Indian premier league
ಐಪಿಎಲ್ 2025 ಮೊದ ಪಂದ್ಯ ಇಂದು (ಮಾರ್ಚ್ 22) ಕೊಲ್ಕತ್ತದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯಲಿದೆ. ಪಂದ್ಯ ಆರಂಭಕ್ಕೂ ಮುನ್ನ ಕೆಲವು ಸಮಸ್ಯೆಗಳು ಎದುರಾಗಿವೆ. ಪಂದ್ಯಕ್ಕೆ ಮಳೆಯ ಆತಂಕ ಎದುರಾಗಿದೆ. ಈಗಾಗಲೇ ಕೊಲ್ಕತ್ತದಲ್ಲಿ ಕೆಲ ದಿನಗಳಿಂದ ಮಳೆ ಆಗಿದ್ದು, ಇದು ಪಿಚ್ಚನ ಪರಿಸ್ಥಿತಿಯ ಮೇಲೆ ಪರಿಣಾಮ ಬೀರಿದೆ. ಹವಾಮಾನಕ್ಕೆ ತಕ್ಕಂತೆ ತಂಡದ ಆಟಗಾರರಲ್ಲಿಯೂ ಬದಲಾವಣೆಗಳು ಆಗಲಿದ್ದು, ಈ ಕೆಲವು ಆಟಗಾರರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಮಧ್ಯಾಹ್ನದ ವೇಳೆಗೆ ಬರುತ್ತಿರುವ ಹವಾಮಾನ ಅಪ್ಡೇಟ್ ಪ್ರಕಾರ, ಮಧ್ಯಾಹ್ನದ ಈಡನ್ ಗಾರ್ಡನ್ ಮೈದಾನದ ಸುತ್ತ ಮುತ್ತ ಸ್ವಚ್ಛ ಆಕಾಶ ಇದೆ. ಆದರೆ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯಂತೆ ಸಂಜೆಯ ವೇಳೆಗೆ ಸುಮಾರು 7:30 ಸುಮಾರಿಗೆ ತುಸು ಮಳೆ ಸುರಿಯಬಹುದು ಎನ್ನಲಾಗುತ್ತಿದೆ. ಆದರೆ ಈಗಾಗಲೇ ಗ್ರೌಂಡ್ಸ್ ಮೆನ್ ಅನ್ನು ಸಜ್ಜುಗೊಳಿಸಲಾಗಿದ್ದು, ಸಣ್ಣ-ಪುಟ್ಟ ಮಳೆಯಿಂದ ಪಂದ್ಯವನ್ನು ರಕ್ಷಿಸಲು ಗ್ರೌಂಡ್ಸ್ಮನ್ ತಯಾರಾಗಿದ್ದಾರೆ.
ಇನ್ನು ಕೊಲ್ಕತ್ತ ಮತ್ತು ಆರ್ಸಿಬಿ ತಂಡದ ಐತಿಹಾಸಿಕ ಬಲಾಬಲ ನೋಡುವುದಾದರೆ ಈ ಎರಡೂ ತಂಡಗಳು ಐಪಿಎಲ್ ಟೂರ್ನಿಗಳಲ್ಲಿ 34 ಬಾರಿ ಪರಸ್ಪರ ಎದುರಾಗಿದ್ದಾರೆ. ಇದರಲ್ಲಿ ಹೆಚ್ಚು ಬಾರಿ ಗೆದ್ದಿರುವುದು ಕೊಲ್ಕತ್ತ. ಕೆಕೆಆರ್ ತಂಡ 20 ಪಂದ್ಯ ಗೆದ್ದಿದ್ದರೆ, ಆರ್ಸಿಬಿ ಪಂದ್ಯ 14 ಪಂದ್ಯಗಳನ್ನು ಗೆದ್ದಿದೆ. ವಿಶೇಷವೆಂದರೆ ಈ ವರೆಗೆ ಒಂದು ಬಾರಿಯೂ ಸಹ ಕೊಲ್ಕತ್ತ ಹಾಗೂ ಬೆಂಗಳೂರು ಪಂದ್ಯ ರದ್ದಾಗಿದ್ದಾಗಲಿ, ಟೈ ಆಗಿದ್ದಾಗಲಿ ಆಗಲಿ. ಪ್ರತಿ ಬಾರಿಯೂ ಪೂರ್ಣ ಪಂದ್ಯ ನಡೆದು ಫಲಿತಾಂಶ ಹೊರಬಿದ್ದಿದೆ.
ಇನ್ನು ಇಂದಿನ ಪಂದ್ಯದಲ್ಲಿ ತಂಡಗಳ ಬಲಾಬಲ ವೀಕ್ಷಿಸುವುದಾದರೆ ಆನ್ ಪೇಪರ್ ಕೊಲ್ಕತ್ತದ ಬೌಲಿಂಗ್ ತುಸು ಬಲವಾಗಿ ಕಾಣುತ್ತದೆ. ಆರ್ಸಿಬಿಯ ಬ್ಯಾಟಿಂಗ್ ಬಲವಾಗಿದೆ. ಕೊಲ್ಕತ್ತ ಬೌಲಿಂಗ್ ದಳದ ಮುಂದಾಳತ್ವ ವಹಿಸಿರುವುದು ಸುನಿಲ್ ನರೇನ್. ಐಪಿಎಲ್ನ ಅತ್ಯಂತ ಎಕಾನಮಿ ಮತ್ತು ವಿಕೆಟ್ ಕೇಟಿಂಗ್ ಬೌಲರ್ ಇವರು. ಇವರ ಹೊರತಾಗಿ ಭಾರತದ ಪ್ರತಿಭೆ ವರುಣ್ ಚಕ್ರವರ್ತಿ ಇದ್ದಾರೆ. ಅನ್ರಿಚ್ ನೊರ್ಟೆಜ್ ಸಹ ಅದ್ಭುತವಾದ ಬೌಲರ್, ವೆಂಕಟೇಶ್ ಐಯ್ಯರ್, ಆಂಡ್ರೆ ರಸಲ್, ಮೋಯಿನ್ ಅಲಿ ಸಹ ಅದ್ಭುತವಾಗಿ ಬೌಲಿಂಗ್ ಮಾಡಬಲ್ಲರು. ಇನ್ನುಬ್ಯಾಟಿಂಗ್ನಲ್ಲಿ ನಾಯಕ ಅಜಿಂಕ್ಯ ರಹಾನೆ, ರಿಂಕು ಸಿಂಗ್, ಕ್ವಿಂಟೆನ್ ಡಿಕಾಕ್, ಮನೀಶ್ ಪಾಂಡೆ ಅವರುಗಳು ಇದ್ದಾರೆ.
MS Dhoni: ನಿವೃತ್ತಿ ಆದ ಬಳಿಕ ಧೋನಿ ಗಳಿಸುತ್ತಿರುವ ಆದಾಯ ಎಷ್ಟು? ಮೂಲ ಯಾವುದು?
ಇನ್ನು ಆರ್ಸಿಬಿ ಸಹ ಈ ಬಾರಿ ಗಟ್ಟಿ ತಂಡದೊಂದಿಗೆ ಫೀಲ್ಡಿಗೆ ಇಳಿದಿದೆ. ಆದರೆ ಪ್ರತಿಬಾರಿಯಂತೆ ಈ ಬಾರಿಯೂ ಸಹ ಬೌಲಿಂಗ್ ವಿಭಾಗ ತುಸು ವೀಕ್ ಆಗಿ ಕಾಣುತ್ತಿದೆ. ಆರ್ಸಿಬಿಯ ಪ್ರಮುಖ ಬೌಲರ್ ಭುವನೇಶ್ವರ್ ಕುಮಾರ್, ಲಿವಿಂಗ್ಸ್ಟೋನ್ ಸಹ ಒಳ್ಳೆಯ ವೇಗಿ. ಲುಂಗಿಸಾನಿ ನಿಂಗಿಡಿ ಸಹ ಇದ್ದಾರೆ. ಯಶ್ ದಯಾಳ್ ಸಹ ಒಳ್ಳೆಯ ಬೌಲಿಂಗ್ ಮಾಡಬಲ್ಲರು. ಇನ್ನು ಸ್ಪಿನ್ನರ್ಗಳಲ್ಲಿ ಕೃನಾಲ್ ಪಾಂಡ್ಯಾ ಇದ್ದಾರೆ. ಆದರೆ ಬ್ಯಾಟ್ಸ್ಮನ್ಗಳ ದಂಡೇ ಬೆಂಗಳೂರಿನಲ್ಲಿ ಇದೆ. ವಿರಾಟ್ ಕೊಹ್ಲಿ, ರಜತ್ ಪಾಟಿಧಾರ್, ಫಿಲ್ ಸಾಲ್ಟ್, ದೇವದತ್ತ ಪಡಿಕಲ್, ಲಿವಿಂಗ್ಸ್ಟೋನ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯಾ, ಟಿಮ್ ಡೇವಿಡ್ ಅವರುಗಳು ಇದ್ದಾರೆ.