UP Police
ದೇಶದಲ್ಲಿ ಪ್ರತಿನಿತ್ಯ ಲಕ್ಷಾಂತರ ಪ್ರಕರಣಗಳು ದಾಖಲಾಗುತ್ತಿವೆ. ವಂಚನೆ ಕಳ್ಳತನ ಇತ್ಯಾದಿಗಳಲ್ಲಿ ಜನ ಪ್ರತಿದಿನ ನೂರಾರು ಕೋಟಿ ಹಣ, ಚಿನ್ನ ಕಳೆದುಕೊಳ್ಳುತ್ತಿದ್ದಾರೆ. ದೇಶದಲ್ಲಿ ಲಕ್ಷಾಂತರ ಪ್ರಕರಣಗಳು ತನಿಖೆಯೇ ಆಗದೆ ಉಳಿದಿವೆ. ಆದರೆ ಇದೀಗ ಉತ್ತರ ಪ್ರದೇಶದ ಪೊಲೀಸರು, ವಿದ್ಯಾರ್ಥಿಯೊಬ್ಬನ ಪೆನ್ಸಿಲ್, ರಬ್ಬರ್ ಕಳ್ಳತನ ಆಗಿದ್ದ ಪ್ರಕರಣವನ್ನು ಇತ್ಯರ್ಥ ಪಡಿಸಿದ್ದಾರೆ.
ಆದರೆ ಪೊಲೀಸರು ಮಾಡಿರುವ ಈ ಕಾರ್ಯಕ್ಕೆ ಭಾರಿ ಜನ ಮನ್ನಣೆ ದೊರೆತಿದೆ. ದೇಶದಲ್ಲೇ ಅತಿ ಹೆಚ್ಚು ಅಪರಾಧ ಪ್ರಕರಣಗಳು ಉತ್ತರ ಪ್ರದೇಶದಲ್ಲಿ ದಾಖಲಾಗುತ್ತವೆ. ಎಷ್ಟೋ ಬಾರಿ ಪೊಲೀಸರಿಗೆ ದೂರು ಸಹ ಸಲ್ಲಿಕೆ ಆಗುವುದಿಲ್ಲ. ಹಾಗಾಗಿ ಪೊಲೀಸರು, ಶಾಲೆ, ಕಾಲೇಜುಗಳ ಬಳಿ ಬಾಕ್ಸ್’ಗಳನ್ನು ಇಟ್ಟಿದ್ದು ಅದರಲ್ಲಿ ದೂರುಗಳನ್ನು ಹಾಕುವಂತೆ ಸೂಚಿಸಿದ್ದಾರೆ.
ಹೀಗೆ ಶಾಲೆಯೊಂದರ ಬಳಿ ಇರಿಸಿದ್ದ ಈ ದೂರು ಪೆಟ್ಟಿಗೆಗಳಿಗೆ ಶಾಲಾ ವಿದ್ಯಾರ್ಥಿಗಳು ಹಲವು ದೂರುಗಳನ್ನು ಬರೆದು ಹಾಕಿದ್ದಾರೆ. ಗೆಳೆಯರೊಟ್ಟಿಗೆ ಜಗಳ, ಶಿಕ್ಷಕರು ಹೊಡೆದಿದ್ದು, ಆಟಕ್ಕೆ ಸೇರಿಸಿಕೊಳ್ಳದೆ ಇರುವುದು, ಒಬ್ಬ ಹುಡುಗ, ತನ್ನ ಪೆನ್ಸಿಲ್ ಹಾಗೂ ರಬ್ಬರ್ ಕಳ್ಳತನ ಆಗಿದೆ ಎಂದು ದೂರು ಬರೆದು ಡಬ್ಬಿಗೆ ಹಾಕಿದ್ದ.
The Rameshwaram Cafe: ರಾಮೇಶ್ವರಂ ಕೆಫೆಯಲ್ಲಿ ಒಂದು ದಿನಕ್ಕೆ ಮಾರಾಟವಾಗುವ ಇಡ್ಲಿ ಎಷ್ಟು ಗೊತ್ತೆ?
ಎಲ್ಲ ದೂರುಗಳನ್ನು ಸಂಗ್ರಹಿಸಿದ ಪೊಲೀಸರು ಶಾಲೆಗೆ ಭೇಟಿ ನೀಡಿ, ಎಲ್ಲ ದೂರುಗಳನ್ನು ಇತ್ಯರ್ಥ ಮಾಡಿದ್ದಾರೆ. ಜಗಳ ಮಾಡಿಕೊಂಡಿದ್ದ ವಿದ್ಯಾರ್ಥಿಗಳ ನಡುವೆ ಸಂಧಾನ ಮಾಡಿದ್ದಾರೆ. ಎಲ್ಲರೂ ಒಟ್ಟಿಗೆ ಸೇರಿ ಆಟ ಆಡುವಂತೆ ಸೂಚಿಸಿದ್ದಾರೆ. ಕಿರಿಯ ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಕಾಣಬೇಕೆಂದು ಬುದ್ಧಿವಾದ ಹೇಳಿದ್ದಾರೆ. ಪೆನ್ಸಿಲ್, ರಬ್ಬರ್ ಕಳೆದುಕೊಂಡಿದ್ದ ವಿದ್ಯಾರ್ಥಿಗೆ ಹೊಸ ಪೆನ್ಸಿಲಗ-ರಬ್ಬರ್ ಕೊಡಿಸಿದ್ದಲ್ಲದೆ, ಆತನ ಪೆನ್ಸಿಲ್ ಅನ್ನು ಯಾರೂ ಕದಿಯಬಾರದು ಎಂದು ಎಚ್ಚರಿಕೆ ಸಹ ನೀಡಿದ್ದಾರೆ.
ಉತ್ತರ ಪ್ರದೇಶ ಪೊಲೀಸರು ಮಾಡಿರುವ ಈ ಕಾರ್ಯಕ್ಕೆ ಭಾರಿ ಜನ ಮೆಚ್ಚುಗೆ ವ್ಯಕ್ತವಾಗಿದೆ.