Weekly Astrology: ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾವ ರಾಶಿಗೆ ದುರಾದೃಷ್ಟ

0
44
Weekly Astrology

Weekly Astrology

ಮಾರ್ಚ್ ತಿಂಗಳ ಮೂರನೇ ವಾರ ಬಂದಿದೆ. ಮಾರ್ಚ್ 10 ರಿಂದ 17ರ ವರೆಗೆ ಮೂರನೇ ವಾರ ಇರಲಿದೆ. ಈ ವಾರದಲ್ಲಿ ಕೆಲವು ಪ್ರಮುಖ ರಾಶಿ ನಕ್ಷತ್ರಗಳಲ್ಲಿ ಚಲನೆ ಕಂಡುಬರಲಿದ್ದು, ಕೆಲವು ರಾಶಿಯವರಿಗೆ ಬಹಳ ಒಳ್ಳೆಯ ಅದೃಷ್ಟ ಮತ್ತು ಕೆಲವರಿಗೆ ದುರಾದೃಷ್ಟ ಇರಲಿದೆ. ಯಾವ ರಾಶಿಗಳಿಗೆ ಅದೃಷ್ಟ, ಯಾವ ರಾಶಿಗಳಿಗೆ ದುರಾದೃಷ್ಟ ಎಂಬುದನ್ನು ಇಲ್ಲಿ ತಿಳಿಯಿರಿ.

ಮೇಷ ರಾಶಿ

ಈ ವಾರ ಮೇಷ ರಾಶಿಯವರಿಗೆ ಸಾಧಾರಣ ವಾರ ಆಗಿರಲಿದೆ. ತುಸು ಕಷ್ಟಗಳು ಬರಲಿವೆ, ಬಂದ ಕಷ್ಟಗಳನ್ನು ಧೈರ್ಯದಿಂದ ಎದುರಿಸಿ. ಯಾವುದಕ್ಕೂ ಭಯ ಪಡಬೇಡಿ. ಒಂಟಿ ಭಾವ ಕಾಡಬಹುದು, ಜೊತೆಗೆ ಇರುವವರ ಮೇಲೆ ಅನುಮಾನ, ಅಪನಂಬಿಕೆಯೂ ಬೆಳೆಯಬಹುದು. ಇತರರ ಮೇಲೆ ಕುತಂತ್ರ ಮಾಡಬೇಡಿ, ಕುತಂತ್ರದಿಂದ ಬಂದಿದ್ದು ಹೆಚ್ಚು ದಿನ ಬಾಳದು. ಸಂಗಾತಿಯ ಮೇಲೂ ಅನುಮಾನ ಮೂಡಲಿದೆ. ಕೆಲ ವಿವಾದಗಳಿಗೆ ಈಡಾಗಲಿದ್ದೀರಿ. ಹಣಕಾಸಿನ ಸಮಸ್ಯೆ ಸಹ ಕಾಡಲಿದೆ.

ವೃಷಭ ರಾಶಿ:

ವೃಷಭ ರಾಶಿಗೆ ಈ ವಾರ ಶುಭವಾಗಿ ಇರಲಿದೆ. ನಿಮ್ಮ ಆದಾಯ ಈ ವಾರ ಹೆಚ್ಚಾಗಲಿದೆ. ಆದಾಯಕ್ಕೆ ಹೊಸ ದಾರಿಗಳು ನಿಮಗೆ ಸಿಗಲಿವೆ. ನಿಮಗೆ ಶುಕ್ರದೆಶೆ ಇರಲಿದೆ. ಯೋಜನೆಗಳು ಸಫಲ ಆಗಲಿವೆ. ಒಳ್ಳೆಯ ಸಮಯವನ್ನು ಒಳ್ಳೆಯದಕ್ಕೆ ಬಳಸಿ. ಮಾನಸಿಕ ಆರೋಗ್ಯ ಹಾಳುಮಾಡಿಕೊಳ್ಳಬೇಡಿ. ವಿನಾಕಾರಣ ಅಸತ್ಯ ನುಡಿಯಬೇಡಿ. ಯಾರ ಮೇಲೂ ಸಿಟ್ಟು ಪ್ರದರ್ಶಿಸಬೇಡಿ, ವೈಷಮ್ಯ ಕಾರಬೇಡಿ. ಪತ್ನಿಯೊಟ್ಟಿಗೆ ಜಗಳ ಇರಲಿದೆ. ಬರಬೇಕಾದ ಬಾಕಿ ಹಣ ಬರಲಿದೆ. ಉದ್ಯೋಗಕ್ಕಾಗಿ ಪ್ರಯಾಣವನ್ನೂ ಮಾಡುವಿರಿ.

ಮಿಥುನ ರಾಶಿ:

ನಿಮಗೆ ಸಿಗಬೇಕಾದ ಗೌರವ ಸಿಗಲಿದೆ. ಕಲಾವಿದರಿಗೆ ಒಳ್ಳೆಯ ವಾರ ಇದಾಗಿದೆ. ಅತಿಯಾದ ಪ್ರಯಾಣ ಒಳಿತಲ್ಲ. ವಾಹನಗಳಿಂದ ತುಸು ದೂರವೇ ಇರಿ. ಋಣಾತ್ಮಕ ಚಿಂತನೆ ಬೇಡ. ಅನ್ಯ ವಿಷಯಗಳ ಕಡೆ ಮನಸ್ಸು ವಾಲಲಿದೆ. ಋಣಾತ್ಮಕ ಆಲೋಚನೆಗಳು ಮನದಲ್ಲಿ ತುಂಬಲಿವೆ. ಗಂಟಲಿಗೆ ಸಂಬಂಧಿಸಿದ ಸಮಸ್ಯೆ ಕಾಡಲಿದೆ ಆದರೆ ವಾಸಿಯೂ ಆಗಲಿದೆ. ಕಷ್ಟಗಳು ಒಂದೊಂದಾಗಿ ಕರಗಲಿವೆ, ಆತ್ಮವಿಶ್ವಾಸ ಕಳೆದುಕೊಳ್ಳುವುದು ಬೇಡ.

ಕರ್ಕಾಟಕ ರಾಶಿ:

ಕಳೆದ ಹೋಗಿದ್ದ ಆತ್ಮಗೌರವ ಮತ್ತೆ ಸಿಗಲಿದೆ. ಯಾರ ವಿರುದ್ಧ ದ್ವೇಷ ಸಾಧಿಸುವುದು ಬೇಡ. ನಿಮಗೆ ಅನ್ಯಾಯ ಮಾಡಿದವರಿಗೆ ನೀವು ಅನ್ಯಾಯ ಮಾಡಬೇಡಿ. ನಿಮ್ಮ ಸಮಯ ಚೆನ್ನಾಗಿದೆ. ಶ್ರಮಪಟ್ಟರೆ ಒಳ್ಳೆಯ ಹಣ ಸಂಪಾದನೆ ಆಗಲಿದೆ. ವ್ಯಾಪಾರಿಗಳಿಗೆ ಇದು ಒಳ್ಳೆಯ ಸಮಯ. ಹಿರಿಯರಿಂದ ನಿಮಗೆ ಲಾಭ ಆಗಲಿದೆ. ಸರ್ಕಾರಿ ಹುದ್ದೆಯಲ್ಲಿ ಇರುವವರು ತುಸು ಎಚ್ಚರಿಕೆಯಿಂದ ಇರಿ. ಮದುವೆ ಆಗಲು ಯತ್ನಿಸುತ್ತಿದ್ದರೆ ಇದು ಒಳ್ಳೆಯ ಸಮಯ.

ಸಿಂಹ ರಾಶಿ:

ಸಿಂಹ ರಾಶಿಯವರಿಗೆ ಈ ವಾರ ಅಷ್ಟು ಶುಭವಲ್ಲ. ಈ ವಾರ ಅನಾರೋಗ್ಯ ಕಾಡಲಿದೆ. ವೈದ್ಯರ ಸಲಹೆಗಳನ್ನು ನಿರ್ಲಕ್ಷ್ಯ ಮಾಡುವುದು ಬೇಡ. ಉದ್ಯೋಗದಲ್ಲಿ ಉನ್ನತಿ ಸಿಗಲಿದೆ. ಗೌರವ ಸಿಗಲಿದೆ. ವಾಹನ ಮಾರಾಟ ಅಥವಾ ಯಾವುದೇ ಯಂತ್ರ ಮಾರಾಟದಿಂದ ಲಾಭ ಆಗಲಿದೆ. ನಿಮ್ಮ ಆಪ್ತರೊಡನೆ ನೀವು ಹೆಚ್ಚು ಸಮಯ ಕಳೆಯಲಿದ್ದೀರಿ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಣೆ ಆಗಲಿದೆ. ದೂರ ಪ್ರವಾಸ ಹೋಗಿ ಬರಲಿದ್ದೀರಿ.

ಕನ್ಯಾ ರಾಶಿ:

ಈ ವಾರ ಕನ್ಯಾ ರಾಶಿಗೆ ಸಾಧಾರಣವಾಗಿ ಇರಲಿದೆ. ಆಲಸ್ಯ ನಿಮ್ಮನ್ನು ಕಾಡಲಿದೆ. ಬೇರೆಯವರಿಂದ ಆಗಬೇಕಾದ ನಿಮ್ಮ ಕೆಲಸಗಳು ಸಹ ನಿಧಾನವಾಗಿ ಆಗಲಿವೆ. ಮಾನಸಿಕ ತುಮುಲ ಉಂಟಾಗಲಿದೆ. ಉದ್ಯೋಗ ನಿಮಿತ್ತ ಓಡಾಟ ಹೆಚ್ಚಾಗಲಿದೆ. ಸಣ್ಣ ಕೆಲಸಕ್ಕೆ ಹೆಚ್ಚಿನ ಖರ್ಚು ಮಾಡಬೇಕಾಗುತ್ತದೆ. ಕುಟುಂಬದೊಟ್ಟಿಗೆ ತುಸು ಸಮಯ ಕಳೆಯಲಿದ್ದೀರಿ. ಆರೋಗ್ಯದ ಬಗ್ಗೆ ಗಮನ ಕೊಡಿ, ದೇವಾಲಯದ ಭೇಟಿ ತಪ್ಪಿಸಬೇಡಿ.

ತುಲಾ ರಾಶಿ:

ಪ್ರಭಾವಿಗಳಿಂದ ನಿಮಗೆ ಸಮಸ್ಯೆ ಆಗಲಿದೆ. ದೊಡ್ಡವರ ವಿರೋಧ ಕಟ್ಟಿಕೊಳ್ಳುವಿರಿ. ಸಂಸಾರದಲ್ಲಿ ಕಲಹ ಉಂಟಾಗಲಿದೆ. ಕೆಲ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಉಂಟಾಗಲಿದೆ. ಆಡುವ ಮಾತಿನಿಂದ ಸಮಸ್ಯೆಗೆ ಸಿಲುಕಿವಿರಿ. ನಿಮ್ಮ ಮಾತುಗಳಿಂದಲೇ ನಿಮಗೆ ಸಮಸ್ಯೆ ಆಗಲಿದೆ. ಸಂಗಾತಿಯೊಟ್ಟಿಗೆ ಪ್ರೀತಿ ಇರಲಿದೆ. ಉದ್ಯೋಗ ಸ್ಥಳದಲ್ಲಿ ಮನಸ್ಥಾಪ ಉಂಟಾಗಲಿದೆ. ಹಳೆಯ ಕೇಸು ನಿಮ್ಮ ಪರ ಆಗುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿಗೆ ಈ ವಾರ ಶುಭ ಫಲ ಇದೆ. ಶತ್ರುಗಳು ಈ ವಾರ ಮಿತ್ರರಾಗಲಿದ್ದಾರೆ. ಶತ್ರುಗಳಿಂದ ಸಹಾಯ ಸಿಗಲಿದೆ. ಉದ್ಯೋಗ ಹುಡುಕಾಡುತ್ತಿರುವವರಿಗೆ ಇದು ಒಳ್ಳೆಯ ಸಮಯ. ಅನವಶ್ಯಕವಾದ ಮಾತುಗಳು ಇಕ್ಕಟ್ಟಿಗೆ ಸಿಲುಕಿಸಲಿವೆ. ಕಲಾವಿದರಿಗೆ ಗೌರವ ಸಿಗಲಿದೆ. ದೂರ ಸಂಚಾರ ಮಾಡುವಾಗ ಎಚ್ಚರಿಕೆ ಇರಲಿ. ವಾಹನಗಳಿಂದ ತುಸು ದೂರವೇ ಇದ್ದರೆ ಒಳಿತು. ನಿಮ್ಮ ಬಗ್ಗೆ ಹೊಟ್ಟೆ ಕಿಚ್ಚು ಪಡುವ ಜನ ಹೆಚ್ಚಾಗಲಿದ್ದಾರೆ. ನೆರೆ-ಹೊರೆಯವರ ಜೊತೆ ಕಲಹ ಉಂಟಾಗಲಿದೆ.

ಧನು ರಾಶಿ:

ಪೋಷಕರಿಂದ ಅಗತ್ಯ ಸಮಯದಲ್ಲಿ ಸಹಕಾರ ಸಿಗಲಿದೆ. ಖರ್ಚು-ವೆಚ್ಚದ ಮೇಲೆ ನಿಯಂತ್ರಣ ಇರಲಿ. ಕೋಪದಿಂದ ನಿಮಗೆ ನಷ್ಟವಾಗಿದೆ. ನಿಮ್ಮ ಆತ್ಮಬಲವೇ ನಿಮ್ಮ ಶಕ್ತಿ ಅದನ್ನು ಬಿಡಬೇಡಿ. ಅನಗತ್ಯ ಸಾಲಕ್ಕೆ ಕೈ ಹಾಕುವುದು ಬೇಡ. ಲಾಭವಿಲ್ಲದೆ ಇತರರಿಗಾಗಿ ದುಡಿಯುವುದು ಬೇಡ. ನಿಮ್ಮ ಒಳ್ಳೆಯತನವನ್ನು ಯಾರೂ ದುರುಪಯಪಯೋಗ ಪಡಿಸಿಕೊಳ್ಳದಂತೆ ಎಚ್ಚರ ವಹಿಸಿ.

ಮಕರ ರಾಶಿ:

ಈ ವಾರ ಮಕರ ರಾಶಿಗೆ ಮಿಶ್ರ ಫಲ ಇರಲಿದೆ. ದುಷ್ಟ ಗೆಳೆಯರಿಂದ ಹಣಕಾಸಿನ ಸಮಸ್ಯೆಗೆ ಸಿಕ್ಕಿಕೊಳ್ಳುವಿರಿ. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವನ್ನು ಉತ್ತಮ ಪಡಿಸಿಕೊಳ್ಳಿ. ಕುಟುಂಬದೊಡನೆ ನಿಮ್ಮ ಬಾಂಧವ್ಯ ಚೆನ್ನಾಗಿ ಇರಲಿದೆ. ಇತರರ ಬಳಿ ನಿಮ್ಮ ಸಾಮರ್ಥ್ಯವನ್ನಷ್ಟೆ ಹೇಳಿ. ನಿಮ್ಮ ಬಗ್ಗೆ ನಿಮಗೆ ಅನುಮಾನ ಬೇಡವೇ ಬೇಡ. ಉದ್ಯೋಗದ ಸ್ಥಳದಲ್ಲಿ ಪ್ರಶಂಸೆಗೆ ಪಾತ್ರರಾಗುವಿರಿ.

ಕುಂಭ ರಾಶಿ:

ಕುಂಭ ರಾಶಿಗೆ ಈ ವಾರ ಶುಭ ಫಲ ಇರಲಿದೆ. ಸ್ತ್ರೀಯರಿಗೆ ಈ ವಾರ ಮಾನಸಿಕ ನೆಮ್ಮದಿ ಇರಲಿದೆ. ಅಂದುಕೊಂಡ ಕೆಲಸಗಳು ನಿಯಮಿತ ಸಮಯದಲ್ಲಿ ಮುಗಿಯಲಿದೆ. ಹಣದ ಹರಿವು ನಿಲ್ಲುವುದಿಲ್ಲ. ಯಾರಿಗೂ ಸಾಲ ನೀಡುವುದು ಬೇಡ, ಸಾಲವನ್ನು ಪಡೆಯುವುದು ಸಹ ಬೇಡ. ಗೆಳೆಯರೊಟ್ಟಿಗೆ ಜಗಳ ಮಾಡಿಕೊಳ್ಳಬೇಡಿ. ಯಾರೊಂದಿಗೂ ಕಲಹ ಬೇಡ. ಹಿರಿಯ ಸಂಪತ್ತಿನಿಂದ ನಿಮಗೆ ಸಹಾಯ ಆಗಲಿದೆ. ನಿಮ್ಮ ಮಾತನ್ನು ಜನ ಮೆಚ್ಚಿಕೊಳ್ಳುವರು. ಸಾಹಿತಿ, ಬರಹಗಾರರಿಗೆ ಈ ವಾರ ಉತ್ತಮವಾಗಿದೆ.

Weekly Astrology: ಈ ವಾರ ನಾಲ್ಕು ರಾಶಿಯವರಿಗೆ ಅದೃಷ್ಟ

ಮೀನ ರಾಶಿ:

ಮೀನ ರಾಶಿಯವರಿಗೆ ಈ ವಾರ ಮಿಶ್ರ ಫಲ ಇದೆ. ದ್ರವ ಪದಾರ್ಥ ವ್ಯಾಪಾರಿಗಳಿಗೆ ಇದು ಒಳ್ಳೆಯ ಸಮಯ. ಸೋಮಾರಿತನದಿಂದ ಕೆಲ ಅವಕಾಶಗಳನ್ನು ಕಳೆದುಕೊಳ್ಳುವಿರಿ. ಯಾವುದೇ ಕೆಲಸ ಮಾಡುವ ಮುಂಚೆ ಯೋಚನೆ ಮಾಡಿ ಹೆಜ್ಜೆ ಇಡಿ. ಕೆಟ್ಟ ಆಲೋಚನೆಗಳನ್ನು ತಲೆಯಿಂದ ತೆಗೆದು ಹಾಕಿ. ಬದಕುವ ಛಲವನ್ನು ಇಟ್ಟುಕೊಳ್ಳಿ. ಮನಸ್ಸಿಗೆ ನೆಮ್ಮದಿ ಸಿಗುವ ಕಾರ್ಯಗಳನ್ನು ಮಾಡಿ. ದೇವರ ಆರಾಧನೆ ಬಿಡಬೇಡಿ.

LEAVE A REPLY

Please enter your comment!
Please enter your name here