Reliance
ಅದೃಷ್ಟ ಅಂದರೆ ಹೀಗೆ, ಯಾವಾಗ ಹೇಗೆ ಬರುತ್ತದೆ ಹೇಳಲಾಗದು. ಮನೆ ಸ್ವಚ್ಛ ಮಾಡುತ್ತಿದ್ದ ವ್ಯಕ್ತಿಯೊಬ್ಬನಿಗೆ ಕಸದಲ್ಲಿ ಸಿಕ್ಕ ಪತ್ರವೊಂದು ಅದೃಷ್ಟ ತಂದಿದೆ. ಅದೊಂದು ಪತ್ರದಿಂದಾಗಿ ಆ ವ್ಯಕ್ತಿಗೆ ಕೆಲ ಲಕ್ಷಗಳು ಅನಾಯಾಸವಾಗಿ ಬಂದಿದೆ. ಅಷ್ಟಕ್ಕೂ ಆ ವ್ಯಕ್ತಿಗೆ ಸಿಕ್ಕ ಪತ್ರದಲ್ಲಿ ಇದ್ದುದಾದರೂ ಏನು?
ಕೆಲ ದಿನಗಳ ಹಿಂದೆ ರತನ್ ದಿಲ್ಲೋನ್ ಹೆಸರಿನ ವ್ಯಕ್ತಿ ಮಾಡಿದ್ದ ಟ್ವೀಟ್ ಒಂದು ಸಖತ್ ವೈರಲ್ ಆಗಿತ್ತು. ರಿಲಯನ್ಸ್ ಹೆಸರಿದ್ದ ಪತ್ರವೊಂದನ್ನು ಟ್ವೀಟ್ ಮಾಡಲಾಗಿತ್ತು, ‘ ಮನೆ ಸ್ವಚ್ಛ ಮಾಡುವಾಗ ಈ ಪತ್ರ ಸಿಕ್ಕಿತು, ನನಗೆ ಷೇರು ಮಾರುಕಟ್ಟೆ ಬಗ್ಗೆ ಜ್ಞಾನವಿಲ್ಲ. ಯಾರಾದರೂ ತಿಳಿದವರು ಇದೇನು ಎಂದು ಹೇಳಿ’ ಎಂದು ಮನವಿ ಮಾಡಿಕೊಂಡಿದ್ದರು.
ಆ ವ್ಯಕ್ತಿ ಮಾಡಿದ್ದ ಟ್ವೀಟ್ ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿದೆ. ಅಸಲಿಗೆ ಆ ವ್ಯಕ್ತಿಗೆ ಸಿಕ್ಕಿದ್ದ ರಿಲಯನ್ಸ್ ಹೆಸರಿರುವ ಪತ್ರ, ರಿಲಯನ್ಸ್ ಷೇರುಗಳಾಗಿತ್ತು. ರತನ್ ದಿಲ್ಲೋನ್ ಅವರ ತಂದೆ 1988 ರಲ್ಲಿ ರಿಲಯನ್ಸ್ ಷೇರು ಖರೀದಿ ಮಾಡಿದ್ದರು. ಆಗ ಷೇರು ಖರೀದಿ ಮಾಡಿದ ಪತ್ರ ಅದಾಗಿತ್ತು. ಷೇರು ಪತ್ರದಲ್ಲಿ ಇದ್ದ ಮಾಹಿತಿಯಂತೆ ಆ ವ್ಯಕ್ತಿ 1988 ರಲ್ಲಿ ಪ್ರತಿ ಷೇರಿಗೆ 10 ರೂಪಾಯಿಯಂತೆ 30 ಷೇರು ಖರೀದಿ ಮಾಡಲಾಗಿತ್ತು.
1988 ರಲ್ಲಿ 300 ರೂಪಾಯಿಗೆ ಖರೀದಿಸಿದ ಷೇರುಗಳ ಮೌಲ್ಯ 11. 88 ಳ್ಷ ರೂಪಾಯಿಗಳು ಎನ್ನಲಾಗಿದೆ. ರಿಲಯನ್ಸ್ ಷೇರಿನ ಈಗಿನ ಮೌಲ್ಯ 1246 ಇದೆ. ಆದರೆ ಈ ಷೇರು ಎರಡು ಬಾರಿ ಸ್ಪ್ಲಿಟ್ ಆಗಿದೆ ಮತ್ತು ಎರಡು ಬಾರಿ ಬೋನಸ್ ಸಹ ನೀಡಲಾಗಿದೆ. ಹಾಗಾಗಿ 1988 ರಲ್ಲಿ ಖರೀದಿಸಲಾದ 30 ಷೇರಿನ ಮೌಲ್ಯ ಇಒಗ 11.88 ಲಕ್ಷ ರೂಪಾಯಿಗಳಾಗಿವೆ.
Fruits: ಕೀಟನಾಶಕ ಬಳಸಿದ ಹಣ್ಣು ತಿನ್ನುವ ಮುಂಚೆ ಹೀಗೆ ಮಾಡಲೇ ಬೇಕು
ಷೇರು ಮಾರುಕಟ್ಟೆಯಲ್ಲಿ ಇಂಥಹಾ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಒಮ್ಮೆಯಂತೂ ಹೀಗೆಯೇ ಸಿಕ್ಕಿದ ಷೇರು ಪತ್ರವೊಂದು ವ್ಯಕ್ತಿಯನ್ನು ಕೋಟ್ಯಧೀಶನನ್ನಾಗಿ ಮಾಡಿತ್ತು. ಆ ವ್ಯಕ್ತಿಯ ತಂದೆ ಎಂಆರ್ ಎಫ್ (MRF) ಕಂಪೆನಿಯ ಷೇರನ್ನು ದಶಕಗಳ ಹಿಂದೆ ಖರೀದಿಸಿದ್ದರು. ಖರೀದಿಸಿದ ವ್ಯಕ್ತಿಯ ಪುತ್ರನ ಕೈಗೆ ಷೇರು ಪತ್ರ ಸಿಗುವ ವೇಳೆಗೆ MRF ಷೇರಿನ ಬೆಲೆ 1 ಲಕ್ಷಕ್ಕೆ ಸನಿಹ ಬಂದಿತ್ತು. ಆ ವ್ಯಕ್ತಿ ಒಂದೇ ಹೊಡೆತಕ್ಕೆ ಕೋಟ್ಯಧೀಶ ಆಗಿಬಿಟ್ಟ.