Siddaramaiah: ಶ್ರೀಮಂತ ಸಿಎಂಗಳಲ್ಲಿ ಸಿದ್ದರಾಮಯ್ಯಗೆ ಮೂರನೇ ಸ್ಥಾನ, ಮೊದಲ ಸ್ಥಾನ ಯಾರಿಗೆ?

0
88
CM Siddaramaiah

Siddaramaiah

ಸಿಎಂ ಸಿದ್ದರಾಮಯ್ಯ ಯಮ್ಮ ಸಮಾಜವಾದಿ ಆದರ್ಶಗಳಿಂದ ಜನಪ್ರಿಯರು. ಇತ್ತೀಚೆಗೆ ಪ್ರಕಟವಾಗಿರುವ ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮಸ್ ವರದಿಯ ಪ್ರಕಾರ ದೇಶದ ಅತ್ಯಂತ ಶ್ರೀಮಂತ ಸಿಎಂಗಳ ಪಟ್ಟಿಯಲ್ಲಿ ಸಿದ್ದರಾಮಯ್ಯ ಅವರಿಗೆ ಮೂರನೇ ಸ್ಥಾನ. ಸಿದ್ದರಾಮಯ್ಯ ಬಳಿ 52.59 ಕೋಟಿ ಮೌಲ್ಯದ ಆಸ್ತಿ ಇದೆ. ವಿಶೇಷವೆಂದರೆ ದೇಶದಲ್ಲಿ ಅತಿ ಹೆಚ್ಚು ಸಾಲ ಹೊಂದಿರುವ ಸಿಎಂ ಗಳ ಪಟ್ಟಿಯಲ್ಲಿ ಸಿದ್ದರಾಮಯ್ಯ ಅವರಿಗೆ ಎರಡನೇ ಸ್ಥಾನ ಇದೆ. ಅವರ ಸಾಲದ ಮೊತ್ತ 23 ಕೋಟಿ ರೂಪಾಯಿಗಳು.

ಸಿದ್ದರಾಮಯ್ಯ ಅವರು ದೇಶದ ಮೂರನೇ ಶ್ರೀಮಂತ ಸಿಎಂ ಏನೋ ಹೌದು, ಆದರೆ ಅವರ ಮೇಲಿರುವ ಇಬ್ಬರ ಒಟ್ಟು ಆಸ್ತಿಗೂ ಸಿದ್ದರಾಮಯ್ಯ ಅವರ ಆಸ್ತಿಗೂ ನಡಯವೆ ಬಹಳ ದೊಡ್ಡ ಅಂತರ ಇದೆ. ನೆರೆಯ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ದೇಶದ ಅತ್ಯಂತ ಶ್ರೀಮಂತ ಸಿಎಂ ಅವರ ಒಟ್ಟು ಆಸ್ತಿ ಮೌಲ್ಯ ಬರೋಬ್ಬರಿ 931 ಕೋಟಿ ರೂಪಾಯಿಗಳು. ಎರಡನೇ ಸ್ಥಾನದಲ್ಲಿ ಅರುಣಾಚಲ ಪ್ರದೇಶದ ಪೇಮಾ ಖಾಂಡು, ಅವರ ಒಟ್ಟು ಆಸ್ತಿ ಮೌಲ್ಯ 332 ಕೋಟಿ ರೂಪಾಯಿಗಳು.

931 ಕೋಟಿ ಆಸ್ತಿ ಹೊಂದಿದ್ದರೂ ಸಹ ಚಂದ್ರಬಾಬು ನಾಯ್ಡು ಅವರಿಗೆ ಇರುವುದು ಕೇವಲ 10 ಕೋಟಿ ಸಾಲವಷ್ಟೆ. ಅದೇ ಅರುಣಾಚಲದ ಪೇಮಾ ಖಾಂಡುಗೆ 180 ಕೋಟಿ ಸಾಲ ಇದೆ. ಅತಿ ಹೆಚ್ಚು ಸಾಲ ಹೊಂದಿದ ಸಿಎಂಗಳ ಪಟ್ಟಿಯಲ್ಲಿ ಅವರಿಗೆ ಮೊದಲ ಸ್ಥಾನ. 23 ಕೋಟಿ ಸಾಲ ಹೊಂದಿರುವ‌ ಸಿದ್ದರಾಮಯ್ಯ ಅವರಿಗೆ ಎರಡನೇ ಸ್ಥಾನ. ಸಿದ್ದರಾಮಯ್ಯ ಅವರು ಸುಮಾರು 7 ಕೋಟಿ ಹಣವನ್ನು ಬ್ಯಾಂಕ್ ನ ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದಾರೆ. ಬಾಂಡ್, ಷೇರು, ಡಿಬೆಂಚರ್ ಗಳಲ್ಲಿ 2.42 ಕೋಟಿ, 33 ಲಕ್ಷದ ಎಲ್’ಐಸಿ ಪಾಲಿಸಿ, 97 ಲಕ್ಷದ ಆಭರಣಗಳು, 30 ಕೋಟಿ ಮೌಲ್ಯದ ಸ್ಥಿರಾಸ್ತಿ ಸಹ ಹೊಂದಿದ್ದಾರೆ.

World Meditation Day: ಧ್ಯಾನದ ಲಾಭಗಳು ಸಾವಿರಾರು

ಎಡಿಆರ್ ವರದಿ ಪ್ರಕಾರ ದೇಶದ 13 ಸಿಎಂಗಳ ಮೇಲೆ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ. ಅದರಲ್ಲಿ ಹತ್ತು ಸಿಎಂಗಳ ಮೇಲೆ ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳು, ಅಂದರೆ ಹತ್ಯೆ ಪ್ರಯತ್ನ, ಬೆದರಿಕೆ, ಅಪಹರಣಗಳಂತಹಾ ಪ್ರಕರಣಗಳು ದಾಖಲಾಗಿವೆ.

LEAVE A REPLY

Please enter your comment!
Please enter your name here