HD Kumaraswamy: ಐಪಿಎಸ್ ಅಧಿಕಾರಿಗೆ ಬೆದರಿಕೆ ಕುಮಾರಸ್ವಾಮಿ ಮತ್ತು ನಿಖಿಲ್ ವಿರುದ್ಧ ಎಫ್’ಐಆರ್ ದಾಖಲು

0
122
HD Kumarswamy

HD Kumaraswamy

ಎಚ್’ಡಿ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಸಂಪೂರ್ಣವಾಗಿ ಚನ್ನಪಟ್ಟಣ ಉಪಚುನಾವಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಾಸ್ವಾಮಿ ಸ್ಪರ್ಧಿಸಿದ್ದು, ಮಗನನ್ನು ಗೆಲ್ಲಿಸಿಕೊಂಡು ಬರುವ ಪಣ ತೊಟ್ಟಿರುವ ಎಚ್’ಡಿ ಕುಮಾರಸ್ವಾಮಿ ಸತತವಾಗಿ ಪ್ರಚಾರದಲ್ಲಿ ನಿರತರಾಗಿದ್ದಾರೆ. ಆದರೆ ಈ ನಡುವೆ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿಗೆ ಶಾಕ್ ಎದುರಾಗಿದೆ. ಇಬ್ಬರ ವಿರುದ್ಧ ಎಫ್’ಐಆರ್ ದಾಖಲಾಗಿದೆ.

ಐಪಿಎಸ್ ಅಧಿಕಾರಿ ಒಬ್ಬರಿಗೆ ಬೆದರಿಕೆ ಹಾಗೂ ಮಾನಹಾನಿ ಮಾಡಿದ್ದಾರೆಂದು ಬೆಂಗಳೂರಿನ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಎಫ್’ಐಆರ್ ಸಹ ದಾಖಲಾಗಿದೆ. ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಚಂದ್ರಶೇಖರ್ ಅವರೇ ಖುದ್ದಾಗಿ ಕುಮಾರಸ್ವಾಮಿ ಹಾಗೂ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ಧ ದೂರು ನೀಡಿದ್ದಾರೆ.

ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್’ಗೆ ಅಕ್ರಮವಾಗಿ ಗಣಿ ಪರವಾನಗಿ ಕೊಟ್ಟಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ವಿರುದ್ಧ ತನಿಖೆಗೆ ಎಡಿಜಿಪಿ, ರಾಜ್ಯಪಾಲರ ಒಪ್ಪಿಗೆ ಕೇಳಿದ್ದರು, ಈ ಸಮಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಕುಮಾರಸ್ವಾಮಿ, ಎಡಿಜಿಪಿ ವಿರುದ್ಧ ಕೆಲ ಆರೋಪಗಳನ್ನು ಮಾಡಿದ್ದರು, ನಿಖಿಲ್ ಕುಮಾರಸ್ವಾಮಿ ಸಹ ಮಾಧ್ಯಮಗಳ ಮುಂದೆ ಎಡಿಜಿಪಿ ವಿಚಾರವಾಗಿ ಹೇಳಿಕೆಗಳನ್ನು ನೀಡಿದ್ದರು, ಇದೇ ಕಾರಣಕ್ಕೆ ಎಡಿಜಿಪಿ ಈಗ ದೂರು ದಾಖಲಿಸಿದ್ದಾರೆ.

Bengaluru Cab Driver: ಬೆಂಗಳೂರು ಕ್ಯಾಬ್ ಪ್ರಯಾಣಿಕರೆ ಎಚ್ಚರ, ಏರ್ ಪೋರ್ಟ್ ದಾರಿಯಲ್ಲಿ ನಡೆಯುತ್ತೆ ವಂಚನೆ

ಕುಮಾರಸ್ವಾಮಿ ಪತ್ರಿಕಾಗೋಷ್ಠಿ ನಡೆಸಿದ ಸಮಯದಲ್ಲಿ ಪತ್ರವೊಂದನ್ನು ಬರೆದಿದ್ದ ಎಡಿಜಿಪಿ ಚಂದ್ರಶೇಖರ್, ಜಾರ್ಜ್ ಬರ್ನಾಡ್ ಶಾ ಅವರ ಕೋಟ್ ಒಂದನ್ನು ಬಳಸಿದ್ದರು, ‘ಹಂದಿಗಳೊಂದಿಗೆ ಜಗಳ ಮಾಡಬೇಡ, ಅದರಿಂದ ಇಬ್ಬರ ಮೈ ಕೊಳಕಾಗುತ್ತದೆ, ಆ ಕೊಳಕು ಹಂದಿಗೆ ಪ್ರಿಯ’ ಎಂದಿದ್ದರು. ಈ ಹೇಳಿಕೆ ಭಾರಿ ಚರ್ಚೆಗೆ ಕಾರಣವಾಗಿತ್ತು, ಕೇಂದ್ರ ಮಂತ್ರಿಯನ್ನು ಅಧಿಕಾರಿ ಹಂದಿ ಎಂದು ಕರೆದಿದ್ದಾರೆ ಎಂದು ಜೆಡಿಎಸ್ ಶಾಸಕರು, ಮುಖಂಡರು ಆರೋಪ ಮಾಡಿದ್ದರು. ಜೆಡಿಎಸ್’ನ ಮಿತ್ರ ಆಗಿರುವ ಬಿಜೆಪಿಯ ಶಾಸಕರು ಸಹ ಇದನ್ನು ತೀವ್ರವಾಗಿ ವಿರೋಧಿಸಿದ್ದರು.

LEAVE A REPLY

Please enter your comment!
Please enter your name here