Gukesh
ತಮಿಳುನಾಡಿನ ಗುಖೇಶ್ ವಿಶ್ವ ಚೆಸ್ ಚಾಂಪಿಯನ್ ಆಗಿದ್ದಾರೆ. ವಿಶ್ವನಾಥ್ ಆನಂದನ್ ಬಳಿಕ ಈ ಸಾಧನೆ ಮಾಡಿದ ಭಾರತದ ವ್ಯಕ್ತಿ ಎನಿಸಿಕೊಂಡಿದ್ದಾರೆ. ಗುಖೇಶ್ ಸಾಧನೆಯನ್ನು ಇಡೀ ದೇಶವೇ ಕೊಂಡಾಡುತ್ತಿದೆ. ಸಿಂಗಪುರದಲ್ಲಿ ನಡೆದ ಟೂರ್ನಿಯಲ್ಲಿ ಚೀನಾದ ಡಿಂಗ್ ಅವರನ್ನು ಗುಖೇಶ್ ಮಣಿಸಿ ವಿಶ್ವ ವಿಜೇತರಾಗಿದ್ದಾರೆ. ಆದರೆ ಗುಖೇಶ್ ಗೆದ್ದಿದ್ದಕ್ಕೆ ಲಾಭ ಆಗಿರುವುದು ನಿರ್ಮಲಾ ಸೀತಾರಾಮನ್’ಗೆ ಅದು ಹೇಗೆ ಇಲ್ಲಿ ತಿಳಿಯಿರಿ.
ವಿಶ್ವ ಚಾಂಪಿಯನ್ ಆದ ಗುಖೇಶ್ ಗೆ 11 ಕೋಟಿ ರೂಪಾಯಿ ಬಹುಮಾನದ ಮೊತ್ತ ನೀಡಲಾಗಿದೆ. ಆದರೆ ಇಷ್ಟೂ ಮೊತ್ತ ಗುಖೇಶ್’ಗೆ ತಲುಪುವುದಿಲ್ಲ ಬದಲಿಗೆ 11 ಕೋಟಿಯಲ್ಲಿ ಗುಖೇಶ್ ಖಾತೆ ಸೇರುವುದು ಕೇವಲ 6.33 ಕೋಟಿ ರೂಪಾಯಿಗಳು ಮಾತ್ರ. ಉಳಿದ ಹಣವೆಲ್ಲ ಭಾರತದ ಸರ್ಕಾರದ ಖಾತೆ ಸೇರಿಕೊಳ್ಳಲಿದೆ. ಆಡಿ ಗೆದ್ದಿದ್ದು ಗುಖೇಶ್ ಆಗಿರಬಹುದು ಆದರೆ ಲಾಭ ಮಾಡುತ್ತಿರುವುದು ತೆರಿಗೆ ಇಲಾಖೆ!
ಗುಖೇಶ್ 30% ತೆರಿಗೆ ನೀಡಬೇಕಿದೆ. ಇದರ ಜೊತೆಗೆ ಕೆಲವು ಸರ್ ಚಾರ್ಜ್’ಗಳು ಸಹ ಸೇರಿಕೊಂಡಿದ್ದು ಎಲ್ಲ ಸೇರಿ 4.67 ಕೋಟಿ ರೂಪಾಯಿತೆರಿಗೆಯನ್ನು ಗುಕೇಶ್ ಕೆಂದ್ರಕ್ಕೆ ನೀಡಬೇಕಿದೆ. ತೆರಿಗೆ ಎಲ್ಲ ಕಟ್ಟಿದ ಬಳಿಕ ಗುಖೇಶ್ ಬಳಿ ಉಳಿಯುವುದು ಒಟ್ಟು ಮೊತ್ತದ 54% ಹಣ ಮಾತ್ರ.
ಬಹುಮಾನದ ಹಣ, ಕ್ರೀಡಾಪಟುಗಳ ಸಂಭಾವನೆ ಇನ್ನೂ ಕೆಲವು ಆದಾಯಗಳ ಮೇಲೆ ಭಾರತದಲ್ಲಿ ಭಾರಿ ದೊಡ್ಡ ತೆರಿಗೆ ಇದೆ. ಇದೇ ಕಾರಣಕ್ಕೆ ತೆರಿಗೆ ಉಳಿಸಿಕೊಳ್ಳಲು ಹಲವು ದೊಡ್ಡ ಕ್ರೀಡಾಪಟುಗಳು ತಾವು ನಟರೆಂದೋ ರೈತರೆಂದೋ ತೋರಿಸಿಕೊಳ್ಳುವುದು ಉಂಟು. ಸ್ವತಃ ಅಚಿನ್ ತೆಂಡೂಲ್ಕರ್ ಸಹ ತಮ್ಮ ವೃತ್ತಿ ನಟನೆ, ಹವ್ಯಾಸ ಕ್ರಿಕೆಟ್ ಆಡುವುದು ಎಂದು ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ದರು.
Karnataka Government: ಆರು ವಾರದಲ್ಲಿ ಮೈಸೂರು ರಾಜರ ಕುಟುಂಬಕ್ಕೆ 3000 ಕೋಟಿ ಕೊಡಬೇಕು ಸರ್ಕಾರ, ಕೋರ್ಟ್ ಆದೇಶ
ವಿಶ್ವದಲ್ಲಿ ಅತಿ ಹೆಚ್ಚು ತೆರಿಗೆ ವಸೂಲಿ ಮಾಡುವ ದೇಶಗಳ ಪಟ್ಟಿಯಲ್ಲಿ ಭಾರತವೂ ಒಂದು. ಆದರೆ ನೀಡುತ್ತಿರುವ ತೆರಿಗೆಗೆ ಅನುಗುಣವಾಗಿ ಜನರಿಗೆ ಸವಲತ್ತುಗಳು ಮಾತ್ರ ಸಿಗುತ್ತಿಲ್ಲ. ತೆರಿಗೆ ಮೊತ್ತಗಳು ಹೆಚ್ಚಾಗುತ್ತಲೇ ಹೋಗುತ್ತಿವೆ ಆದರೆ ಅದಕ್ಕೆ ತಕ್ಕಂತೆ ಮೂಲ ಸೌಕರ್ಯಗಳು ಮಾತ್ರ ದೊರೆಯುತ್ತಿಲ್ಲ. ಈ ಬಗ್ಗೆ ತೆರಿಗೆದಾರರು ದೂರುತ್ತಲೇ ಬರುತ್ತಿದ್ದಾರೆ. ಆದರೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಲೆ ಕೆಡಿಸಿಕೊಳ್ಳುತ್ತಿಲ್ಲ. ವರ್ಷದಿಂದ ವರ್ಷಕ್ಕೆ ತೆರಿಗೆಗಳನ್ನು ಹೆಚ್ಚಿಸುತ್ತಲೇ ಸಾಗುತ್ತಿದ್ದಾರೆ.