Bengaluru
ಬೆಂಗಳೂರಿನ ಫುಟ್ ಪಾತ್ ಮೇಲೆ ನಡೆದರೆ ಪ್ರತಿ ಒಂದು ನಿಮಿಷಕ್ಕೆ ಒಂದು ವಿದ್ಯುತ್ ಕಂಬ ಎದುರಾಗುತ್ತದೆ. ಆ ವಿದ್ಯುತ್ ಕಂಬಗಳಿಗೆ ಹಲವು ತಂತಿಗಳು ನೇತಾಡುತ್ತಿರುತ್ತವೆ. ಕಂಬಗಳಿಂದ ನೇತು ಬಿದ್ದು ತಂತಿಗಳು ತಗುಲಿ ಬೆಂಗಳೂರಿನಲ್ಲಿ ಕೆಲವು ಸಾವುಗಳು ಸಂಭವಿಸಿವೆ. ಕೆಲವು ಕಂಬಗಳಂತೂ ತಂತಿಗಳಿಂದ ಪೂರ್ಣವಾಗಿ ಸುತ್ತಲ್ಪಟ್ಟಿರುತ್ತವೆ. ಅವುಗಳ ಹತ್ತಿರ ಹೋಗುವುದಿರಲಿ ನೋಡಿದರೆ ಹೆದರಿಕೆ ಉಂಟಾಗುತ್ತದೆ. ಆದರೆ ರಾಜ್ಯ ಸರ್ಕಾರದ ವಿದ್ಯುತ್ ಇಲಾಖೆ ಈ ವಿದ್ಯುತ್ ಕಂಬಗಳನ್ನು ತೆಗೆಯಲು ನಿರ್ಧರಿಸಿದೆ. ಇದಕ್ಕಾಗಿ 200 ಕೋಟಿ ರೂಪಾಯಿ ಹಣ ಖರ್ಚು ಮಾಡಲಿದೆ.
ಕಂಬಗಳ ಮೂಲಕ ವಿದ್ಯುತ್ ನೀಡುವುದು ಹೆಚ್ಚು ಖರ್ಚು ಹಾಗೂ ಅಪಾಯವೂ ಹೆಚ್ಚು. ಆ ಕಂಬಗಳನ್ನು ಕೇಬಲ್ ನವರು, ಇಂಟರ್ನೆಟ್ ಪ್ರೊವೈಡರ್’ಗಳು ಇನ್ನಿತರೆಯವರು ಬಳಸಿಕೊಳ್ಳುವುದು ಸಹ ಹೆಚ್ಚಾಗಿತ್ತು. ಹಾಗಾಗಿ ಈಗ ಬೆಂಗಳೂರಿನಲ್ಲಿ 12800 ಕಿ.ಮೀ ಉದ್ದದ ವಿದ್ಯುತ್ ತಂತಿಯನ್ನು ಭೂಮಿಯ ಅಡಿ ಹೂಳಲು ಯೋಜನೆ ತಯಾರಾಗಿದೆ.
ಈ ಹೊಸ ಯೋಜನೆ ಬ್ರ್ಯಾಂಡ್ ಬೆಂಗಳೂರಿನ ಭಾಗವಾಗಿದ್ದು, ಮಹದೇವಪುರದಿಂದ ಪ್ರಾರಂಭವಾಗಿ ಬರೋಬ್ಬರಿ 12800 ಕಿ.ಮೀ ಉದ್ದದ ವಿದ್ಯುತ್ ಕೇಬಲ್ ಅನ್ನು ಅಂಡರ್ ಗ್ರೌಂಡ್ ಮಾಡಲಾಗುತ್ತಿದೆ. ಇದರಿಂದ ಭದ್ರತೆ ಹೆಚ್ಚುತ್ತದೆ ಹಾಗೂ ನಗರದ ಅಂದವೂ ಹೆಚ್ಚಲಿದೆ. ಆಪ್ಟಿಕಲ್ ಫೈಬರ್ ನೆಟ್’ವರ್ಕ್ ಕೇಬಲ್ ಬಳಸಿ ವಿದ್ಯುತ್ ಅನ್ನು ಕೊಡುವ ಪ್ರಯತ್ನ ಮಾಡಲಾಗುತ್ತಿದೆ. ಶೀಘ್ರವೇ ಈ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ಆದರೆ ಇದಕ್ಕಾಗಿ ಬೆಂಗಳೂರಿನಲ್ಲಿ ಮತ್ತೆ ಗುಂಡಿಗಳನ್ನು ತೆಗೆಯಲಾಗುತ್ತದೆ.
Gukesh: ವಿಶ್ವ ಚೆಸ್ ಚಾಂಪಿಯನ್ ಆಗಿದ್ದು ಗುಖೇಶ್, ಲಾಭ ಆಗಿದ್ದು ನಿರ್ಮಲಾ ಸೀತಾರಾಮನ್’ಗೆ
ಬ್ರ್ಯಾಂಡ್ ಬೆಂಗಳೂರು ಪ್ರಾಜೆಕ್ಟ್ ನ ಅಡಿಯಲ್ಲಿ ಈ ಪ್ರಾಜೆಕ್ಟ್ ತಲೆ ಎತ್ತಿದೆ. ಬೆಂಗಳೂರನ್ನು ಸುರಕ್ಷಿತ ಮತ್ತು ಸುಂದರಗೊಳಸಿಲು ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಸಾವಿರಾರು ಕೋಟಿ ಹಣ ಖರ್ಚು ಮಾಡುತ್ತಿದೆ. ಈಗಿರುವ ಲೈಟಿನ ಕಂಬಗಳು ಸಂಪೂರ್ಣ ಸುರಕ್ಷಿತ ಅಲ್ಲ. ವಿದ್ಯುತ್ ತಂತಿಗಳು ಕತ್ತರಿಸಿ ಬೀಳುವ, ಮರಗಳಿಗೆ ತಾಗಿ ಮಳೆಗಾಲದಲ್ಲಿ ಅಪಾಯ ಉಂಟು ಮಾಡುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ವಿದ್ಯುತ್ ತಂತಿಗಳನ್ನು ಒಳಗೆ ಹಾಕಲಾಗುತ್ತಿದೆ.