Accident in Bengaluru Highway
ಪೂನಾ-ಬೆಂಗಳೂರು ಹೆದ್ದಾರಿಯಲ್ಲಿ ಇಂದು (ಜೂನ್ 28) ನಡೆದ ಭೀಕರ ಅಪಘಾತದಲ್ಲಿ ಭದ್ರಾವತಿಯ ಬರೋಬ್ಬರಿ 13 ಮಂದಿ ಅಸುನೀಗೊರುವ ಘಟನೆ ನಡೆದಿದೆ. ನಿಂತಿದ್ದ ಲಾರಿಗೆ ವೇಗವಾಗಿ ಬಂದ ಟಿಟಿ ಢಿಕ್ಕಿ ಹೊಡೆದ ಕಾರಣ ಈ ದುರ್ಘಟನೆ ನಡೆದಿದೆ.
ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ಗುಂಡೇನಳ್ಳಿಯಲ್ಲಿ ಈ ಅಪಘಾತ ಸಂಭವಿಸಿದೆ. ಟಿಟಿಯಲ್ಲಿ ಪ್ರಯಾಣಿಸುತ್ತಿದ್ದ ಭದ್ರಾವತಿಯ ಎಮ್ಮಿನಹಟ್ಟಿ ಗ್ರಾಮದ ಪರಶುರಾಮ್, ಭಾಗ್ಯ, ನಾಗಶ್ರೀ, ಮಂಜುಳ, ವಿಶಾಲಾಕ್ಷ್ಷಿ, ಮಾನಸ, ರೂಪ, ಸುಭದ್ರಾ, ಪುಣ್ಯಾ ಬಾಯಿ, ಅರ್ಪಿತಾ, ಆದರ್ಶ್ ಮೃತಪಟ್ಟಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಬ್ಯಾಡಗಿ ಪೊಲಿಒಸರು ಆಗಮಿಸಿದ್ದು ಪ್ರಕಣ ದಾಖಲಿಸಿಕೊಂಡಿದ್ದಾರೆ. ಮೃತ 13 ಮಂದಿಯಲ್ಲಿ ಏಳು ಮಹಿಳೆಯರಿದ್ದಾರೆ. ಎರಡು ಕಂದಮ್ಮಗಳು ಮೃತ ಪಟ್ಟಿವೆ ಎನ್ನಲಾಗುತ್ತಿದೆ.
ನಾಲ್ವರು ಗಾಯಾಳುಗಳು ಸಹ ಇದ್ದು ಅವರನ್ನು ಹಾವೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಆದರೆ ಅವರ ಸ್ಥಿತಿಯೂ ಗಂಭೀರವಾಗಿದೆ ಎನ್ನಲಾಗಿದೆ. ಟಿಟಿಯಲ್ಲಿದ್ದ ಎಲ್ಲರೂ ಸವದತ್ತಿಗೆ ತೆರಳಿ ರೇಣುಕಾ ಯಲ್ಲಮ್ಮನ ದರ್ಶನ ಪಡೆದು ಊರಿಗೆ ಮರಳುವಾಗ ಈ ದುರ್ಘಟನೆ ಸಂಭವಿಸಿದೆ.
ಬೆಂಗಳೂರು-ಪೂನಾ ಹೆದ್ದಾರಿ ಬದಿಯಲ್ಲಿ ಲಾರಿಯೊಂದನ್ನು ನಿಲ್ಲಿಸಲಾಗಿತ್ತು, ಬೆಳಿಗ್ಗೆ 4 ರ ಜಾವದಲ್ಲಿ ವೇಗವಾಗಿ ಬಂದ ಟಿಟಿ ಚಾಲಕನ ನಿರ್ಲಕ್ಷ್ಯದಿಂದ ಲಾರಿಗೆ ಹಿಂದಿನಿಂದ ಢಿಕ್ಕಿ ಹೊಡೆದಿದೆ. ಚಾಲಕ ನಿದ್ದೆಗೆ ಜಾರಿದ್ದರಿಂದಲೇ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ. ಎಲ್ಲ ಶವಗಳನ್ನು ಹಾವೇರಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.