Vijay Mallya
ವಿಜಯ್ ಮಲ್ಯ ಭಾರತದ ಸೆಲೆಬ್ರಿಟಿ ಉದ್ಯಮಿ. ಸಾಮಾಜಿಕ ಜಾಲತಾಣಗಳು ಹೆಚ್ಚು ಇಲ್ಲದ ಸಮಯದಲ್ಲಿಯೇ ವಿಜಯ್ ಮಲ್ಯ ಭಾರತದ ಪ್ಲೇ ಬಾಯ್ ಇಮೇಜು ಹೊಂದಿದ್ದರು. ಆದರೆ ಸಾಲದ ಕಾರಣಕ್ಕೆ ಮಲ್ಯ ದೇಶ ಬಿಡಬೇಕಾಯ್ತು. ಮಲ್ಯ ಅನ್ನು ವಾಪಸ್ ತರುವುದಾಗಿ ಚುನಾವಣೆ ಭರವಸೆಗಳನ್ನು ಕೆಲ ಪಕ್ಷಗಳು ನೀಡಿದವಾದರೂ ಮಲ್ಯ ಅನ್ನು ವಾಪಸ್ ತರಲಾಗಲಿಲ್ಲ. ಆದರೆ ವಿಜಯ್ ಮಲ್ಯ ಮಾಡಿದ್ದ 9 ಸಾವಿರ ಕೋಟಿ ಸಾಲದ ಕತೆ ಏನಾಯ್ತು?
ಸ್ವತಃ ವಿಜಯ್ ಮಲ್ಯ ಟ್ವೀಟ್ ಮಾಡಿ ಹೇಳಿರುವಂತೆ ಭಾರತದ ಸಾಲ ಮರುಪಾವತಿ ಟ್ರಿಬ್ಯುನಲ್ ನೀಡಿರುವ ವರದಿಯಂತೆ ಮಲ್ಯರ ಒಟ್ಟು ಸಾಲ 6203 ಕೋಟಿ. 1200 ಕೋಟಿ ಬಡ್ಡಿಯ ಸಹಿತ. ಆದರೆ ಹಣಕಾಸು ಸಚಿವೆ ಪಾರ್ಲಿಮೆಂಟ್ ನಲ್ಲಿ ನೀಡಿರುವ ಮಾಹಿತಿಯಂತೆ ಇಡಿ (ಜಾರಿ ನಿರ್ದೇಶನಾಲಯ) ಮತ್ತು ಬ್ಯಾಂಕುಗಳ ಮುಖಾಂತರ ವಿಜಯ್ ಮಲ್ಯಗೆ ಸೇರಿದ 14,313 ಕೋಟಿ ಹಣವನ್ನು ವಾಪಸ್ ಪಡೆಯಲಾಗಿದೆ. ಅಂದರೆ ವಿಜಯ್ ಮಲ್ಯರ ಸಾಲಕ್ಕಿಂತಲೂ ದುಪ್ಪಟ್ಟು ಹಣವನ್ನು ಅವರಿಂದ ಹಿಂಪಡೆಯಲಾಗಿದೆ.
ಈ ಬಗ್ಗೆ ಪ್ರಶ್ನೆ ಮಾಡಿರುವ ಮಲ್ಯ, ಇಡಿ ಮತ್ತು ಬ್ಯಾಂಕುಗಳು ನಿಯಮ ಬಾಹಿರವಾಗಿ ನನ್ನ ಸಾಲ ಮತ್ತು ಬಡ್ಡಿಯ ಮೊತ್ತಕ್ಕೆ ದುಪ್ಪಟ್ಟು ಹಣವನ್ನು ನನ್ನಿಂದ ಪಡೆದುಕೊಂಡಿವೆ. ಇದನ್ನು ನಾನು ಪ್ರಶ್ನೆ ಮಾಡುತ್ತೇನೆ ಮತ್ತು ನ್ಯಾಯ ಪಡೆದುಕೊಳ್ಳುತ್ತೇನೆ ಎಂದಿದ್ದಾರೆ. ನನ್ನ ಸಾಲದ ಮೊತ್ತವನ್ನು ಕೆಎಫ್’ಎ ಅಧಿಕೃತವಾಗಿ ಘೋಷಿಸಿತ್ತು. ಹಾಗಿದ್ದರೂ ಸಹ ಇಡಿ ಮತ್ತು ಬ್ಯಾಂಕುಗಳು 8000 ಕೋಟಿ ಹೆಚ್ಚಿನ ಹಣವನ್ನು ಪಡೆದುಕೊಂಡಿವೆ ಎಂದು ಮಲ್ಯ ಆರೋಪ ಮಾಡಿದ್ದಾರೆ.
ಸರ್ಕಾರ ಮತ್ತು ನನ್ನ ಟೀಕಾಕಾರರು ನಾನು ಸಿಬಿಐಗೆ ಉತ್ತರ ನೀಡಬೇಕು ಎನ್ನುತ್ತಾರೆ. ಆದರೆ ನಾನು ಮಾಡಿರುವ ತಪ್ಪೇನು? ನಾನು ಕೆಎಫ್ಎ ಗೆ ಶೂರಿಟಿಧಾರನಾಗಿ ಮಾತ್ರವೇ ಇದ್ದೆ. ಆದರೆ ಸಿಬಿಐ ನನ್ನ ಮೇಲೆ ಐಡಿಬಿಐ ಬ್ಯಾಂಕಿಮ 900 ಕೋಟಿ ವಂಚನೆ ಆರೋಪ ಹೊರಿಸಿದೆ. ಆದರೆ ಅದನ್ನು ಐಡಿಬಿಐ ನ ಬೋರ್ಡ್ ನವರು ಅಪ್ರೂವ್ ಮಾಡಿರುವುದು. ಹಾಗಿದ್ದರೂ ಸಹ 9 ವರ್ಷಗಳಾದರೂ ನನ್ನ ವಿರುದ್ಧ ಒಂದು ಸಾಕ್ಷ್ಯವನ್ನೂ ಸಹ ನೀಡಲು ಸಾಧ್ಯವಾಗಿಲ್ಲ ಏಕೆ ಎಂದು ಮಲ್ಯ ಪ್ರಶ್ನೆ ಮಾಡಿದ್ದಾರೆ.
Zomato: 10 ರೂಪಾಯಿ ನಿಒರೊನ ಬಾಟಲಿಗೆ ನೂರು ರೂಪಾಯಿ ಬಿಲ್! ಉಗಿಸಿಕೊಂಡ ಜೊಮ್ಯಾಟೊ
ಒಟ್ಟಾರೆ ಹೇಳುವುದಾದರೆ ಮಲ್ಯ ಅವರ ಮೇಲಿದ್ದ ಸಾಲದ ದುಪ್ಪಟ್ಟು ಹಣವನ್ನು ಸರ್ಕಾರ ಮತ್ತು ಬ್ಯಾಂಕುಗಳು ಈಗಾಗಲೆ ವಸೂಲಿ ಮಾಡಿಕೊಂಡಿವೆ. ಆದರೂ ಸಹ ಅವರ ಮೇಲೆ ಕೆಲವು ಪ್ರಕರಣಗಳು ಚಾಲ್ತಿಯಲ್ಲಿವೆ. ಆ ಪ್ರಕರಣಗಳ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡುವುದಾಗಿ ಮಲ್ಯ ಹೇಳಿದ್ದಾರೆ.