. ಉಳಿದ ಸ್ಕ್ರೀನ್ ಶಾಟ್ ತೋರಿಸಿಲ್ಲ.
Maruti Car: ಮಾರುತಿಯ ಹೊಸ ಕಾರು, ನೋಡಲು ಬೊಂಬಾಟ್, ಮೈಲೇಜ್ ಬಂಪರ್
ಈ ಹುಡುಗರು ಹಣ ಕೊಡುವುದಿಲ್ಲ ಎಂದಾಗ ಟ್ರಾವೆಲ್ ಏಜೆನ್ಸಿ ಒಳಗೆ ಕೂಡಿಹಾಕಿ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ ಅಲ್ಲದೆ ಚಾಕು ತೋರಿಸಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಅದಾದ ಬಳಿಕ ಗೆಳೆಯರ ಗುಂಪಿನ ಕೆಲವರು ಅವರಿವರಿಗೆ ಕಾಲ್ ಮಾಡಿ ಸುಮಾರು 60 ಸಾವಿರ ಹಣ ಹಾಕಿಸಿಕೊಂಡು ಅವರಿಗೆ ನೀಡಿದ್ದಾರೆ. ಭದ್ರೆತೆ ಇಟ್ಟುಕೊಂಡಿದ್ದ ಲ್ಯಾಪ್’ಟಾಪ್ ಅನ್ನೂ ಸಹ ಅವರೇ ಇಟ್ಟುಕೊಂಡು ಯುವಕರನ್ನು ಚೆನ್ನಾಗು ಹೆದರಿಸಿ ಕಳಿಸಿದ್ದಾರೆ.
ಆ ಯುವಕರ ಗುಂಪಿನಲ್ಲಿದ್ದ ಒಬ್ಬ ಯುವಕ ನಡೆದ ಘಟನೆಯನ್ನು ತನ್ನ ಚಿಕ್ಕಪ್ಪನ ಬಳಿ ಹೇಳಿಕೊಂಡಿದ್ದು, ಈ ಬಗ್ಗೆ ಚಂದ್ರಾ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೂಡಲೆ ಸಕ್ರಿಯಗೊಂಡ ಪೊಲೀಸರು ಯುವಕರ ಮೇಲೆ ಹಲ್ಲೆ ಮಾಡಿದ ಮೂವರನ್ನು ಬಂಧಿಸಿದ್ದು, ಹಣ ಮತ್ತು ಲ್ಯಾಪ್’ಟಾಪ್ ಅನ್ನು ವಶಪಡಿಸಿಕೊಂಡಿದ್ದಾರೆ.