Isaac Newton
ಜನಪ್ರಿಯ ವ್ಯಕ್ತಿಗಳಿಗೆ ಸೇರಿದ ವಸ್ತುಗಳನ್ನು ಹರಾಜು ಹಾಕುತ್ತಿರುತ್ತಾರೆ. ಯಾರೋ ದುಡ್ಡಿದ್ದವರು ಅವುಗಳನ್ನು ಭಾರಿ ಮೊತ್ತಕ್ಕೆ ಖರೀದಿ ಮಾಡುತ್ತಾರೆ. ಹರಾಜು ಸಮಯದಲ್ಲಿ, ವ್ಯಕ್ತಿ ಬಳಸಿದ ಟೋಪಿಯನ್ನೋ, ಕಾರನ್ನೋ ಇನ್ನೂ ಕೆಲವು ವಸ್ತುಗಳನ್ನು ಹರಾಜು ಹಾಕಲಾಗುತ್ತದೆ. ಆದರೆ ಒಬ್ಬ ಮಹಾನ್ ವ್ಯಕ್ತಿ ನಿಧನ ಹೊಂದಿದ ಬಳಿಕ ಆತನ ಒಂದು ಹಲ್ಲನ್ನು ಹರಾಜು ಹಾಕಲಾಗಿತ್ತು. ಈಗ ಆ ಹಲ್ಲಿನ ಬೆಲೆ ಎಷ್ಟು ಗೊತ್ತೆ?
ಇಂದಿನ ಆಧುನಿಕ ವಿಜ್ಞಾನ, ವಿಶೇಷವಾಗಿ ಆಧುನಿಕ ಭೌತಶಾಸ್ತ್ರ ಉಗಮಕ್ಕೆ ಕಾರಣರಾದ ವ್ಯಕ್ತಿ ಸರ್ ಐಸಾಕ್ ನ್ಯೂಟನ್. 1727 ರಲ್ಲಿ ನ್ಯೂಟನ್ ನಿಧನ ಹೊಂದಿದರು. ಅವರು ನಿಧನರಾಗಿ ಸುಮಾರು ನೂರು ವರ್ಷದ ಬಳಿಕ ಅಂದರೆ 1816 ರಲ್ಲಿ ಲಂಡನ್ ನಲ್ಲಿ ಐಸಾಕ್ ನ್ಯೂಟನ್ ಅವರ ಹಲ್ಲನ್ನು ಹರಾಜು ಹಾಕಲಾಯ್ತು. ಆಧುನಿಕ ಸಂಪರ್ಕ ಸಾಧನಗಳೇ ಇಲ್ಲದ ಆ ಕಾಲದಲ್ಲೂ ತಮ್ಮ ಜ್ಞಾನದಿಂದಾಗಿ ಅತ್ಯಂತ ಜನಪ್ರಿಯರಾಗಿದ್ದ ನ್ಯೂಟನ್ ಅವರ ಹಲ್ಲನ್ನು ಖರೀದಿಸಲು ಜನ ಮುಗಿಬಿದ್ದಿದ್ದರು. 1816 ರಲ್ಲಿ ನ್ಯೂಟನ್ ಹಲ್ಲು 3,633 ಡಾಲರ್ ಗೆ ಹರಾಜಾಗಿತ್ತು. ಅದರ ಈಗಿನ ಮೌಲ್ಯ 32 ಲಕ್ಷಕ್ಕೂ ಹೆಚ್ಚಾಗುತ್ತದೆ. ಅಂದರೆ 1816 ರಲ್ಲಿಯೇ ನ್ಯೂಟನ್ ಹಲ್ಲು 32 ಲಕ್ಷ ರೂಪಾಯಿಗೆ ಮಾರಾಟವಾಗಿದೆ ಎನ್ನಬಹುದು.
ಆಗ ಆ ಹಲ್ಲನ್ನು ಖರೀದಿ ಮಾಡಿದ್ದ ವ್ಯಕ್ತಿ ಅದನ್ನು ಚಿನ್ನದ ಉಂಗುರದ ಒಳಗೆ ಇರಿಸಿದ್ದು, ಈಗ ಆ ಉಂಗುರ ಆ ಕುಟುಂಬದ ನಾಲ್ಕನೇ ತಲೆಮಾರಿನ ಕೈ ಸೇರಿದೆ. ಆಗ 3633 ಡಾಲರ್ ಗೆ ಹರಾಜಾಗಿದ್ದ ನ್ಯೂಟನ್ ನ ಹಲ್ಲಿನ ಬೆಲೆ ಈಗ ಅಂದಾಜು 62 ಸಾವಿರ ಡಾಲರ್ ಎನ್ನಲಾಗುತ್ತಿದೆ. ಒಂದೊಮ್ಮೆ ಈಗ ನ್ಯೂಟನ್ ಹಲ್ಲು ಹರಾಜಿಗೆ ಬಂದಲ್ಲಿ ಅದು ಹತ್ತಾರು ಮಿಲಿಯನ್ ಡಾಲರ್ ಗೆ ಹರಾಜಾಗಬಹುದು ಎನ್ನಲಾಗುತ್ತಿದೆ.
Sourav Joshi: 3 ಕೋಟಿ ಬೆಲೆಯ ಕಾರು ಖರೀದಿಸಿದ 24 ವರ್ಷದ ಯೂಟ್ಯೂಬರ್
ಐಸಾಕ್ ನ್ಯೂಟನ್, ವಿಶ್ವದ ಅತ್ಯುತ್ತಮ ವಿಜ್ಞಾನಿ ಎನ್ನಲಾಗುತ್ತಿದೆ. ಯಾವುದೇ ಆಧುನಿಕ ಉಪಕರಣಗಳ ಸಹಾಯ ಇಲ್ಲದೆ ಆ ವ್ಯಕ್ತಿ ಕ್ಯಾಲ್ಕ್ಯುಲಸ್ ಕಂಡು ಹಿಡಿದ, ಗುರುತ್ವಾಕರ್ಷಣೆ ಕಂಡು ಹಿಡಿದರು, ಚಲನೆಯ ನಿಯಮಗಳನ್ನು ನೀಡಿದರು. ಅವನ್ನು ಇಂದಿಗೂ ರಾಕೆಟ್ ಉಡಾವಣೆಯಲ್ಲಿ ಬಳಸಲಾಗುತ್ತದೆ. ಟೆಲಿಸ್ಕೋಪ್ ಕಂಡು ಹಿಡಿದರು. ಇದರಿಂದ ಬಾಹ್ಯಾಕಾಶ ವಿಜ್ಞಾನದಲ್ಲಿ ತ್ವರಿತ ಸಂಶೋಧನೆಗಳಾಗಲು ಸಾಧ್ಯವಾಯ್ತು. ನ್ಯೂಟನ್ ಸಾಧನೆಗಳು ಬಹಳ ಇವೆ.