Sadhguru: ಪತ್ನಿ ಕೊಲೆ ಕೇಸಿನಿಂದ ಸದ್ಗುರು ಪಾರಾಗಿದ್ದು ಹೇಗೆ?

0
150
Sadhguru

Sadhguru

ಸದ್ಗುರು ಎಂದೇ ಪ್ರಸಿದ್ಧರಾಗಿರುವ ಜಗ್ಗಿ ವಾಸುದೇವ ಅವರಿಗೆ ಲಕ್ಷಾಂತರ ಭಕ್ತರಿದ್ದಾರೆ. ಅವರ ಇಶಾ ಫೌಂಡೇಶನ್ ದೇಶ ವಿದೇಶದಲ್ಲಿ ಬ್ರ್ಯಾಂಚ್’ಗಳನ್ನು ಹೊಂದಿದೆ. ಪ್ರತಿದಿನ ಸಾವಿರಾರು ಮಂದಿ ಅವರ ಇಶಾ ಆಶ್ರಮಕ್ಕೆ ಭೇಟಿ ನೀಡುತ್ತಾರೆ. ಇತ್ತೀಚೆಗಷ್ಟೆ ಮದ್ರಾಸ್ ಹೈಕೋರ್ಟ್ ಆದೇಶದ ಮೇರೆಗೆ ತಮಿಳುನಾಡಿನ ನೂರಾರು ಪೊಲೀಸರು ಕೊಯಮತ್ತೂರಿನ ಇಶಾ ಫೌಂಡೇಶನ್ ಮೇಲೆ ದಾಳಿ ನಡೆಸಿದ್ದರು. ಆದರೆ ಆ ಬಳಿಕ ಸುಪ್ರೀಂ ಕೋರ್ಟ್ ಇಶಾ ಫೌಂಡೇಶನ್ ಮೇಲಿನ ಪ್ರಕರಣದ ತನಿಖೆಗೆ ತಡೆ ನೀಡಿದೆ.

ಅಂದಹಾಗೆ ಸದ್ಗುರು ಅವರಿಗೆ ಪೊಲೀಸ್ ಕೇಸು ಇನ್ನಿತರೆ ಹೊಸದಲ್ಲ. ಅಂದಹಾಗೆ ಬಹಳ ವರ್ಷಗಳ ಹಿಂದೆ ಅವರ ಮೇಲೆ ತಮ್ಮ ಪತ್ನಿಯನ್ನು ಕೊಂದ ಆರೋಪ ಹೊತಿಸಲಾಗಿತ್ತು. ಸ್ವಂತ ಅವರ ಮಾವನವರೇ ಸದ್ಗುರು ಮೇಲೆ ಕೊಲೆ ಕೇಸು ದಾಖಲಿಸಿದ್ದರು. ಸದ್ಗುರು ಅವರು ಬೆಂಗಳೂರಿನ ವಿಜಿ ಎಂಬುವರನ್ನು ವಿವಾಹವಾಗಿದ್ದರು. ಇಬ್ಬರಿಗೂ ಮುದ್ದಾದ ಹೆಣ್ಣು ಮಗುವೂ ಸಹ ಜನಿಸಿತು.

ಆದರೆ ಮಗು ಜನಿಸಿದ ಕೆಲ ವರ್ಷದ ಬಳಿಕ ಸದ್ಗುರು ಪತ್ನಿ ವಿಜಿ ನಿಧನ ಹೊಂದಿದರು. ಹೇಗೆ ನಿಧನ ಹೊಂದಿದರು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಕೆಲವು ವರದಿಗಳ ಪ್ರಕಾರ, ವಿಜಿ ಅವರು ಆತ್ಮಹತ್ಯೆ ಮಾಡಿಕೊಂಡರು ಎನ್ನಲಾಗುತ್ತದೆ, ಇನ್ನು ಕೆಲವರು ಅವರು ಮಹಾಸಮಾಧಿಗೆ ಒಳಗಾದರು ಎಂದು ಸಹ ಹೇಳಲಾಗುತ್ತದೆ. ಆದರೆ ವಿಜಿ ನಿಧನದ ಬಳಿಕ ಆ ಮಾಹಿತಿಯನ್ನು ವಿಜಿ ಅವರ ಪೋಷಕರಿಗೂ ಸಹ ಸದ್ಗುರು ತಿಳಿಸಿರಲಿಲ್ಲವಂತೆ. ಪೋಷಕರಿಗೂ ಸಹ ಮಾಹಿತಿ ತಿಳಿಸದೆ ವಿಜಿಯ ಮೃತದೇಹದ ಅಂತಿಮ ಸಂಸ್ಕಾರವನ್ನು ಸದ್ಗುರು ಮಾಡಿದ್ದರು.

ವಿಜಿ 1997 ರಲ್ಲಿ ನಿಧನರಾದರು. ಅವರು ನಿಧನ ಹೊಂದಿದ ಏಳು ತಿಂಗಳ ಬಳಿಕ ವಿಜಿ ಅವರ ಪೋಷಕರು ಬೆಂಗಳೂರಿನಲ್ಲಿ ಸದ್ಗುರು ವಿರುದ್ಧ ಪ್ರಕರಣ ದಾಖಲಿಸಿದರು. ಆ ದೂರನ್ನು ಕೊಯಮತ್ತೂರಿನ ಪೊಲೀಸ್ ಠಾಣೆಗೆ ವರ್ಗ ಮಾಡಲಾಯ್ತು. ಆಗ ಪೊಲೀಸರು ಸದ್ಗುರುವನ್ನು ವಿಚಾರಣೆಗೆ ಒಳಪಡಿಸಿದ್ದರು‌. ಆದರೆ ಆಗ ಸದ್ಗುರು ಅವರ ಬಂಧನ ಆಗಿತ್ತೆ ಇಲ್ಲವೆ ಎಂಬ ಬಗ್ಗೆ ಸೂಕ್ತ ಮಾಹಿತಿ ಇಲ್ಲ. ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದ ಸದ್ಗುರು ಅವರನ್ನು ಪ್ರಕರಣದಿಂದ ವಜಾ ಮಾಡಲಾಯ್ತು.

Indian Army: ಸೈನಿಕರ ಕೈಸೇರಿತು ಭಾರತದಲ್ಲೇ ತಯಾರಾದ ಸಬ್​ಮಷಿನ್ ಗನ್: ಇದರ ವಿಶೇಷತೆ ಗೊತ್ತೇನು?

ಸದ್ಗುರು ಅವರ ಪುತ್ರಿ ಒಳ್ಳೆಯ ಭರತನಾಟ್ಯ ಪಟುವಾಗಿದ್ದು ಕೆಲ ತಿಂಗಳ ಹಿಂದಷ್ಟೆ ಇಷ್ಟದ ವರನೊಟ್ಟಿಗೆ ವಿವಾಹವಾಗಿದ್ದಾರೆ. ಸದ್ಗುರು ಸಹ ಅಧ್ಯಾತ್ಮ ಬೋಧನೆಯಲ್ಲಿ ತೊಡಗಿದ್ದಾರೆ, ಆಗಾಗ್ಗೆ ಅವರ ವಿರುದ್ಧ, ಇಶಾ ಫೌಂಡೇಶನ್ ನ ವಿರುದ್ಧ ದೂರುಗಳು ದಾಖಲಾಗುತ್ತಲೇ ಇರುತ್ತವೆ.

LEAVE A REPLY

Please enter your comment!
Please enter your name here