Pushpa 2: ಒಳ್ಳೆ ಕನ್ನಡ ಸಿನಿಮಾದ ಕತ್ತು ಹಿಸುಕಿದ ‘ಪುಷ್ಪ 2’ ಕೇಳೋರು ಯಾರೂ ಇಲ್ಲ

0
141
Pushpa 2

Pushpa 2

ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಇಂದು (ಡಿಸೆಂಬರ್ 05) ಬಿಡುಗಡೆ ಆಗಿದೆ. 12 ಸಾವಿರ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಏಕ ಕಾಲಕ್ಕೆ ಬಿಡುಗಡೆ ಆಗಿದೆ. ಬೆಂಗಳೂರಿನಲ್ಲೂ ಸಹ ದೊಡ್ಡ ಮಟ್ಟದಲ್ಲಿ ಸಿನಿಮಾ ತೆರೆ ಕಂಡಿದೆ. ಆದರೆ ‘ಪುಷ್ಪ 2’ ಸಿನಿಮಾದಿಂದಾಗಿ ಒಂದು ಒಳ್ಳೆ ಕನ್ನಡ ಸಿನಿಮಾಕ್ಕೆ ಅನ್ಯಾಯವಾಗಿದೆ. ವಿಚಿತ್ರವೆಂದರೆ ಈ ಅನ್ಯಾಯವನ್ನು ಪ್ರಶ್ನಿಸುವವರು ಸಹ ಯಾರೂ ಇಲ್ಲದಂತಾಗಿದ್ದಾರೆ.

ಆರ್ ಜೆ ಪ್ರದೀಪ್ ನಿರ್ದೇಶಿಸಿ, ನಟ ಸುನಿಲ್ ರಾವ್, ರಾಕೇಶ್ ಅಡಿಗ, ಶೈನ್ ಶೆಟ್ಟಿ, ಪೂರ್ಣಚಂದ್ರ ಮೈಸೂರು ಇನ್ನೂ ಕೆಲವು ಒಳ್ಳೆಯ ಕಲಾವಿದರು ನಟಿಸಿರುವ ಸರಳ ಆದರೆ ಸುಂದರ ಕತೆ ಹೊಂದಿರುವ ‘ಮರ್ಯಾದೆ ಪ್ರಶ್ನೆ’ ಸಿನಿಮಾ ಕೆಲ ದಿನಗಳ ಹಿಂದೆಯಷ್ಟೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿತ್ತು. ಮಧ್ಯಮವರ್ಗದವರ ಕತೆಯನ್ನು ಎಲ್ಲೂ ಬೋರು ಹೊಡೆಸದೆ, ಭಾಷಣ ಮಾಡದೆ ಚೊಕ್ಕದಾಗಿ ಹೇಳುವ ಸಿನಿಮಾ ಇದಾಗಿತ್ತು. ಸಿನಿಮಾಕ್ಕೆ ಜನರಿಂದ ಬಹಳ ಒಳ್ಳೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿತ್ತು, ಪತ್ರಿಕೆಗಳು, ಡಿಜಿಟಲ್ ಮಾಧ್ಯಮದಲ್ಲಿಯೂ ಸಿನಿಮಾದ ಬಗ್ಗೆ ಬಹಳ ಒಳ್ಳೆಯ ವಿಮರ್ಶೆಗಳು ಪ್ರಕಟವಾಗಿದ್ದವು. ಚಿತ್ರಮಂದಿರಗಳಲ್ಲಿ ಸಿನಿಮಾ ಚೆನ್ನಾಗಿಯೇ ಓಡುತ್ತಿತ್ತು. ಆದರೆ ‘ಪುಷ್ಪ 2’ ಸಿನಿಮಾ ಬಂದಿದ್ದರಿಂದ ಓಡುತ್ತಿದ್ದ ಕನ್ನಡ ಸಿನಿಮಾ ಅನ್ನು ಸಹ ಕಿತ್ತೊಗೆಯಲಾಗಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬೇಸರದಿಂದ ನೋವು ತೋಡಿಕೊಂಡಿರುವ ನಿರ್ದೇಶಕ ಆರ್ ಜೆ ಪ್ರದೀಪ್, 95% ಚಿತ್ರಮಂದಿರ, ಸ್ಕ್ರೀನ್ ಗಳನ್ನು ‘ಪುಷ್ಪ 2’ ಸಿನಿಮಾ ತಂಡದವರು ಆಕ್ಯುಪೈ ಮಾಡಿಕೊಂಡಿದ್ದಾರೆ. ಕನ್ನಡ ಸಿನಿಮಾ ಬಿಡುಗಡೆ ಮಾಡಲು ತೆಲುಗು, ತಮಿಳಿನ ನಿರ್ಮಾಪಕರ ಅನುಮತಿ ಕೇಳಬೇಕಾಗಿದೆ. ಕನ್ನಡ ಕಲಾವಿದರು, ಕನ್ನಡದ ತಂತ್ರಜ್ಞರನ್ನು ಹಾಕಿಕೊಂಡು ಸಿನಿಮಾ ಮಾಡಿದ್ದು ನಮ್ಮ ತಪ್ಪಾ ಎಂದು ಪ್ರದೀಪ ಪ್ರಶ್ನೆ ಮಾಡಿದ್ದಾರೆ.

‘ನಾವು ಪರಭಾಷೆಯ ನಟಿಯನ್ನು, ಸಂಗೀತ ನಿರ್ದೇಶಕರನ್ನೋ ಕಲಾವಿದರನ್ನೋ ಹಾಕಿಕೊಂಡು ಸಿನಿಮಾ ಮಾಡಬಹುದಿತ್ತು, ಆದರೆ ಕನ್ನಡಿಗರನ್ನೇ ಹಾಕಿಕೊಂಡು ಸಿನಿಮಾ ಮಾಡಿದೆವು. ಆದರೆ ಇಂದು ನಮ್ಮ ಸಿನಿಮಾವನ್ನು ಪರಭಾಷೆ ಸಿನಿಮಾಕ್ಕೆ ಎತ್ತಂಗಡಿ ಮಾಡಲಾಗಿದೆ. ಪರಭಾಷೆಯ ಸಿನಿಮಾಕ್ಕೆ ಮಣೆ ಹಾಕುವ ವಿತರಕರ ಮರ್ಯಾದೆ ಪ್ರಶ್ನೆ ಇದಲ್ಲವೆ’ ಎಂದು ಖಾರವಾಗಿ ಪ್ರಶ್ನೆ ಮಾಡಿದ್ದಾರೆ ಪ್ರದೀಪ್.

Pushpa 2 Breaking News: ‘ಪುಷ್ಪ 2’ ಗೆ ಶಾಕ್ ನೀಡಿದ ಕರ್ನಾಟಕ ಸರ್ಕಾರ,‌ ಶೋಗಳು ರದ್ದು

ವಿಪರ್ಯಾಸವೆಂದರೆ ಕನ್ನಡದ ಪರ ಕನ್ನಡ ಸಿನಿಮಾಗಳ ಪರ ಇರಬೇಕಿದ್ದ ಮಾಧ್ಯಮಗಳು ಸಹ ‘ಪುಷ್ಪ‌ 2’ ಸಿನಿಮಾದ ಜಾಹೀರಾತು ಹಣಕ್ಕೆ ಮಾರಿಕೊಂಡು, ಕನ್ನಡ ಸಿನಿಮಾದ ಹಿತವನ್ನು ಬಲಿ ಕೊಟ್ಟಿವೆ. ಕನ್ನಡಪರ ಹೋರಾಟಗಾರರು ‘ಪುಷ್ಪ 2’ ಬಿಡುಗಡೆಗೆ ಮುಂಚೆ ಸಾಮಾಜಿಕ ಜಾಲತಾಣದಲ್ಲಿ ತುಸು ಅಬ್ಬರಿಸಿದ್ದರು, ಆ ನಂತರ ಅವರನ್ನು ‘ಸುಮ್ಮನಾಗಿಸಿದಂತಿದೆ’.

LEAVE A REPLY

Please enter your comment!
Please enter your name here