Site icon Samastha News

Mobile Network: ಮತ್ತೆ ಶುರುವಾಯ್ತು ಅಂಬಾನಿ vs ಮಿತ್ತಲ್ ಈ ಬಾರಿ ಗೆಲುವು ಯಾರಿಗೆ?

Mobile netwok

Mobile Network

ಭಾರತದ ಶ್ರೀಮಂತ ಮತ್ತು ಪ್ರಭಾವಿ ವ್ಯಕ್ತಿಯಾದ ಮುಖೇಶ್ ಅಂಬಾನಿ ಹಾಗೂ ಅಷ್ಟೇ ಪ್ರಭಾವಿ, ಜನಪ್ರಿಯ ಉದ್ಯಮಿ ಆಗಿರುವ ಮಿತ್ತಲ್‌ ನಡುವಿನ ‘ಉದ್ಯಮ ವೈರತ್ವ’ ಹೊಸದೇನಲ್ಲ. ಭಾರತಿ ಏರ್ಟೆಲ್ ಮಾಲೀಕರಾಗಿರುವ ಮಿತ್ತಲ್ ಅವರಿಗೆ ಜಿಯೋ ಮೂಲಕ ದೊಡ್ಡ ಹೊಡೆತವನ್ನು ಅಂಬಾನಿ ನೀಡಿದ್ದರು. ಜಿಯೋ ಕೊಟ್ಟ ಹೊಡೆತವನ್ನು ಸಂಭಾಳಿಸಿಕೊಂಡು ನಿಂತ ಏರ್ಟೆಲ್ ಈಗ ಭಾರತದಲ್ಲಿ ಮತ್ತೆ ಸರಿ ಹಾದಿಗೆ ಮರಳಿದೆ. ಹೀಗಿರುವಾಗ ವಿದೇಶದಲ್ಲಿ ಏರ್ಟೆಲ್ ಗೆ ಮತ್ತೆ ಸ್ಪರ್ಧೆ ಒಡ್ಡಲು ಮುಂದಾಗಿದೆ ಜಿಯೋ.

ಆಫ್ರಿಕಾನಲ್ಲಿ ರಿಲಯನ್ಸ್ ಜಿಯೋ 4G ಹಾಗೂ 5G ನೆಟ್ ವರ್ಕ್ ಸೇವೆಗಳನ್ನು ನೀಡಲು ಮುಂದಾಗಿದೆ. ಆಫ್ರಿಕಾ ದೇಶದಲ್ಲಿ ಈ ವರೆಗೂ ಏರ್ಟೆಲ್ ಪ್ರಮುಖ ಮೊಬೈಲ್ ನೆಟ್ ವರ್ಕಿಂಗ್ ಸೇವೆ ಆಗಿತ್ತು. ಆದರೆ ಈಗ ಜಿಯೋ ಆಫ್ರಿಕಾಗೆ ಕಾಲಿಟ್ಟಿದ್ದು ಅಲ್ಲಿಯೂ ಸಹ ಕ್ರಾಂತಿಯನ್ನೇ ಮಾಡುವ ಸಾಧ್ಯತೆ ಇದೆ. ಇದು ಏರ್ಟೆಲ್ ಗೆ ತೀವ್ರ ಆತಂಕಕ್ಕೆ ಕಾರಣವಾಗಿದೆ.

ಘಾನಾದ ದೂರಸಂಪರ್ಕ ಸಚಿವೆ, ರಿಲಯನ್ಸ್ ಜಿಯೋ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. 4G, 5G ನೆಟ್ ವರ್ಕಿಂಗ್ ಅನ್ನು ಟೆಕ್ ಮಹೀಂದ್ರಾ ಹಾಗೂ ನೋಕಿಯಾ ಮಾಡಿಕೊಡಲಿದ್ದು, ಜಿಯೋ ನೆಟವರ್ಕ್ ಸೇವೆ ನೀಡಲಿದೆ. ಭಾರತದಲ್ಲಿ ಜಿಯೋ ಪರಿಚಯವಾದಾಗ ಉಚಿತ ಸಿಮ್, ಉಚಿತ ಮೊಬೈಲ್ ನೆಟ್ ವರ್ಕ್ ಅನ್ನು ನೀಡಿ ಕ್ರಾಂತಿ ಮಾಡಿತ್ತು. ಆಫ್ರಿಕಾನಲ್ಲಿಯೂ ಇದೇ ಕಾರ್ಯವನ್ನು ಜಿಯೋ ಮಾಡುವ ಸಾಧ್ಯತೆ ಇದೆ.

ಈ ರೋಗ ಲಕ್ಷಣಗಳು ಕಂಡು ಬಂದರೆ ನಿಮಗೆ ವಿಟಮಿನ್ ಡಿ ಕೊರತೆ ಇದೆ ಎಂದರ್ಥ

ಒಂದೊಮ್ಮೆ ಆಫ್ರಿಕಾನಲ್ಲಿಯೂ ಜಿಯೋ ಫ್ರೀ ಆಗಿ ಸಿಮ್ ಹಂಚಿ, ಡಾಟಾ ಉಚಿತವಾಗಿ ಕೊಟ್ಟರೆ ಏರ್ಟೆಲ್ ಗೆ ಅಲ್ಲಿಯೂ ಭಾರಿ ನಷ್ಟ ಆಗಲಿದೆ. ಈ ನಷ್ಟವನ್ನು ಹೇಗೆ ಏರ್ಟೆಲ್  ತಡೆದುಕೊಳ್ಳಲಿದೆ ಕಾದು ನೋಡಬೇಕಿದೆ.

Exit mobile version