Darshan: ‘ನಮ್ಮ ಪ್ರೀತಿಯ ರಾಮು’ ಬಿಡುಗಡೆ ಆದಾಗ ಎರಡು ವಿಷಯಕ್ಕೆ ದರ್ಶನ್​ಗೆ ಆಗಿತ್ತು ಬೇಜಾರು

0
130
Darshan

Darshan

ದರ್ಶನ್ ನಟನೆಯ ‘ನಮ್ಮ ಪ್ರೀತಿಯ ರಾಮು’ ಸಿನಿಮಾ ಇಂದು (ಫೆಬ್ರವರಿ 13) ಮರು ಬಿಡುಗಡೆ ಆಗುತ್ತಿದೆ. 2003 ರಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ದರ್ಶನ್​ರ ಪ್ರಮುಖ ಸಿನಿಮಾಗಳಲ್ಲಿ ಒಂದು. ಇದೀಗ ಎರಡು ದಶಕದ ಬಳಿಕ ಈಗ ಮತ್ತೆ ಈ ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ಆದರೆ ಈ ಸಿನಿಮಾ ಬಿಡುಗಡೆ ಆದಾಗ ದರ್ಶನ್ ಬಹಳ ಅಪ್​ಸೆಟ್ ಆಗಿದ್ದರಂತೆ.

‘ನಮ್ಮ ಪ್ರೀತಿಯ ರಾಮು’ ಸಿನಿಮಾದ ಪಾತ್ರಕ್ಕಾಗಿ ದರ್ಶನ್ ಬಹಳ ಕಷ್ಟಪಟ್ಟಿದ್ದರು. ಸಿನಿಮಾದಲ್ಲಿ ಹುಟ್ಟು ಕುರುಡನ ಪಾತ್ರದಲ್ಲಿ ನಟಿಸಿದ್ದ ದರ್ಶನ್, ಚಿತ್ರೀಕರಣದ ಸಮಯದಲ್ಲಿ ಕಣ್ಣ ಪಾಪೆಗಳನ್ನು ಬಲವಂತವಾಗಿ ಮೇಲಕ್ಕೆ ಎಳೆದುಕೊಂಡು ಸಂಪೂರ್ಣವಾಗಿ ಕಣ್ಣು ಕಾಣದ ಸ್ಥಿತಿಗೆ ತಮ್ಮನ್ನು ತಾವು ತಂದುಕೊಂಡು ನಟಿಸಿದ್ದರು. ದರ್ಶನ್​ರ ಶ್ರಮಕ್ಕೆ ಅವರ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಈ ಸಿನಿಮಾಕ್ಕೆ ದರ್ಶನ್ ಹಾಕಿದ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿಲ್ಲ.

‘ನಮ್ಮ ಪ್ರೀತಿಯ ರಾಮು’ ಸಿನಿಮಾ ನವೆಂಬರ್ 14, 2003 ರಂದು ಬಿಡುಗಡೆ ಆಗಿತ್ತು. ಆದರೆ ಈ ಸಿನಿಮಾ ಚಿತ್ರಮಂದಿರಗಳಲ್ಲಿ ನಿರೀಕ್ಷಿತ ಪ್ರದರ್ಶನ ಕಾಣಲಿಲ್ಲ. ಅದಕ್ಕೆ ಕಾರಣವಾಗಿದ್ದು ಸ್ವತಃ ದರ್ಶನ್! ‘ನಮ್ಮ ಪ್ರೀತಿಯ ರಾಮು’ ಸಿನಿಮಾ ಬಿಡುಗಡೆ ಆಗಿ ಕೇವಲ ಒಂದು ವಾರಕ್ಕೆ ದರ್ಶನ್ ನಟನೆಯ ‘ದಾಸ’ ಸಿನಿಮಾ ಬಿಡುಗಡೆ ಆಯ್ತು. ಇದು ‘ನಮ್ಮ ಪ್ರೀತಿಯ ರಾಮು’ ಸಿನಿಮಾಕ್ಕೆ ಹೊಡೆತ ನೀಡಿತು. ಅದಾಗ್ಯೂ ಬೆಂಗಳೂರಿನ ಕೆಲ ಚಿತ್ರಮಂದಿರದಲ್ಲಿ 50 ದಿನ ಹಾಗೂ ಮೈಸೂರಿನ ಒಂದು ಚಿತ್ರಮಂದಿರದಲ್ಲಿ ನೂರು ದಿನಗಳ ಪ್ರದರ್ಶನವನ್ನು ಈ ಸಿನಿಮಾ ಕಂಡಿತು. ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ಕಾಣದ್ದಕ್ಕೆ ದರ್ಶನ್​ಗೆ ಬೇಸರವಾಗಿತ್ತು.

Darshan: ದರ್ಶನ್​ಗೆ ನೊಟೀಸ್ ಕೊಟ್ಟ ಪೊಲೀಸರು, ಬಂದೂಕು ಮರಳಿಸುವಂತೆ ಸೂಚನೆ

ದರ್ಶನ್​ಗಿದ್ದ ಮತ್ತೊಂದು ಬೇಸರವೆಂದರೆ ಈ ಸಿನಿಮಾಕ್ಕೆ ಅವರಿಗೆ ಪ್ರಶಸ್ತಿ ಸಿಗಲಿಲ್ಲ. ಪ್ರಶಸ್ತಿ ಸಿಗಬಹುದಾದಂತಹಾ ಅದ್ಭುತ ನಟನೆಯನ್ನೇ ದರ್ಶನ್ ಮಾಡಿದ್ದರು. ಆದರೆ ಸಿನಿಮಾದ ನಿರ್ಮಾಪಕರು ಆಂತರಿಕ ಭಿನ್ನಾಭಿಪ್ರಾಯಗಳ ಕಾರಣ ಈ ಸಿನಿಮಾವನ್ನು ಪ್ರಶಸ್ತಿ ಸಮಿತಿಗೆ ಕಳಿಸಲೇ ಇಲ್ಲ. ಇದು ದರ್ಶನ್ ಹಾಗೂ ನಿರ್ಮಾಪಕರ ನಡುವೆ ಸಣ್ಣ ಮಟ್ಟದ ಕಲಹಕ್ಕೂ ಕಾರಣವಾಯ್ತು.

ಇದೀಗ ಬರೋಬ್ಬರಿ 22 ವರ್ಷಗಳ ಬಳಿಕ ಸಿನಿಮಾ ಮರು ಬಿಡುಗಡೆ ಆಗಿದೆ. ಬೆಂಗಳೂರಿನ ಹಲವು ಚಿತ್ರಮಂದಿರಗಳ ಜೊತೆಗೆ ಹೈದರಾಬಾದ್​ನ ಕೆಲವು ಚಿತ್ರಮಂದಿರಗಳಲ್ಲಿಯೂ ಸಿನಿಮಾ ಅನ್ನು ಮರು ಬಿಡುಗಡೆ ಮಾಡಲಾಗಿದೆ. ಈ ಬಾರಿ ಸಿನಿಮಾಕ್ಕೆ ಎಂಥಹಾ ಪ್ರತಿಕ್ರಿಯೆ ಸಿಗುವುದೋ ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here