Weekly Astrology: ಹೊಸ ವರ್ಷದ ಎರಡನೇ ವಾರ ಹೇಗಿದೆ ಭವಿಷ್ಯ

0
295
Weekly Astrology

Weekly Astrology

ಮೇಷ ರಾಶಿ:

ಮೊದಲೇ ರಾಶಿಯಾದ ಮೇಷ ರಾಶಿಯವರಿಗೆ ಜನವರಿ ತಿಂಗಳ ಎರಡನೇ ವಾರ ಮಿಶ್ರ ಫಲ ಇದೆ. ಈ ವಾರ ಪೋಷಕರಿಂದ ಆರ್ಥಿಕ ಸಹಾಯ ಸಿಗಲಿದೆ. ಕೆಲಸ ಮಾಡುವಾಗ ಗೊಂದಲದ ಪರಿಸ್ಥಿತಿ ಉಂಟಾಗಲಿದೆ. ಯೋಚಿಸಿ ಕೆಲಸ ಮಾಡಿ. ಬಟ್ಟೆಗಳ ವಿಷಯದಲ್ಲಿ ಎಚ್ಚರಿಕೆ ಇರಲಿ. ಉದ್ಯಮಿಗಳಿಗೆ ಹೊಸ ಅವಕಾಶ ಸಿಗಲಿದೆ. ಕೆಲವು ಹಳೆಯ ಗಳೆಯರು ಸಿಗುವರು. ವಾರದ ಅಂತ್ಯದಲ್ಲಿ ಮಾನಸಿಕ ಗೊಂದಲ ನಿರ್ಮಾಣ ಆಗಲಿದೆ.

ವೃಷಭ ರಾಶಿ:

ವೃಷಭ ರಾಶಿಗೆ ಈ ವಾರ ಮಿಶ್ರ ಫಲ ಇದೆ. ಉದ್ಯೋಗದಲ್ಲಿ ಕೆಲವರಿಗೆ ಹಿನ್ನಡೆ ಆಗುವ ಸಾಧ್ಯತೆ ಇದೆ. ಕೆಲಸ ಮಾಡಿದಷ್ಟೂ ಈ ವಾರ ಆದಾಯ ಬರುತ್ತದೆ. ಅತಿಯಾದ ಕೆಲಸ ಮಾಡಿ ದಣಿವು ಮಾಡಿಕೊಳ್ಳಬೇಡಿ. ನೀಚ ಜನರಿಂದ ದೂರ ಇರಿ. ನಿಮ್ಮ ಒಳ್ಳೆಯತನವನ್ನು ಕೆಟ್ಟಕಾರ್ಯಕ್ಕೆ ಬಳಸಿಕೊಳ್ಳುವರು. ಪ್ರಯಾಣದ ವೇಳೆ ಬಹಳ ಎಚ್ಚರವಾಗಿರಿ. ದೂರದ ಪ್ರಯಾಣ ಬೇಡ. ಅನ್ಯರ ಬಗ್ಗೆ ಕೆಟ್ಟದು ಯೋಚಿಸಬೇಡಿ, ಅನ್ಯರಿಗೆ ಕೆಟ್ಟದು ಬಯಸಬೇಡಿ.

ಮಿಥುನ ರಾಶಿ:

ಮಿಥುನ ರಾಶಿಯವರಿಗೆ ಈ ವಾರ ಮಿಶ್ರ ಫಲವೇ ಇದೆ. ಈ ವಾರ ಪತ್ನಿ ಅಥವಾ ಪ್ರೇಯಸಿಯೊಂದಿಗೆ ಸಂಬಂಧ ಉತ್ತಮಗೊಳ್ಳಲಿದೆ. ಹಣಕಾಸಿನ ವಿಷಯದಲ್ಲಿ ಸಮಸ್ಯೆಗಳು ನಿರ್ಮಾಣ ಆಗಲಿವೆ. ಬಂಧುಗಳು ಮನೆಗೆ ಆಗಮಿಸಲಿದ್ದಾರೆ. ವ್ಯಾಪಾರಿಗಳಿಗೆ ನಷ್ಟ ಆಗುವ ಸಾಧ್ಯತೆ ಇದೆ. ವೃತಾ ಸಮಯ ವ್ಯರ್ಥ ಮಾಡಬೇಡಿ. ಬೇರೆಯವರನ್ನು ನೋಡಿ ಸ್ಪೂರ್ತಿ ಪಡೆಯಿರಿ.

ಕರ್ಕಾಟಕ ರಾಶಿ:

ಕರ್ನಾಟಕ ರಾಶಿಯವರಿಗೆ ಈ ವಾರ ಶುಭ ವಾರ ಆಗಿದೆ. ಆತ್ಮಸ್ಥೈರ್ಯ ಹೆಚ್ಚಾಗಲಿದೆ. ಕೃಷಿಕರಿಗೆ ಇದು ಒಳ್ಳೆಯ ಸಮಯ. ಆದರೆ ಜಿಪುಣತನ ಯಾರಿಗೂ ಒಳ್ಳೆಯದಲ್ಲ. ಒಮ್ಮೆಲೆ ಹೆಚ್ಚು ಹಣ ಮಾಡುವ ಆಸೆ ನಿಮಗೆ ಬೇಡ. ಕೆಲವು ಹೊಸ ಮಿತ್ರರು ಸಿಗುವರು. ತಾಳ್ಮೆಯಿಂದ ಕೆಲಸ ಮಾಡಿ, ವಾರದ ಅಂತ್ಯದಲ್ಲಿ ಅಶುಭ ವಾರ್ತೆ ಬರಲಿದೆ. ಬೇರೆ ಊರಿಗೆ ಪ್ರಯಾಣ ಮಾಡಬೇಕಾಗಬಹುದು.

ಸಿಂಹ ರಾಶಿ:

ಸಿಂಹ ರಾಶಿಯವರಿಗೆ ಈ ವಾರ ಮಿಶ್ರ ಫಲವಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಪ್ರಗತಿ ಸಿಗಲಿದೆ. ಉದ್ಯೋಗಕ್ಕಾಗಿ ಬೇರೆ ಊರಿಗೆ ಹೋಗುವ ಸಾಧ್ಯತೆ ಇದೆ. ನಿಮ್ಮ ನೇರ ಮಾತುಗಳಿಂದ ಕೆಲವರ ವಿರೋಧ ಕಟ್ಟಿಕೊಳ್ಳುವಿರಿ. ಆರೋಗ್ಯದ ಬಗ್ಗೆ ಗಮನ ಇರಲಿ. ಆರ್ಥಿಕ ಸಂಕಷ್ಟ ಕಾಡಲಿದೆ. ಬರಬೇಕಾದ ಹಣ ನಿಮಗೆ ಬರುವುದಿಲ್ಲ. ಗೆಳೆಯರು ಮೋಸ ಮಾಡುವರು.

ಕನ್ಯಾ ರಾಶಿ:

ಕನ್ಯಾ ರಾಶಿಗೆ ಈ ವಾರ ಶುಭ ಫಲ ಇದೆ. ಜಗಳಗಳು ಇತ್ಯರ್ಥ ಆಗಲಿವೆ. ಮನೆಯಲ್ಲಿ ಒಳ್ಳೆಯ ವಾತಾವರಣ ನಿರ್ಮಾಣ ಆಗಲಿದೆ. ಉದ್ಯೋಗಾಸಕ್ತರಿಗೆ ಇದು ಒಳ್ಳೆಯ ಸಮಯ. ಅಂದುಕೊಂಡ ಉದ್ಯೋಗ ಸಿಗಲಿದೆ. ದಾಂಪತ್ಯದಲ್ಲಿ ನೆಮ್ಮದಿ ಇರಲಿದೆ. ನೀವು ಮಾಡಿದ ಸೇವೆಗೆ ಪ್ರತಿಯಾಗಿ ಗೌರವ ಸಿಗಲಿದೆ. ಹಾಕಿಕೊಂಡ ಯೋಜನೆಗಳು ಕೈಗೂಡಲಿವೆ. ಅನ್ಯತಾ ಯಾರನ್ನೂ ದೂಷಿಸಬೇಡಿ.

ತುಲಾ ರಾಶಿ:

ತುಲಾ ರಾಶಿಯವರಿಗೂ ಸಹ ಈ ವಾರ ಮಿಶ್ರ ಫಲ ಇದೆ. ವಿದ್ಯಾರ್ಥಿಗಳಿಗೆ ಈ ವಾರ ಒಳಿತಾಗಲಿದೆ. ಕಷ್ಟಪಟ್ಟರೆ ಒಳ್ಳೆಯ ಅಂಕಗಳು ಸಿಗಲಿವೆ. ಅಲಕ್ಷ್ಯ ಮಾಡಬೇಡಿ, ವಿಶೇಷವಾಗಿ ಉದ್ಯೋಗದಲ್ಲಿ ಅಲಕ್ಷ್ಯ ಸರಿಯಲ್ಲ. ನಿಮ್ಮ ಮನಸ್ಸು ಅತಿ ಚಾಂಚಲ್ಯದಿಂದ ಇರಲಿದೆ. ವಿದೇಶ ಪ್ರಯಾಣ ಯೋಗ ಇದೆ. ಅತಿಯಾದ ಮಾತಿನಿಂದಾಗಿ ಕೆಲವು ನಷ್ಟಗಳು ನಿಮಗೆ ಉಂಟಾಗಲಿದೆ.

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿವರಿಗೆ ಈ ವಾರ ಮಿಶ್ರ ಫಲ ಇರಲಿದೆ. ಈ ವಾರ ಪ್ರವಾಸದ ಮನಸ್ಸು ಇರಲಿದೆ. ನಿಮ್ಮ ಮಾತುಗಳನ್ನು ಹತ್ತಿರದವರು ತಪ್ಪಾಗಿ ಅರ್ಥೈಸಿಕೊಳ್ಳುವರು. ದಾನ, ಧರ್ಮಗಳ ಕಡೆ ಮನಸ್ಸು ವಾಲಲಿದೆ. ಸಾಮಾಜಿಕ ಕಾರ್ಯದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಲಿದ್ದೀರಿ. ಬೇರೆಯವರು ಮಾಡಿದ ತಪ್ಪು ನಿಮ್ಮ ತಲೆಗೆ ಬರುತ್ತದೆ. ಬೇರೆಯವರ ಕರ್ಮದ ಫಲ ಅನುಭವಿಸಲಿದ್ದೀರಿ.

ಧನು ರಾಶಿ:

ರಾಶಿ ಚಕ್ರದ ಒಂಭತ್ತನೇ ರಾಶಿಯವರಿಗೆ ಈ ವಾರ ರಾಶಿಯ ಅಧಿಪತಿ ಷಷ್ಠದಲ್ಲಿ ಬುಧನ ಅಂಶವನ್ನು ಪಡೆದು ಬಂಧುಗಳ ಜೊತೆ ವಿರಸವನ್ನು ತರಿಸುವನು. ನಿಮ್ಮ ಯೋಜನೆಗಳು ಕೈ ಗೂಡುವುದು ಕಷ್ಟ ಎನಿಸಲಿದೆ. ವ್ಯಾಪಾರಿಗಳು ಲಾಭದ ಸಾಧ್ಯತೆ ಇದೆ. ಅನಾರೋಗ್ಯ ಕಾಡಲಿದೆ. ಪೋಷಕರಿಗೂ ಅನಾರೋಗ್ಯ ಕಾಡಲಿದೆ. ಕೆಲಸದಲ್ಲಿ ಒತ್ತಡ ಹೆಚ್ಚಾಗಲಿದೆ. ಉದ್ಯೋಗ ಸ್ಥಳದಲ್ಲಿ ಹಿನ್ನಡೆ ಉಂಟಾಗಲಿದೆ.

ಮಕರ ರಾಶಿ:

ಮಕರ ರಾಶಿಯವರಿಗೆ ಈ ವಾರ ಮಿಶ್ರ ಫಲ ಇರಲಿದೆ. ಧನ ಲಾಭ ಆಗಲಿದೆ. ಗೆಳೆಯರು ಸಕಾಲಕ್ಕೆ ಸಹಾಯ ಮಾಡಲಿದ್ದಾರೆ. ಕೌಟುಂಬಿಕ ನೆಮ್ಮದಿ ಇರಲಿದೆ. ಅಂದುಕೊಂಡ ಕೆಲ ಕೆಲಸಗಳು ಕೈಗೂಡಲಿವೆ. ಕಾನೂನು ಪ್ರಕರಣಗಳಲ್ಲಿ ಹಿನ್ನಡೆ ಆಗಬಹುದು. ಹಣಕಾಸಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ತಾಳ್ಮೆಯೇ ನಿಮ್ಮನ್ನು ಕಾಪಾಡಲಿದೆ.

ಕುಂಭ ರಾಶಿ:

ಕುಂಭ ರಾಶಿಗೆ ಈ ವಾರ ಶುಭ ಫಲ ಸಿಗಲಿದೆ. ಈ ವಾರ ಅನಾರೋಗ್ಯ ದೂರಾದ ಭಾವ ಮೂಡುವುದು, ದೇಹದಲ್ಲಿ ಉತ್ಸಾಹ ಮೂಡಲಿದೆ. ಉದ್ಯೋಗದಲ್ಲಿ ಬೇಸರ ಮೂಡಬಹುದು. ಮನಸ್ಸಿನ ಕೈಗೆ ಬುದ್ಧಿ ಕೊಡಬೇಡಿ. ವಿವೇಚನೆಯಿಂದ ಎಲ್ಲ ಹೆಜ್ಜೆಗಳನ್ನು ಇಡಿ. ಕೆಲವರು ನಿಮ್ಮ ಮಾತನ್ನು ನಿರ್ಲಕ್ಷ್ಯ ಮಾಡುವರು. ಕೆಲಸದ ಮೇಲೆ ನಂಬಿಕೆ ಇಟ್ಟಿರಿ, ಹಣಕಾಸು ಹೂಡಿಕೆ ವಿಚಾರದಲ್ಲಿ ಎಚ್ಚರಿಕೆ ಇರಲಿ. ಅನುಭವಿಗಳ ಮಾತು ಕೇಳಿ ಹೆಜ್ಜೆ ಇಡಿ.

Weekly Astrology: ಈ ವರ್ಷದ ಕೊನೆಯ ವಾರ ಯಾರ ಭವಿಷ್ಯ ಹೇಗಿದೆ?

ಮೀನ ರಾಶಿ:

ಕುಟುಂಬದಲ್ಲಿ ಆತ್ಮೀಯತೆ ಇರುವುದು. ಕಲಾವಿದರಿಗೆ ಇದು ಒಳ್ಳೆಯ ಸಮಯ. ಅನವಶ್ಯಕ ತ್ಯಾಗ ಮನೋಭಾವ ಬೆಳೆಯಲಿದೆ. ಸ್ನೇಹಿತರು ದೂರಾಗುವರು. ಉದ್ಯೋಗದಲ್ಲಿ ಕೆಲ ಸಮಸ್ಯೆಗಳು ಎದುರಾಗಲಿವೆ. ನಿಮ್ಮ ಮಾತನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ವಿದ್ಯಾರ್ಥಿಗಳಿಗೆ ತುಸು ಹಿನ್ನಡೆ ಆಗಲಿದೆ. ಒಳ್ಳೆಯ ಭವಿಷ್ಯ ನಿರ್ಮಾಣಕ್ಕೆ ಇದು ಒಳ್ಳೆಯ ಸಮಯ.

LEAVE A REPLY

Please enter your comment!
Please enter your name here