Omlete: ಬೇಯಿಸಿದ ಮೊಟ್ಟೆ ಅಥವಾ ಆಮ್ಲೆಟ್: ಯಾವುದು ಆರೋಗ್ಯಕರ

0
83
omlet

Omlete

ಮೊಟ್ಟೆ ವಿಶ್ವದಲ್ಲೇ ಅತಿ ಹೆಚ್ಚು ಸೇವಿಸಲಾಗುವ ಆಹಾರ. ವಿಶ್ವದಾದ್ಯಂತ ಪ್ರತಿದಿನ ಬಿಲಿಯನ್ ಗಟ್ಟಲೆ ಮೊಟ್ಟೆಗಳನ್ನು ಜನ ಸೇವಿಸುತ್ತಾರೆ. ಮೊಟ್ಟೆಗಳನ್ನು ಬಳಸಿ ಹಲವು ವಿಧದ ಖಾದ್ಯಗಳನ್ನು ಸುಲಭವಾಗಿ ಮಾಡಬಹುದು, ಚಿಕನ್-ಮಟನ್ ಇನ್ನಿತರೆಗಳಿಗೆ ಹೋಲಿಸಿದರೆ ಮೊಟ್ಟೆ ಬಹಳ ಅಗ್ಗ. ಎಷ್ಟೋ ತರಕಾರಿಗಳಿಗೆ ಹೋಲಿಸಿದರೂ ಮೊಟ್ಟೆಗಳು ಕಡಿಮೆ ಬೆಲೆಗೆ ಲಭ್ಯವಾಗುತ್ತವೆ. ಹಾಗಾಗಿ ಇವುಗಳ ಬಳಕೆ ಹೆಚ್ಚು.

ಮೊಟ್ಟೆಯಿಂದ ಹೆಚ್ಚು ತಯಾರಾಗುವ ಖಾದ್ಯ ಆಮ್ಲೆಟ್ ಅಥವಾ ಅದನ್ನು ಹಾಗೆಯೇ ಬೇಯಿಸಿಕೊಂಡು ತಿನ್ನುವ ‘ಬಾಯಿಲ್ಡ್ ಎಗ್’. ಆದರೆ ಈ ಎರಡರಲ್ಲಿ ಯಾವುದು ಆರೋಗ್ಯಕರ. ಮೊಟ್ಟೆಯನ್ನು ಬೇಯಿಸಿ ತಿಂದರೆ ಒಳ್ಳೆಯದೊ ಅಥವಾ ಆಮ್ಲೇಟ್ ಮಾಡುವುದು ಒಳ್ಳೆಯದೊ? ಇಲ್ಲಿದೆ ನೋಡಿ ಉತ್ತರ.

ಮೊಟ್ಟೆಯನ್ನು ಬೇಯಿಸಿ ತಿನ್ನುವುದರಿಂದ 78 ಕ್ಯಾಲರಿ ನಮ್ಮ‌ ದೇಹ ಸೇರುತ್ತದೆ. ಒಂದು ಬೇಯಿಸಿದ ಮೊಟ್ಟೆಯಲ್ಲಿ  6 ಗ್ರಾಂ ಶುದ್ಧ ಪ್ರೊಟೀನ್ ಇರುತ್ತದೆ. ಇದರ ಜೊತೆಗೆ ದೇಹಕ್ಕೆ ಅಗತ್ಯವಾದ ಐರನ್, ಮ್ಯಾಗ್ನಿಷಿಯಂ, ಜಿಂಕ್ ನ ಜೊತೆಗೆ ವಿಟಮಿನ್ ಗಳಾದ ಬಿ12, ಎ ಮತ್ತು ಡಿ ಸಹ ದೊರೆಯುತ್ತದೆ. ಮೊಟ್ಟೆಯ ಬಿಳಿ ಭಾಗದಿಂದ ಉತ್ತಮ ಮೊತ್ತದ ಕ್ಯಾಲ್ಷಿಯಂ ಸಹ ದೇಹ ಸೇರುತ್ತದೆ. ಮೊಟ್ಟೆಗಳು ಒಳ್ಳೆಯ ಆಂಟಿಆಕ್ಸೊಡೆಂಟ್ ಗಳಾಗಿದ್ದು ದೇಹದ ಒಟ್ಟಾರೆ ಶಕ್ತಿ ಮತ್ತು ಆರೋಗ್ಯ ವೃದ್ಧಿಗೆ ಸಹಾಯ ಮಾಡುತ್ತವೆ.

ಇನ್ನು ಆಮ್ಲೆಟ್ ವಿಷಯಕ್ಕೆ ಬರುವುದಾದರೆ ಬಾಯಿಲ್ಡ್ ಎಗ್ ನಲ್ಲಿ ಸಿಗುವ ವಿಟಮಿನ್ ಇನ್ನಿತರೆ ನ್ಯೂಟ್ರೀಷಿಯನ್ ಗಳು ಆಮ್ಲೆಟ್ ನಲ್ಲಿ ಸಿಗುತ್ತವೆಯಾದರೂ ಆ ಆಮ್ಲೆಟ್ ಮಾಡಲು ಬಳಸುವ ಇದರೆ ಪದಾರ್ಥಗಳ ಮೇಲೆ ಇದು ಅವಲಂಬಿತವಾಗಿರುತ್ತದೆ‌. ಒಂದೊಮ್ಮೆ ಆಮ್ಲೆಟ್’ಗೆ ತರಕಾರಿಗಳನ್ನು ಹಾಕಿದರೆ ನಾರಿನ ಅಂಶ ದೇಹ ಸೇರುತ್ತದೆ‌. ಇದು ಪಚನಕ್ರಿಯೆಯಲ್ಲಿ ಸಹಾಯ ಮಾಡುತ್ತದೆ. ಚಿಕನ್ ತುಂಡುಗಳನ್ನು ಸೇರಿಸಿದರೆ ಪ್ರೊಟೀನ್ ಹೆಚ್ಚು ಸೇರುತ್ತದೆ‌. ಆದರೆ ಆಮ್ಲೆಟ್ ಗೆ ಬಳಸುವ ಎಣ್ಣೆಯಿಂದ ಅನಗತ್ಯ ಫ್ಯಾಟ್ (ಕೊಬ್ಬು) ದೇಹ ಸೇರುತ್ತದೆ.

Kashaya: ಚಳಿಗಾಲಕ್ಕೆ ಈ ಕಷಾಯ ಮಾಡಿ ಸೇವಿಸಿ, ನೆಗಡಿ, ಕೆಮ್ಮು ದೂರ ಮಾಡಿ

ಹೋಲಿಸಿ ನೋಡಿದಲ್ಲಿ ಅನಗತ್ಯ ಫ್ಯಾಟ್ ಇಲ್ಲದ ಬೇಯಿಸಿದ ಮೊಟ್ಟೆ ಹೆಚ್ಚು ಆರೋಗ್ಯಕರ ಆದರೆ ಆಮ್ಲೆಟ್ ಮಾಡುವಾಗ ನಾವು ಯಾವ ಪದಾರ್ಥಗಳನ್ನು ಎಷ್ಟು ಪ್ರಮಾಣದಲ್ಲಿ ಅದರ ಜೊತೆ ಸೇರಿಸುತ್ತೇವೆ ಎಂಬುದು ಬಹಳ ಪ್ರಮುಖವಾದ ಅಂಶವಾಗುತ್ತದೆ. ಆಮ್ಲೇಟ್ ಮಾಡುವಾಗ ಎಣ್ಣೆ ಬದಲು ನಿಗದಿತ ಪ್ರಮಾಣದಲ್ಲಿ ತುಪ್ಪ ಅಥವಾ ಬೆಣ್ಣೆಯ ಬಳಕೆ ಮಾಡಿದಲ್ಲಿ ಆಮ್ಲೇಟ್ ಸಹ ಆರೋಗ್ಯಕರ ಖಾದ್ಯವೇ ಆಗುತ್ತದೆ.

LEAVE A REPLY

Please enter your comment!
Please enter your name here