World Meditation Day: ಧ್ಯಾನದ ಲಾಭಗಳು ಸಾವಿರಾರು

0
65
World Meditation Day

World Meditation Day

ಇಂದು ವಿಶ್ವ ಧ್ಯಾನದ ದಿನ. ಯೋಗ ಮತ್ತು ಧ್ಯಾನ ಭಾರತೀಯ ಸಂಸ್ಕೃತಿಕ ಅವಿಭಾಜ್ಯ ಅಂಗಗಳಾಗಿವೆ. ಯೋಗ ಮತ್ತು ಧ್ಯಾನವನ್ನು ವಿಶ್ವಕ್ಕೆ ನೀಡಿದ್ದೆ ಭಾರತೀಯರು. ಧ್ಯಾನದ ಲಾಭಗಳು ಸಾವಿರಾರು. ಇಂದಿನ ಬಲು ವೇಗದ ಜೀವನ ಶೈಲಿಯಲ್ಲಿ ಧ್ಯಾನ ಅತ್ಯಂತ ಅವಶ್ಯಕವಾದುದು. ಈ ಬಿಡುವಿಲ್ಲದ ಜೀವನ ಶೈಲಿ ಮಾನವನಲ್ಲಿ ಹುಟ್ಟು ಹಾಕಿರುವ ಹಲವು ಸಮಸ್ಯೆಗಳಿಗೆ ಯೋಗ ಮತ್ತು ಧ್ಯಾನ ಪರಿಹಾರ ಆಗಬಲ್ಲದು.

ಇಂದು ವಿಶ್ವ ಧ್ಯಾನದ ದಿನವಾದ್ದರಿಂದ ಧ್ಯಾನದಿಂದ ಮಾನವನಿಗೆ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿ ಇಲ್ಲಿದೆ.

ಒತ್ತಡ ದೂರಾಗುತ್ತದೆ

ಧ್ಯಾನದಿಂದ ಆಗುವ ಪ್ರಮುಖ ಲಾಭವೆಂದರೆ ಒತ್ತಡದಿಂದ ಮುಕ್ತಿ. ಇಂದಿನ ಬಿಡುವಿಲ್ಲದ ಜೀವನ ಶೈಲಿಯಲ್ಲಿ ಪ್ರತಿಯೊಬ್ಬನು ಒತ್ತಡವನ್ನು ಅನುಭವಿಸುತ್ತಿದ್ದಾರೆ. ಆಂಗ್ಲಭಾಷೆಯಲ್ಲಿ ಇದಕ್ಕೆ ಸ್ಟ್ರೆಸ್ ಎಂಬ ಹೆಸರಿದೆ. ಒತ್ತಡವನ್ನು ನಿವಾರಣೆ ಮಾಡಲು ಧ್ಯಾನ ಬಹಳ ಅವಶ್ಯಕವಾದುದು.

ಏಕಾಗ್ರತೆ ಹೆಚ್ಚಿಸುತ್ತದೆ

ಧ್ಯಾನವು ಮನುಷ್ಯನ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಪ್ರತಿದಿನ ತಪ್ಪದೆ ಧ್ಯಾನ ಮಾಡುವವರ ಏಕಾಗ್ರತೆ ಅದ್ಭುತವಾಗಿರುತ್ತದೆ. ಹಾಗಾಗಿ ವಿದ್ಯಾರ್ಥಿಗಳಿಗೂ ಸಹ ಧ್ಯಾನ ಎಂಬುದು ಬಹಳ ಮುಖ್ಯ.

ನಿದ್ರಾಹೀನತೆ ದೂರ

ಧ್ಯಾನದಿಂದ ನಿದ್ರಾಹೀನತೆ ದೂರವಾಗುತ್ತದೆ. ಧ್ಯಾನದಿಂದ ನಿಮ್ಮ ನಿದ್ದೆಯ ಗುಣಮಟ್ಟವೂ ಉತ್ತಮವಾಗುತ್ತದೆ. ಕೆಟ್ಟ ಕನಸುಗಳು, ಅರೆನಿದ್ರೆ, ನಿದ್ರಾಹೀನತೆ ನಶಿಸುತ್ತದೆ.

ಖಿನ್ನತೆ ನಿವಾರಣೆ

ಖಿನ್ನತೆ ಅಥವಾ ಡಿಪ್ರೆಶನ್ ಎನ್ನುವುದು ಇತ್ತೀಚೆಗಿನ ದಿನಗಳಲ್ಲಿ ತೀರಾ ಸಾಮಾನ್ಯ ಎಂಬಂತಾಗಿದೆ. ಧ್ಯಾನ ಮಾಡುವುದರಿಂದ ಖಿನ್ನತೆ ಬರದೇ ಇರುತ್ತದೆ. ಖಿನ್ನತೆಯ ಗುಣಲಕ್ಷಣಗಳು ಕಡಿಮೆ ಆಗುತ್ತವೆ.

ರಕ್ತದ ಒತ್ತಡ ಕಡಿಮೆ ಆಗುತ್ತದೆ

ಧ್ಯಾನವು ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ. ಒತ್ತಡದ ಜೀವನಶೈಲಿಯಿಂದ ರಕ್ತದ ಒತ್ತಡ ಅಥವಾ ಬಿಪಿ ಬರುವ ಸಾಧ್ಯತೆ ಇರುತ್ತದೆ. ಧ್ಯಾನವು ಒತ್ತಡ ನಿವಾರಣೆ ಮಾಡುತ್ತದೆಯಾದ್ದರಿಂದ ರಕ್ತದ ಒತ್ತಡವೂ ಕಡಿಮೆ ಆಗುತ್ತದೆ.

Vijay Mallya: ವಿಜಯ್ ಮಲ್ಯ ಸಾಲ ತೀರಿತೆ? ಸರ್ಕಾರಕ್ಕೆ, ಬ್ಯಾಂಕಿಗೆ ಕೊಟ್ಟ ಬಾಕಿ ಎಷ್ಟು?

ಶಾಂತಚಿತ್ಥತೆ

ಯಾವುದೇ ಸಂದರ್ಭದಲ್ಲಿ ಶಾಂತವಾಗಿರುವುಕ್ಕೆ ಹಾಗೂ ಶಾಂತಚಿತ್ಥತೆಯಿಂದ ಸನ್ನಿವೇಶಗಳನ್ನು ನಿಭಾಯಿಸುವ ಶಕ್ತಿ ಧ್ಯಾನದಿಂದ ಹೆಚ್ಚಾಗುತ್ತದೆ. ಸಮಾಧಾನದ ಮನಸ್ಥಿತಿ ಮೂಡುತ್ತದೆ.

ಉತ್ತಮ ಆಲೋಚನೆ

ಧ್ಯಾನದಿಂದ ಮನಸ್ಸಿನಲ್ಲಿ ಉದ್ಭವಿಸುವ ಕೆಟ್ಟ ಆಲೋಚನೆಗಳು ದಿನೇ-ದಿನೇ ಕಡಿಮೆ ಆಗುತ್ತವೆ. ಅದರ ಬದಲಿಗೆ ಉತ್ತಮ ಯೋಚನೆಗಳು, ಆಲೋಚನೆಗಳು ಮನಸ್ಸಿನಲ್ಲಿ ಮೂಡಲು ಆರಂಭಿಸುತ್ತವೆ. ಧುಗುಡ ಕಡಿಮೆ ಆಗುತ್ತದೆ.

LEAVE A REPLY

Please enter your comment!
Please enter your name here