New Mobile
ಅತ್ಯಂತ ವೇಗವಾಗಿ ಬೆಳೆದ ಉದ್ಯಮವೆಂದರೆ ಅದು ಮೊಬೈಲ್ ಉದ್ಯಮ. ಎರಡು ದಶಕದ ಹಿಂದೆ ಕೇವಲ ಕರೆ ಸ್ವೀಕರಿಸಲು, ಕರೆ ಮಾಡಲು ಬಳಕೆಯಾಗುತ್ತಿದ್ದ ಫೋನ್ಗಳು ಇಂದು ಅದ್ಯಾವ ಹಂತಕ್ಕೆ ಬಂದು ನಿಂತಿವೆಯೆಂದರೆ ಊಹಿಸಲು ಸಹ ಅಸಾಧ್ಯ. ಆದರೆ ಈ ಬೆಳವಣಿಗೆ, ಸಂಶೋಧನೆ, ಹೊಸ ತಂತ್ರಜ್ಞಾನಗಳ ಅಳವಡಿಕೆ ಇನ್ನೂ ನಡೆಯುತ್ತಲೇ ಇದೆ. ಕಾಲದಿಂದ ಕಾಲಕ್ಕೆ ಸ್ಮಾರ್ಟ್ಫೋನ್ಗಳು ಇನ್ನಷ್ಟು ಸ್ಮಾರ್ಟ್ ಆಗುತ್ತಲೇ ಇವೆ. ಮುಂದಿನ ದಿನಗಳಲ್ಲಿ ಸ್ಮಾರ್ಟ್ಫೋನ್ಗಳಲ್ಲಿ ಆಗಲಿರುವ ಪ್ರಮುಖ ಬದಲಾವಣೆ ಬಗ್ಗೆ ತಂತ್ರಜ್ಞಾನ ಜಗತ್ತಿನ ಕೆಲವು ದಿಗ್ಗಜರು ಊಹಿಸಿ ಪಟ್ಟಿ ಮಾಡಿದ್ದಾರೆ.
ಯೂನಿವರ್ಸಲ್ ವೈಯರ್ ಲೆಸ್ ಚಾರ್ಜಿಂಗ್
ಪ್ರಸ್ತುತ ಕೆಲವು ಹೈ ಎಂಡ್ ಸ್ಟಾರ್ಟ್ಫೋನ್ಗಳಲ್ಲಿ ಮಾತ್ರವೇ ವೈಯರ್ ಲೆಸ್ ಚಾರ್ಜಿಂಗ್ ಸೌಲಭ್ಯ ಲಭ್ಯವಿದೆ. ಅದರಲ್ಲೂ ಒಂದು ಸಂಸ್ಥೆಯ ವಯರ್ಲೆಸ್ ಜಾರ್ಜರ್ ಮತ್ತೊಂದು ಸಂಸ್ಥೆಯ ಫೋನ್ಗೆ ಹೊಂದುವುದಿಲ್ಲ. ಆದರೆ ಮುಂದಿನ ದಿನಗಳಲ್ಲಿ ಯೂನಿವರ್ಸಲ್ ವಯರ್ಲೆಸ್ ಚಾರ್ಜರ್ ಮಾರುಕಟ್ಟೆಗೆ ಬರಲಿದೆ. ಎಲ್ಲ ಬಗೆಯ ಫೋನ್ಗಳು ಸಹ ಚಾರ್ಜ್ ಆಗಬಹುದಾದ ಡಿವೈಸ್ ಅದಾಗಿರಲಿದೆ. ಪ್ಲಾಸ್ಟಿಕ್ ಬಳಕೆ ತಗ್ಗಿಸಲು, ಎಲೆಕ್ರಿಟ್ ತ್ಯಾಜ್ಯ ತಪ್ಪಿಸಲು ಈ ಹೆಜ್ಜೆ ಅತ್ಯಂತ ಪ್ರಮುಖವಾಗಲಿದೆ.
ಶಕ್ತಿಶಾಲಿ ಬ್ಯಾಟರಿಗಳು
ಮೊಬೈಲ್ ಸ್ಮಾರ್ಟ್ಫೋನ್ಗಳ ಬ್ಯಾಟರಿ ಹೆಚ್ಚೆಂದರೆ ಒಂದು ದಿನವಷ್ಟೆ ಮೊಬೈಲ್ ಅನ್ನು ಚಾರ್ಜ್ ಮಾಡಬಲ್ಲದುಗಿದೆ. ಆದರೆ ಮುಂದಿನ ದಿನಗಳಲ್ಲಿ ಬ್ಯಾಟರಿ ವಿಭಾಗದಲ್ಲಿ ದೊಡ್ಡ ಬದಲಾವಣೆ ಬರಲಿದ್ದು, ತಿಂಗಳಾನುಗಟ್ಟಲೆ ಚಾರ್ಜ್ ಮಾಡುವ ಅಗತ್ಯವಿಲ್ಲದ ಬ್ಯಾಟರಿಗಳು ಮೊಬೈಲ್ನಲ್ಲಿ ಫಿಟ್ ಆಗಲಿವೆ. ಈಗಾಗಲೇ ವಿಜ್ಞಾನಿಗಳು ಒಂದು ಹಂತದ ಯಶಸ್ಸನ್ನು ಈ ವಿಭಾಗದಲ್ಲಿ ಪಡೆದಿದ್ದಾರೆ.
5ಜಿ ಗಿಂತಲೂ ವೇಗದ ಕನೆಕ್ಟಿವಿಟಿ
ಪ್ರಸ್ತುತ 5ಜಿ ಕನೆಕ್ಟಿವಿಟಿ ಚಾಲ್ತಿಯಲ್ಲಿದೆ. ಮೊಬೈಲ್ ಫೋನ್ಗಳ ಅತ್ಯಂತ ವೇಗದ ಕನೆಕ್ಟಿವಿಟಿ 5ಜಿ ಆಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವೇಗದ ಕನೆಕ್ಟಿವಿಟಿ ಬರಲಿದೆ. ಅದಕ್ಕೆ ತಕ್ಕಂತೆ ಸ್ಮಾರ್ಟ್ಫೋನ್ಗಳು ಸಹ ಬರಲಿವೆ. ಈಗಾಗಲೇ 5.5 ಜಿ ಚಾಲ್ತಿಗೆ ಬರಲಿದೆ. ಕೆಲವು ದೇಶಗಳಲ್ಲಿ 5.5 ಜಿ ಚಾಲ್ತಿಯಲ್ಲಿದೆ ಸಹ.
ಕಡಿಮೆ ಬೆಲೆಗೆ ಬಿಡುಗಡೆ ಆಗಿದೆ, ಶಕ್ತಿಶಾಲಿ 5ಜಿ ಸ್ಮಾರ್ಟ್ಫೋನ್
ಹಾಲೋಗ್ರಾಫಿಕ್ ಡಿಸ್ಪ್ಲೈ
ಮೊಬೈಲ್ ಡಿಸ್ಪ್ಲೇನಲ್ಲಿ ಈಗಾಗಲೇ ಸಾಕಷ್ಟು ಬದಲಾವಣೆ ಆಗಿದೆ. ಪ್ರಸ್ತುತ ಕರ್ವ್ ಡಿಸ್ಪ್ಲೇ ಚಾಲ್ತಿಯಲ್ಲಿದೆ. ಆದರೆ ಮುಂದಕ್ಕೆ ಹಾಲೋಗ್ರಾಫಿಕ್ ಡಿಸ್ಪ್ಲೇ ಬರಲಿದ್ದು, ದೃಶ್ಯ, ಚಿತ್ರಗಳ 3ಡಿ ವೀಕ್ಷಣೆ ಮೊಬೈಲ್ನಲ್ಲಿ ಸಾಧ್ಯವಾಗಲಿದೆ. ಮೊಬೈಲ್ನ ಎರಡೂ ಬದಿಯಲ್ಲಿ ಡಿಸ್ಪ್ಲೈ ಬರುವ ಸಾಧ್ಯತೆಯೂ ಇದೆ.
ಆರೋಗ್ಯ ನಿಗಾ ಆಪ್ಗಳಲ್ಲಿ ಕ್ರಾಂತಿ
ಸ್ಮಾರ್ಟ್ಫೋನ್ಗಳನ್ನು ಮನುಷ್ಯನ ಆರೋಗ್ಯದ ಮೇಲೆ ನಿಗಾ ಇಡುವ ಪರಿಣಾಮಕಾರಿ ಉತ್ಪನ್ನವಾಗಿ ಮಾಡಲು ದೊಡ್ಡ ಮಟ್ಟದ ಪ್ರಯೋಗಗಳು ನಡೆಯುತ್ತಿವೆ. ಪ್ರಸ್ತುತ ವ್ಯಕ್ತಿಯ ಹೃದಯಬಡಿತ, ಹೃದಯದಲ್ಲಿನ ಆಮ್ಲಜನಕ, ನಡಿಗೆ ಇನ್ನಿತರೆ ಕೆಲವು ವಿಷಯಗಳನ್ನು ಮೊಬೈಲ್ ಮೂಲಕ ತಿಳಿಯಬಹುದಾಗಿದೆ. ಆದರೆ ಇನ್ನೂ ಮುಂದೆ ಹೋಗಿ ವ್ಯಕ್ತಿಯ ದೇಹದಲ್ಲಾಗುವ ಬದಲಾವಣೆ, ಅಂಗಾಂಗಳ ಸ್ಕ್ಯಾನಿಂಗ್, ಹೃದಯಾಘಾತ ಮುನ್ಸೂಚನೆ, ಅನಾರೋಗ್ಯ ಮುನ್ಸೂಚನೆಗಳನ್ನು ನೀಡುವ ಆಪ್ಗಳ ತಯಾರಿಕೆ ಭರದಿಂದ ಸಾಗಿದೆ.
ರಿಮೋಟ್ ಕಂಟ್ರೋಲ್
ಮೊಬೈಲ್ಗಳು ಕೆಲವು ಅಪ್ಲಿಕೇಶನ್ಗಳ ಮೂಲಕ ಮನೆಯ ಕೆಲವು ವಸ್ತುಗಳನ್ನು ನಿಯಂತ್ರಿಸಬಲ್ಲವು. ಆದರೆ ಮನೆಯ ಬಹುತೇಕ ಎಲ್ಲ ಸ್ಮಾರ್ಟ್ಗೆಜೆಟ್ಗಳನ್ನು ನಿಯಂತ್ರಿಸುವ ರಿಮೋಟ್ ಕಂಟ್ರೋಲ್ ಅನ್ನಾಗಿ ಮೊಬೈಲ್ ಅನ್ನು ಪರಿವರ್ತಿಸುವ ಕಾರ್ಯವೂ ನಡೆಯುತ್ತಿದ್ದು, ಶೀಘ್ರವೇ ಇದರಲ್ಲಿ ದೊಡ್ಡ ಮಟ್ಟಿಗಿನ ಯಶಸ್ಸು ಲಭಿಸಲಿದೆ.
ಕೃತಕ ಬುದ್ಧಿಮತ್ತೆ
ಆಪಲ್ ಸೇರಿದಂತೆ ಕೆಲವು ಹೈ ಎಂಡ್ ಮೊಬೈಲ್ ಫೋನ್ಗಳಲ್ಲಿ ಈಗಾಗಲೇ ಕೃತಕ ಬುದ್ಧಿಮತ್ತೆ ಬಳಸಲಾಗುತ್ತಿದೆ. ಆದರೆ ಇದನ್ನು ಇನ್ನಷ್ಟು ಅಭಿವೃದ್ಧಿಪಡಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಎಲ್ಲ ಮೊಬೈಲ್ಗಳಲ್ಲಿಯೂ ಎಐಗಳು ಲಭ್ಯವಾಗಲಿವೆ. ಇವು ಮಾನವನ ದಿನನಿತ್ಯದ ಜೀವನದಲ್ಲಿ ದೊಡ್ಡ ಬದಲಾವಣೆ ತರಲಿವೆ.