Beer: ಮತ್ತೆ ಮದ್ಯ ಪ್ರಿಯರ ಜೇಬಿಗೆ ಕೈಹಾಕಿದ ಸರ್ಕಾರ, ಈ ಬಾರಿ ಎಷ್ಟು ಹೆಚ್ಚಳ?

0
248
Beer

Beer

ಒಂದರ ಹಿಂದೊಂದು ಉಚಿತ ಯೋಜನೆಗಳನ್ನು ಜಾರಿಗೊಳಿಸಿರುವ ಕರ್ನಾಟಕ ಸರ್ಕಾರದ ಖಜಾನೆ ಖಾಲಿ ಆಗಿದೆ ಎಂದು ವಿಪಕ್ಷಗಳು ಆರೋಪ ಮಾಡುತ್ತಲೇ ಬಂದಿವೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಕೆಲ ಸಚಿವರು ಈ ಆರೋಪವನ್ನು ತಳ್ಳಿ ಹಾಕಿದ್ದಾರಾದರೂ ವಿಪಕ್ಷಗಳ ಆರೋಪ ಪೂರ್ಣ ಸುಳ್ಳಲ್ಲ ಎಂದುಬು ಸರ್ಕಾರದ ಕೆಲ ನಡೆಗಳಿಂದ ತಿಳಿದು ಬರುತ್ತಿದೆ. ಅಲ್ಲದೆ, ಆಡಳಿತ ಪಕ್ಷದ ಕೆಲ ಸಚಿವರೇ ಉಚಿತ ಯೋಜನೆಗಳನ್ನು ಟೀಕಿಸಿ, ಸರ್ಕಾರದ ಖಜಾನೆ ಖಾಲಿ ಆಗಿರುವುದಾಗಿ ಹೇಳಿದ್ದಾರೆ. ಹೀಗಿರುವಾಗ ಈಗ ಸರ್ಕಾರದ ಖಜಾನೆ ತುಂಬಿಸಲು ರಾಜ್ಯ ಸರ್ಕಾರ ಮತ್ತೊಮ್ಮೆ ಮದ್ಯ ಪ್ರಿಯರ ಜೇಬಿಗೆ ಕೈ ಹಾಕಿದೆ.

ಕರ್ನಾಟಕದಲ್ಲಿ ಮತ್ತೊಮ್ಮೆ ಮದ್ಯದ ಬೆಲೆಗಳನ್ನು ಹೆಚ್ಚು ಮಾಡುತ್ತಿದೆ ರಾಜ್ಯ ಸರ್ಕಾರ. ರಾಜ್ಯದಲ್ಲಿ ಅತಿ ಹೆಚ್ಚು ಮಾರಾಟವಾಗುವ ಬಿಯರ್ ಬೆಲೆಯನ್ನು ಏರಿಸಲು ಸರ್ಕಾರ ಮುಂದಾಗಿದೆ. ಬೇಸಗೆ ಹತ್ತಿರದಲ್ಲೇ ಇದ್ದು ಬಿಯರ್’ಗಳ ಮಾರಾಟದಲ್ಲಿ ಭಾರಿ ಏರಿಕೆ ಆಗಲಿದೆ. ಇದನ್ನೇ ಗಮನದಲ್ಲಿಟ್ಟುಕೊಂಡು ಬಿಯರ್ ಬೆಲೆಯನ್ನು ಸರ್ಕಾರ ಹೆಚ್ಚಿಸುತ್ತಿದೆ. ಅಂದಹಾಗೆ ಕೆಲವೇ ತಿಂಗಳ ಅವಧಿಯಲ್ಲಿ ಮೂರನೇ ಬಾರಿ ಸರ್ಕಾರ ಬಿಯರ್ ಬೆಲೆ ಹೆಚ್ಚಳ‌ ಮಾಡುತ್ತಿದೆ.

ಕರ್ನಾಟಕ ಸರ್ಕಾರ ಕಳೆದ 15 ತಿಂಗಳಲ್ಲಿ ಮೂರನೇ ಬಾರಿ ಬಿಯರ್ ಬೆಲೆ ಹೆಚ್ಚಳ ಮಾಡಲಿದೆ. ಕಳೆದ ಎರಡು ಬಾರಿಗಿಂತಲೂ ಎರಡು ಪಟ್ಟು ಬೆಲೆ ಹೆಚ್ಚಳ ಮಾಡಲಿದೆಯಂತೆ ಸರ್ಕಾರ. 15 ತಿಂಗಳ ಹಿಂದೆ ಪ್ರತಿ ಬಾಟಲಿ ಮೇಲೆ 10 ರೂಪಾಯಿ ದರ ಹೆಚ್ಚಳ ಮಾಡಲಾಗಿತ್ತು. ಕಳೆದ ವರ್ಷ ಆಗಸ್ಟ್ ನಲ್ಲಿ ಅಬಕಾರಿ ತೆರಿಗೆ ಹೆಚ್ಚಳ ಮಾಡಲಾಯ್ತು. ಇದರಿಂದ ಪ್ರತಿ ಬಾಟಲಿ ಮೇಲೆ 15 ರಿಂದ 20 ರೂಪಾಯಿ ಬೆಲೆ ಹೆಚ್ಚಾಯ್ತು. ಈಗ ಪ್ರತಿ ಬಾಟಲಿ ಮೇಲೆ 40 ರಿಂದ 50 ರೂಪಾಯಿ ಬೆಲೆ ಹೆಚ್ಚಳಕ್ಕೆ ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದೆ.

ಈ ಬಾರಿ ಬೆಲೆ ಏರಿಕೆಯ ಬಳಿಕ ಇಡೀ ದೇಶದಲ್ಲಿ ಅತಿ ಹೆಚ್ಚು ಬೆಲೆಗೆ ಬಿಯರ್ ಮಾರಾಟ ಮಾಡಯವ ರಾಜ್ಯ ಕರ್ನಾಟಕ ಆಗಲಿದೆ. ಈಗ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ದೇಶದಲ್ಲಿಯೇ ಕರ್ನಾಟಕದಲ್ಲಿ ಬಿಯರ್ ಬೆಲೆ ಈಗಾಗಲೇ ಹೆಚ್ಚಿದೆ. ಸರ್ಕಾರದ ಬೆಲೆ ಏರಿಕೆಯಿಂದ ಈಗ ಇನ್ನಷ್ಟು ದುಬಾರಿ ಆಗಲಿದೆ ಬಿಯರ್. ಆದರೆ ಸರ್ಕಾರಕ್ಕೆ ಮಾತ್ರ ಇದರಿಂದ ಭಾರಿ ಲಾಭ ಆಗಲಿದೆ. ಈ ಬೆಲೆ ಏರಿಕೆಯಿಂದ ಸರ್ಕಾರಕ್ಕೆ ವಾರ್ಷಿಕ 20 ರಿಂದ 30 ಸಾವಿರ ಕೋಟಿ ಹೆಚ್ಚುವರಿ ಹಣ ಸಂಗ್ರಹ ಆಗುವ ಸಾಧ್ಯತೆ ಇದೆ.

Pakistan: ಬರ್ಬಾದ್ ಆಗಿದ್ದ ಪಾಕಿಸ್ತಾನಕ್ಕೆ ಹೊಡೆದಿದೆ ಜಾಕ್ ಪಾಟ್, ಅದೃಷ್ಟವೋ ಅದೃಷ್ಟ

ಬಿಯರ್ ಸಂಸ್ಥೆಗಳು, ಈಗಾಗಲೇ ಸರ್ಕಾರದ ಬಳಿ ಬೇಡಿಕೆ ಇಟ್ಟಿದ್ದು ಬಿಯರ್ ಬೆಲೆ ಏರಿಸದಂತೆ ಮನವಿ ಮಾಡಿವೆ. ಆದರೆ ಆರ್ಥಿಕವಾಗಿ ದುರ್ಬಲ ಆದಂತೆ ತೋರುತ್ತಿರುವ ರಾಜ್ಯ ಸರ್ಕಾರ ಬೆಲೆ ಏರಿಸಿಯೇ ತೀರುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here