Businessman: ರಸ್ತೆ ಬದಿಯಲ್ಲಿ ಹಾಲು ಮಾರುತ್ತಿದ್ದ ವ್ಯಕ್ತಿಯ ಆದಾಯ ಈಗ ದಿನಕ್ಕೆ 32 ಕೋಟಿ

0
288
Businessman

Businessman

ನಿಜವಾದ ಶ್ರದ್ಧೆ, ಸ್ವಲ್ಪ ಬುದ್ಧಿವಂತಿದೆ, ನಿಯತ್ತು, ಚುರುಕುತನ ಮತ್ತು ತುಸು ಅದೃಷ್ಟ ಇದ್ದುಬಿಟ್ಟರೆ ಎಂಥಹಾ ಸಾಮಾನ್ಯ ವ್ಯಕ್ತಿಯೂ ಸಹ ಸ್ಟಾರ್ ಆಗಿಬಿಡುತ್ತಾನೆ. ರಸ್ತೆ ಬದಿಯಲ್ಲಿ ಹಾಲು ಮಾರುತ್ತಿದ್ದ ವ್ಯಕ್ತಿ ಸಹ ಸಾವಿರಾರು ಕೋಟಿಯ ಒಡೆಯನಾಗಬಹುದು. ಇದಕ್ಕೆ ಉದಾಹರಣೆಯೆಂದರೆ ರಿಜ್ವಾನ್ ಸಾಜನ್. ಒಂದು ಕಾಲದಲ್ಲಿ ರಸ್ತೆ ಬದಿಯಲ್ಲಿ ಪುಸ್ತಕ, ತರಕಾರಿ, ಹಾಲು ಮಾರಾಟ ಮಾಡುತ್ತಿದ್ದ ಈ ವ್ಯಕ್ತಿಯ ದಿನದ ಆದಾಯ 32 ಕೋಟಿ ರೂಪಾಯಿ.

ಸೌದಿ ಅರೆಬಿಯಾದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ರಿಜ್ವಾನ್ ಸಾಜನ್ ಅವರದ್ದು ಬಲುದೊಡ್ಡ ಹೆಸರು. ಸೌದಿ ಅರೆಬಿಯಾನಲ್ಲಿ ಈ ವರೆಗೆ ಸಾವಿರಾರು ಮನೆಗಳನ್ನು ನಿರ್ಮಿಸಿ ಬಡವರಿಗೆ, ಮಧ್ಯಮ ವರ್ಗದವರಿಗೆ ಮಾರಾಟ ಮಾಡಿರುವ ದಾನುಬೆ ಗ್ರೂಪ್​ನ ಮಾಲೀಕ ಈ ರಿಜ್ವಾನ್ ಸಾಜನ್. ಮುಂಬೈನ ಅತ್ಯಂತ ಬಡಕುಟುಂಬದಲ್ಲಿ ಜನಿಸಿದ ರಿಜ್ವಾನ್ ಸಾಜನ್. ಹಣ ಗಳಿಸಲು ಮುಂಬೈನ ಬೀದಿ ಬದಿಯಲ್ಲಿ ಪುಸ್ತಕ, ಹಾಲು, ತರಕಾರಿ ಇತ್ಯಾದಿಗಳನ್ನು ಮಾರಾಟ ಮಾಡುತ್ತಿದ್ದರು. ಆದರೆ ಈಗ ದುಬೈನ ದೊಡ್ಡ ಶ್ರೀಮಂತರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ.

ರಿಜ್ವಾನ್ ಅವರ ತಂದೆಯ ನಿಧನದ ಕಾರಣದಿಂದ 1981 ರಲ್ಲಿ ಅವರು ಕುವೈತ್​ಗೆ ಹೋದರು. ಅಲ್ಲಿ ಸೇಲ್ಸ್​ಮ್ಯಾನ್ ಆಗಿ ಉದ್ಯೋಗ ಆರಂಭ ಮಾಡಿದರು. ಆ ನಂತರ ವ್ಯಾಪಾರದಲ್ಲಿ ಆಸಕ್ತಿ ಬೆಳೆಸಿಕೊಂಡ ರಿಜ್ವಾನ್ ಕುವೈತ್​ಗೆ ಹೋದ 12 ವರ್ಷಗಳ ನಂತರ ದಾನುಬೆ ಸಂಸ್ಥೆ ಆರಂಭ ಮಾಡಿದರು. ಆರಂಭದಲ್ಲಿ ಕಟ್ಟಡ ನಿರ್ಮಾಣಕ್ಕೆ ಬೇಕಾದ ಸರಕುಗಳನ್ನು ಮಾರಾಟ ಮಾಡುತ್ತಿದ್ದ ಈ ಸಂಸ್ಥೆ ವರ್ಷಗಳು ಕಳೆದಂತೆ ಅನುಭವ ಗಿಟ್ಟಿಸಿಕೊಂಡು, ನೇರವಾಗಿ ರಿಯಲ್ ಎಸ್ಟೇಟ್​ಗೆ ಇಳಿಯಿತು. ಇಂದು ಅಪಾರ್ಟ್​ಮೆಂಟ್ ನಿರ್ಮಾಣ, ಇಂಟೀರಿಯರ್ ಸೇರಿದಂತೆ ಹಲವು ಉದ್ಯಮಗಳಲ್ಲಿ ಈ ಸಂಸ್ಥೆ ತೊಡಗಿಕೊಂಡಿದೆ. ಇವರ ಉದ್ಯಮ, ಖತಾರ್, ಭಾರತ, ಬಹ್ರೇನ್, ಸೌದಿ ಅರೆಬಿಯಾ, ಒಮನ್ ಇನ್ನಿತರೆ ಕಡೆಗಳಲ್ಲಿ ವ್ಯಾಪಿಸಿದೆ.

Businessman: ತನ್ನ ಬಳಿ ಕೆಲಸ ಮಾಡುತ್ತಿದ್ದ 400 ಜನರನ್ನು ಕೋಟ್ಯಧೀಶರನ್ನಾಗಿ ಮಾಡಿದ ಮಾಲೀಕ

ರಿಜ್ವಾನ್ ಈಗ ಪ್ರತಿ ವರ್ಷಕ್ಕೆ 10 ಬಿಲಿಯನ್ ದಿರಾಮ್​ಗಳನ್ನು ಗಳಿಸುತ್ತಾರೆ ಅಂದರೆ ಒಂದು ದಿನಕ್ಕೆ 32 ಕೋಟಿ ರೂಪಾಯಿಗಳು ರಿಜ್ವಾನ್ ಆದಾಯ. ತಮ್ಮ ಈ ಯಶಸ್ಸಿಗೆ ತಮ್ಮ ಸೇಲ್ಸ್​ಮ್ಯಾನ್​ ಬುದ್ಧಿಯೇ ಕಾರಣ ಎಂದಿದ್ದಾರೆ. ಸೇಲ್ಸ್​ಮ್ಯಾನ್ ವೃತ್ತಿಯಿಂದಾಗಿಯೇ ತಾವು ಇಂದು ಯಶಸ್ಸು ಗಳಿಸಿದ್ದಾಗಿ ರಿಜ್ವಾನ್ ಹೇಳಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here