Pakistan: ಪಾಕಿಸ್ತಾನದ ಶ್ರೀಮಂತ ಹಿಂದು ಈತ, ಒಟ್ಟು ಆಸ್ತಿ ಮೌಲ್ಯ ಎಷ್ಟು ಗೊತ್ತೆ?

0
53
Pakistan

Pakistan

ಪಾಕಿಸ್ತಾನ ದೇಶದ ಅತಿ ದೊಡ್ಡ ಧಾರ್ಮಿಕ ಅಲ್ಪಸಂಖ್ಯಾತರೆಂದರೆ ಅದು ಹಿಂದುಗಳು. ಪಾಕಿಸ್ತಾನದಲ್ಲಿ ಇಸ್ಲಾಂ ಧರ್ಮೀಯರ ನಂತರ ಅತಿ ಹೆಚ್ಚು ಸಂಖ್ಯೆ ಹಿಂದುಗಳದ್ದು. 2023 ರ ಜನಸಂಖ್ಯೆ ಪ್ರಕಾರ, ಪಾಕಿಸ್ತಾನದಲ್ಲಿ 52 ಲಕ್ಷಕ್ಕೂ ಹೆಚ್ಚು ಹಿಂದುಗಳಿದ್ದಾರೆ. ಅಂದರೆ ಪಾಕಿಸ್ತಾನದ ಒಟ್ಟು ಜನಸಂಖ್ಯೆಯ 2.17% ಜನಸಂಖ್ಯೆ ಹಿಂದುಗಳದ್ದು. ವಿಶೇಷವಾಗಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಅತಿ ಹೆಚ್ಚು ಹಿಂದುಗಳಿದ್ದಾರೆ. ಹಿಂದು ದೇವಾಲಯಗಳು ಸಹ ಅಲ್ಲಿವೆ. ಸಿಂಧ್ ಪ್ರಾಂತ್ಯದಲ್ಲಿ ಸುಮಾರು 49 ಲಕ್ಷ ಹಿಂದು ಜನಸಂಖ್ಯೆ ಇದೆ ಎನ್ನಲಾಗಿದೆ.

ಹಿಂದುಗಳು, ಪಾಕಿಸ್ತಾನದಲ್ಲಿ ವ್ಯಾಪಾರ, ಕೃಷಿ, ಸರ್ಕಾರಿ ಮತ್ತು ಖಾಸಗಿ ಉದ್ಯೋಗ, ಮನೊರಂಜನಾ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಭಾರತದಂತೆ ಅಲ್ಲದೆ, ಪಾಕಿಸ್ತಾನ ಬಹಳ ಸಣ್ಣ ಆರ್ಥಿಕತೆ ಹೊಂದಿರುವ ದೇಶವಾದ್ದರಿಂದ, ಭಾರತದಂತೆ ಪಾಕಿಸ್ತಾನದಲ್ಲಿ ಹೆಚ್ಚು ಮಂದಿ ಶ್ರೀಮಂತರಿಲ್ಲ. ಅಂಬಾನಿ, ಅದಾನಿಗಳಂತೆ ಲಕ್ಷಾಂತರ ಕೋಟಿಗಳನ್ನು ಗಳಿಸಲು ಪಾಕಿಸ್ತಾನದಂಥಹಾ ಸಣ್ಣ ಆರ್ಥಿಕತೆ ಹೊಂದಿದ ದೇಶದಲ್ಲಿ ಸಾಧ್ಯವೂ ಆಗುವುದಿಲ್ಲ. ಆದರೆ ಪಾಕಿಸ್ತಾನದಲ್ಲಿ ಕೆಲವು ಕೊಟ್ಯಧಿಪತಿಗಳಂತೂ ಇದ್ದಾರೆ. ಅವರಲ್ಲಿ ಕೆಲವರು ಹಿಂದುಗಳು ಸಹ ಕೋಟ್ಯಧಿಪತಿಗಳಿದ್ದಾರೆ.

ಪಾಕಿಸ್ತಾನದ ಅತ್ಯಂತ ಶ್ರೀಮಂತ ಹಿಂದು ಎಂದು ಹೆಸರು ಗಳಿಸಿರುವವರು ದೀಪಕ್ ಪೆರವಾನಿ. ಸಿಂಧಿ ಕುಟುಂಬದ ದೀಪಕ್, ಹುಟ್ಟಿದ್ದು ಮೀರ್​ಪುರ್ ಖಾಸ್ ಪ್ರದೇಶದಲ್ಲಿ. ದೀಪಕ್ ಪೆರವಾನಿ ಪಾಕಿಸ್ತಾನಿ ಚಿತ್ರರಂಗದಲ್ಲಿ ಜನಪ್ರಿಯ ನಟರಾಗಿ ಗುರುತಿಸಿಕೊಂಡಿದ್ದಾರೆ. ಅದು ಮಾತ್ರವೇ ಅಲ್ಲದೆ ದೀಪಕ್ ಪೆರವಾನಿ ಪಾಕಿಸ್ತಾನದ ಜನಪ್ರಿಯ ಫ್ಯಾಷನ್ ಡಿಸೈನರ್ ಸಹ ಆಗಿದ್ದಾರೆ. ಡಿಪಿ ಹೆಸರಿನಲ್ಲಿ ಫ್ಯಾಷನ್ ಬ್ರ್ಯಾಂಡ್ ಅನ್ನು ದೀಪಕ್, ಪಾಕಿಸ್ತಾನದಲ್ಲಿ ಹೊಂದಿದ್ದಾರೆ. ಅವರ ಬ್ರ್ಯಾಂಡ್​ನ ಉಡುಪುಗಳಿಗೆ ಪಾಕಿಸ್ತಾನದಲ್ಲಿ ಬಹಳ ಒಳ್ಳೆಯ ಬೇಡಿಕೆ ಇದೆ.

2014 ರಲ್ಲಿ ದೀಪಕ್ ಪೆರವಾನಿ, ಜಗತ್ತಿನ ಆರನೇ ಅತ್ಯುತ್ತಮ ಫ್ಯಾಷನ್ ಡಿಸೈನರ್ ಎಂಬ ಹೆಸರು ಸಹ ಗಳಿಸಿದ್ದರು. ದೀಪಕ್ ಪೆರವಾನಿ ಪಾಕಿಸ್ತಾನದ ಹಲವು ರಾಜಕೀಯ ಮತ್ತು ಚಿತ್ರರಂಗದ ಸೆಲೆಬ್ರಿಟಿಗಳ ಉಡುಪು ವಿನ್ಯಾಸ ಮಾಡಿದ್ದಾರೆ. ಪಾಕಿಸ್ತಾನದ ಮಾತ್ರವೇ ಅಲ್ಲದೆ ಭಾರತದ ಸಿನಿಮಾ ಸೆಲೆಬ್ರಿಟಿಗಳ ಉಡುಪುಗಳನ್ನು ಸಹ ಅವರು ವಿನ್ಯಾಸ ಮಾಡಿದ್ದಾರೆ. ದೀಪಕ್ ಪೆರವಾನಿ ಪಾಕಿಸ್ತಾನದ ಬಹು ಜನಪ್ರಿಯ ಸೆಲೆಬ್ರಿಟಿ ಆಗಿದ್ದು, ಸಿನಿಮಾ ರಂಗ, ಫ್ಯಾಷನ್ ಮಾತ್ರವಲ್ಲದೆ ರಾಜಕೀಯ ರಂಗದಲ್ಲಿಯೂ ಬೇಡಿಕೆ ಇರುವ ವ್ಯಕ್ತಿಯಾಗಿದ್ದಾರೆ. ಪಾಕಿಸ್ತಾನದ ಸಾಂಸ್ಕೃತಿಕ ರಾಯಭಾರಿಯಾಗಿ ಸರ್ಕಾರದಿಂದ ನೇಮಕ ಆಗಿದ್ದಾರೆ ದೀಪಕ್.

Dharmasthala: ಧರ್ಮಸ್ಥಳದ ಬಗ್ಗೆ ವಿಡಿಯೋ, ಸ್ವತಃ  ಎಡಿಜಿಪಿಯಿಂದಲೇ ಪತ್ರ

2022 ರಲ್ಲಿ ದೀಪಕ್ ಪೆರವಾನಿಯ ಒಟ್ಟು ಆಸ್ತಿ ಮೌಲ್ಯ 71 ಕೋಟಿ ರೂಪಾಯಿಗಳಿತ್ತು. ಈ 71 ಕೋಟಿ ರೂಪಾಯಿ ಆಸ್ತಿ ಮೌಲ್ಯದ ಮೂಲಕ ದೀಪಕ್, ಪಾಕಿಸ್ತಾನದ ಅತ್ಯಂತ ಶ್ರೀಮಂತ ಹಿಂದು ಎನಿಸಿಕೊಂಡಿದ್ದರು. ಪಾಕಿಸ್ತಾನದ ಒಟ್ಟು ಹಿಂದೂಗಳ ಆಸ್ತಿ ಮೌಲ್ಯ ಸುಮಾರು 600 ಕೋಟಿ ರೂಪಾಯಿಗಳು ಇರಬಹುದು ಎಂದು ಅಂದಾಜಿಸಲಾಗಿದೆ.

LEAVE A REPLY

Please enter your comment!
Please enter your name here