Site icon Samastha News

Fact Check: ಪಾವಗಡ ಪೆಟ್ರೋಲ್ ಬ್ಯಾಂಕ್’ನಲ್ಲಿ ಸಿಂಹ! ನಿಜಾಂಶವೇನು?

Fact Check

Fact Check

ಕಳೆದ ಕೆಲ ದಿನಗಳಿಂದಲೂ ಸಾಮಾಜಿಕ ಜಾಲಣಾದಲ್ಲಿ ವಿಡಿಯೋ ಒಂದು ಹರಿಡುತ್ತಿದೆ. ಸಿಂಹವೊಂದು ರಾತ್ರಿ ಸಮಯ ಎಚ್’ಪಿ ಪೆಟ್ರೋಲ್ ಬಂಕ್’ನಲ್ಲಿ ಓಡಾಡುತ್ತಿರುವ ದೃಶ್ಯವದು. ಸಿಂಹ ರಾಜಗಾಂಭಿರ್ಯದಿಂದ ಓಡಾಡುತ್ತಿರುವ ದೃಶ್ಯವನ್ನು ಯಾರೋ ಮೊಬೈಲ್’ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೋವನ್ನು ‘ಪಾವಗಡದಲ್ಲಿ ಸಿಂಹ’, ‘ಸಕಲೇಶಪುರದಲ್ಲಿ ಕಾಣಿಸಿಕೊಂಡ ಸಿಂಹ’, ‘ಚಿತ್ರದುರ್ಗದಲ್ಲಿ ಕಾಣಿಸಿಕೊಂಡ ಸಿಂಹ’ ಎಂದೆಲ್ಲ ಕ್ಯಾಪ್ಷನ್ ಬರೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಅಂದಹಾಗೆ ಈ ವಿಡಿಯೋ ಕರ್ನಾಟಕದ್ದು ಅಲ್ಲವೇ ಅಲ್ಲ. ಅಸಲಿಗೆ ಕರ್ನಾಟಕದ ಯಾವ ಕಾಡುಗಳಲ್ಲಿಯೂ ಸಿಂಹಗಳಿಲ್ಲ.  ಕರ್ನಾಟಕದ ಜೂಗಳಲ್ಲಿ ಮಾತ್ರವೇ ಸಿಂಹಗಳಿವೆ. ಈಗ ವೈರಲ್ ಆರುವ ವಿಡಿಯೋನಲ್ಲಿರುವುದು ಏಷ್ಯಾಟಿಕ್ ಸಿಂಹ, ಈ ಪ್ರಜಾತಿಯ ಸಿಂಹಗಳು ಗುಜರಾತ್’ನ ಹೊರತಾಗಿ ದೇಶದ ಇನ್ಯಾವುದೇ ಭಾಗದಲ್ಲಿ ಇಲ್ಲ. ಹಾಗಾಗಿ ಈ ವಿಡಿಯೋ ಗುಜರಾತ್ ನದ್ದೆ ವಿನಃ ಕರ್ನಾಟಕದಲ್ಲ.

ONDC: ಸ್ವಿಗ್ಗಿ, ಜೊಮ್ಯಾಟೊಗೆ ಠಕ್ಕರ್ ಕೊಡುತ್ತಿರುವ ಬೆಂಗಳೂರು ಹೋಟೆಲಗ ಒಕ್ಕೂಟ

ಕರ್ನಾಟಕದಲ್ಲಿ ಚಿರತೆಗಳು ಕಾಡುಗಳಲ್ಲಿವೆ, ಕೆಲವು ಹುಲಿಗಳು ಸಹ ಇವೆ. ಅವು ತೀರ ಅಪರೂಪಕ್ಕೆ ಹೀಗೆ ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಳ್ಳುವುದುಂಟು ಆದರೆ ಸಿಂಹ ಕರ್ನಾಟಕದಲ್ಲಿ ಇಲ್ಲ. ಈ ಹಿಂದೆ ಕರ್ನಾಟಕದಲ್ಲಿ ಸಿಂಹ ಇದ್ದ ಬಗ್ಗೆ ದಾಖಲೆಗಳೂ ಸಹ ಇಲ್ಲ ಎನ್ನುತ್ತದೆ ರಾಜ್ಯ ವನ್ಯಜೀವಿ ಇಲಾಖೆ.

ಈಗ ವಿಡಿಯೋಗಳಲ್ಲಿ ಹರಿದಾಡುತ್ತಿರುವುದು ಶುದ್ಧ ಫೇಕ್ ನ್ಯೂಸ್. ಈ ವಿಡಿಯೋ ಕರ್ನಾಟಕದಲ್ಲಿ ಮಾತ್ರವಲ್ಲ, ದಕ್ಷಿಣದ ಇನ್ನೂ ಕೆಲವು ರಾಜ್ಯಗಳಲ್ಲಿ ಸುಳ್ಳು ಮಾಹಿತಿಯ ಜೊತೆಗೆ ಹರಿದಾಡುತ್ತಿದೆ.

Exit mobile version