Niveditha Gowda: ನಿವೇದಿತಾ ಗೌಡಗೆ ಹಣ ಎಲ್ಲಿಂದ ಬರುತ್ತದೆ?

0
53

Niveditha Gowda

ಚಂದನ್ ಶೆಟ್ಟಿ ಜೊತೆಗೆ ವಿಚ್ಛೇದನ ಪಡೆದ ಬಳಿಕ ನಟಿ ನಿವೇದಿತಾ ಗೌಡ ತಮ್ಮ ಗ್ಲಾಮರ್ ಅವತಾರವನ್ನು ಸೋಷಿಯಲ್ ಮೀಡಿಯಾನಲ್ಲಿ ತೋರಿಸಲು ಆರಂಭಿಸಿದ್ದಾರೆ. ರೀಲ್ಸ್ ಮಾಡಲೆಂದೇ ವಿಚ್ಛೇದನ ಪಡೆದಿರುವಂತೆ, ವಿಚ್ಛೇದನದ ಬಳಿಕ ನಿವೇದಿತಾ ಗೌಡ ಒಂದರ ಹಿಂದೊಂದು ಹಾಟ್​, ಸಖತ್ ಹಾಟ್ ವಿಡಿಯೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಲೇ ಇದ್ದಾರೆ.

ಬಾಲಿ, ಥಾಯ್ಲೆಂಡ್ ಇನ್ನೂ ಹಲವು ಕಡೆಗಳಿಗೆ ಪ್ರವಾಸ ಹೋಗುತ್ತಿರುವ ನಿವೇದಿತಾ ಗೌಡ, ಅಲ್ಲೆಲ್ಲ ಬಿಕಿನಿ, ಮಿನಿ ಇನ್ನಿತರೆ ಗ್ಲಾಮರ್ ಉಡುಗೆಗಳನ್ನು ತೊಟ್ಟು ಮಾದಕವನ್ನು ಸೊಂಟ ಕುಣಿಸುತ್ತಾ ವಿಡಿಯೋ ಮಾಡಿ ಹಂಚಿಕೊಳ್ಳುತ್ತಿದ್ದಾರೆ. ನಿವೇದಿತಾ ಗೌಡ, ಹಾಟ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ ನಿಜ ಆದರೆ ಈ ವಿದೇಶ ಪ್ರವಾಸಕ್ಕೆ, ಲಕ್ಷುರಿ ಬಟ್ಟೆಗಳ ಶಾಪಿಂಗ್​ಗೆ ಹಣ ಎಲ್ಲಿಂದ ಬರುತ್ತಿದೆ ಎಂಬ ಅನುಮಾನವನ್ನೂ ಸಹ ನೆಟ್ಟಿಗರು ವ್ಯಕ್ತಪಡಿಸಿದ್ದಾರೆ.

ನಿವೇದಿತಾ ಗೌಡ, ಚಂದನ್ ಶೆಟ್ಟಿ ಜೊತೆ ವಿಚ್ಛೇದನ ಪಡೆದುಕೊಂಡಾಗ ಮ್ಯೂಚ್ಯೂಲ್ ಎಂದರೆ ಇಬ್ಬರ ಒಪ್ಪಿಗೆ ಮೇಲೆ ಪಡೆದಿದ್ದು ಅಲ್ಲದೆ ಯಾವುದೇ ಜೀವನಾಂಶವನ್ನು ಸಹ ನಿವೇದಿತಾ ಗೌಡ ಪಡೆದಿಲ್ಲ. ನಿವೇದಿತಾ ಗೌಡ ಮೊದಲಿನಿಂದಲೂ ಸಹ ದೊಡ್ಡ ನಟಿಯೇನು ಅಲ್ಲ. ಆಕೆಯ ಬಳಿ ಯಾವುದೇ ಸಿನಿಮಾ ಅವಕಾಶಗಳು ಸಹ ಇಲ್ಲ. ಹಾಗಿದ್ದರೆ ನಿವೇದಿತಾ ಗೌಡ ಸಂಪಾದನೆ ಮಾಡುತ್ತಿರುವುದು ಹೇಗೆ?

ಅಸಲಿಗೆ ನಿವೇದಿತಾ ಗೌಡ ತೆಲುಗಿನ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾದಿಂದ ಸಣ್ಣ ಮೊತ್ತದ ಹಣ ಬಂದಿದೆ. ಆದರೆ ಇದರ ಜೊತೆಗೆ ನಿವೇದಿತಾ ಗೌಡ, ತಮ್ಮ ಹಾಟ್ ವಿಡಿಯೋ ಮತ್ತು ಚಿತ್ರಗಳನ್ನು ಸೋಷಿಯಲ್ ಮೀಡಿಯಾನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದರಿಂದ ನಿವೇದಿತಾಗೆ ಸಾಕಷ್ಟು ಹಣ ಸಿಗುತ್ತಿದೆ ಎನ್ನಲಾಗುತ್ತಿದೆ.

Daali Dhananjay: ಡಾಲಿ ಧನಂಜಯ್ ಮದುವೆಗೆ ಆದ ಖರ್ಚೆಷ್ಟು ಕೋಟಿ ಗೊತ್ತೆ?

ಸೋಷಿಯಲ್ ಮೀಡಿಯಾನಲ್ಲಿ ಹೆಚ್ಚು ಎಂಗೇಜ್ ಇರುವ ವಿಡಿಯೋ, ಚಿತ್ರಗಳಿಗೆ ಹಣ ಹೆಚ್ಚು ಕೊಡುತ್ತಾರೆ. ಹಾಗಾಗಿ ನಿವೇದಿತಾ ಗೌಡ ತಮ್ಮ ಹಾಟ್​ ಆಗಿರುವ ವಿಡಿಯೋಗಳನ್ನೇ ಹೆಚ್ಚಾಗಿ ಹಾಕುತ್ತಿದ್ದು, ಹಾಟ್ ವಿಡಿಯೋಗಳನ್ನು ಹಂಚಿಕೊಳ್ಳುವುದರಿಂದ ನಿವೇದಿತಾಗೆ ಹೆಚ್ಚು ಹಣ ಬರುತ್ತದೆ ಎನ್ನಲಾಗುತ್ತದೆ. ನಿವೇದಿತಾ ಗೌಡ ಮಾತ್ರವಲ್ಲ ದೇಶದ ಹಲವಾರು ಮಂದಿ ಇತ್ತೀಚೆಗೆ ಇದೇ ಹಾದಿಯಲ್ಲಿ ಹಣ ಮಾಡುತ್ತಿದ್ದಾರೆ. ಇವರನ್ನು ಸೋಷಿಯಲ್ ಮೀಡಿಯಾ ಇನ್​ಫ್ಲ್ಯುಯೆನ್ಸರ್ ಎನ್ನಲಾಗುತ್ತದೆ.

ನಿವೇದಿತಾ ಗೌಡ ಅವರ ಹಾಟ್ ವಿಡಿಯೋಗಳು ಒಂದೊಂದು ಲಕ್ಷಾಂತರ ವೀವ್ಸ್​ಗಳನ್ನು ಪಡೆಯುತ್ತಿವೆ. ವಿಡಿಯೋಗಳನ್ನು ನಿವೇದಿತಾ ಗೌಡ ಇನ್​ಸ್ಟಾಗ್ರಾಂ ಮತ್ತು ಫೇಸ್​ಬುಕ್ ಎರಡರಲ್ಲೂ ಹಂಚಿಕೊಳ್ಳುತ್ತಿದ್ದು ಇದರಿಂದ ನಟಿಗೆ ಒಳ್ಳೆಯ ಆದಾಯವೇ ಬರುತ್ತಿರುತ್ತದೆ. ಇದರ ಜೊತೆಗೆ ಬ್ರ್ಯಾಂಡ್ ಡೀಲ್​ಗಳು ಸಹ ನಿವೇದಿತಾಗೆ ಬರುವ ಸಾಧ್ಯತೆ ದಟ್ಟವಾಗಿದೆ. ನಿವೇದಿತಾ ಈವರೆಗೆ ಯಾವುದೇ ಇನ್​ಸ್ಟಾ ಬ್ರ್ಯಾಂಡ್ ಡೀಲ್ ಮಾಡಿಲ್ಲವಾದರೂ ಅದರಿಂದಲೂ ಸಾಕಷ್ಟು ದೊಡ್ಡ ಮೊತ್ತದ ಹಣವೇ ಬರುತ್ತದೆ.

LEAVE A REPLY

Please enter your comment!
Please enter your name here