Allu Arjun: ರಾಮ್ ಚರಣ್-ಅಲ್ಲು ಅರ್ಜುನ್​ಗೆ ಹೋಲಿಕೆ: ಯಾರು ಉತ್ತಮರು?

0
144
Allu Arjun

Allu Arjun

ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಆದರೆ ಕಳೆದ ಕೆಲ ತಿಂಗಳಿನಿಂದಲೂ ಅಲ್ಲು ಅರ್ಜುನ್ ಹಾಗೂ ಮೆಗಾಸ್ಟಾರ್ ಕುಟುಂಬದ ನಡುವೆ ವೈಮನಸ್ಯ ಮೂಡಿದೆ. ಪವನ್ ಕಲ್ಯಾಣ್ ಚುನಾವಣೆಗೆ ನಿಂತಿದ್ದಾಗ, ಎದುರಾಳಿ ಪಕ್ಷದ ಅಭ್ಯರ್ಥಿಯ ಪರವಾಗಿ ಅಲ್ಲು ಅರ್ಜುನ್ ಚುನಾವಣೆ ಪ್ರಚಾರ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಆ ನಂತರ ಪವನ್ ಸಹೋದರ ನಾಗಬಾಬು ಅಲ್ಲು ಅರ್ಜುನ್ ವಿರುದ್ಧ ಟ್ವೀಟ್ ಮಾಡಿದರು. ಅದಕ್ಕೆ ಪ್ರತ್ಯುತ್ತರವಾಗಿ ಅಲ್ಲು ಅರ್ಜುನ್ ಸಹ ಸಿನಿಮಾ ಆಡಿಯೋ ಫಂಕ್ಷನ್​ನಲ್ಲಿ ‘ನನ್ನಿಷ್ಟ ಬಂದಲ್ಲಿಗೆ ಹೋಗ್ತೀನಿ, ಇಷ್ಟ ಇಲ್ಲ ಅಂದ್ರೆ ಹೋಗಲ್ಲ’ ಎಂದರು. ಹೀಗೆ ಪರಸ್ಪರ ಕುಟುಂಬಗಳ ಮಧ್ಯೆ ಭಿನ್ನಾಭಿಪ್ರಾಯ ಚಾಲ್ತಿಯಲ್ಲಿದೆ.

ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಅಲ್ಲು ಅರ್ಜುನ್ ಹಾಗೂ ರಾಮ್ ಚರಣ್ ಅನ್ನು ಹೋಲಿಕೆ ಮಾಡಿ ನೋಡಲಾಗುತ್ತಿದೆ. ಇಬ್ಬರಲ್ಲಿ ಯಾರು ಒಳ್ಳೆಯವರು, ಯಾರು ಗುಣವಂತರು ಎಂಬ ಚರ್ಚೆ ಚಾಲ್ತಿಯಲ್ಲಿದೆ. ಇದಕ್ಕೆ ಹೊಸ ಸಾಕ್ಷಿಯಾಗಿ ನಿನ್ನೆಯಷ್ಟೆ ನಡೆದಿರುವ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಲು ವೈರಲ್ ಆಗುತ್ತಿದೆ.

ಅಲ್ಲು ಅರ್ಜುನ್​ ಅಹಂಕಾರ ಇರುವ ನಟ ಎಂಬ ಟಾಕ್ ಟಾಲಿವುಡ್​ನಲ್ಲಿ ಕಳೆದ ವರ್ಷಗಳಿಂದಲೂ ಹರಿದಾಡುತ್ತಿದೆ. ನಿನ್ನೆ ಕೇರಳದ ಕೊಚ್ಚಿಯಲ್ಲಿ ನಡೆದ ‘ಪುಷ್ಪ 2’ ಸಿನಿಮಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಅಲ್ಲು ಅರ್ಜುನ್ ಅವರ ವಿಡಿಯೋ ಒಂದು ವೈರಲ್ ಆಗುತ್ತಿದೆ. ಅಲ್ಲು ಅರ್ಜುನ್ ವೇದಿಕೆಗೆ ನಡೆದುಕೊಂಡು ಬರುವಾಗ ಅವರಿಗೆ ಭದ್ರತೆ ನೀಡುತ್ತಿದ್ದ ಯುವಕನೊಬ್ಬ ಆಕಸ್ಮಿಕವಾಗಿ ಅಲ್ಲು ಅರ್ಜುನ್ ಅನ್ನು ಕೇವಲ ಮುಟ್ಟಿದ ಅಷ್ಟೆ. ಅಷ್ಟಕ್ಕೆ ಅಲ್ಲು ಅರ್ಜುನ್ ಆ ಯುವಕನನ್ನು ಗುರಾಯಿಸಿದ ರೀತಿ ಈಗ ವೈರಲ್ ಆಗುತ್ತಿದೆ.

Daali Dhananjay: ತೆಲುಗು ಚಿತ್ರರಂಗದಲ್ಲಿ ಡಾಲಿ ಧನಂಜಯ್​ಗೆ ಹೆಚ್ಚಿದ ಬೇಡಿಕೆ

ಯಾವ ವಿಲನ್​ಗಳಿಗೂ ಕಡಿಮೆ ಇಲ್ಲದೆ ಅಲ್ಲು ಅರ್ಜುನ್ ಆ ಯುವಕನನ್ನು ಗುರಾಯಿಸಿದ್ದಾರೆ. ಆ ವಿಡಿಯೋದ ಜೊತೆಗೆ ರಾಮ್ ಚರಣ್ ಅವರ ವಿಡಿಯೋ ಒಂದು ಸಹ ವೈರಲ್ ಆಗುತ್ತಿದೆ. ರಾಮ್ ಚರಣ್ ಪವನ್ ಕಲ್ಯಾಣ್ ಪರವಾಗಿ ಪ್ರಚಾರ ಮಾಡಲು ಹೋಗಿದ್ದಾಗ ಜನರು ರಾಮ್ ಚರಣ್ ಅನ್ನು ಮುಟ್ಟಲು ತೀವ್ರ ತಳ್ಳಾಟ ನಡೆಸಿದ್ದರು. ರಾಮ್ ಚರಣ್ ಕೈ, ಕತ್ತು ಹಿಡಿದು ಎಳೆದಾಡಿದರು. ಈ ತಳ್ಳಾಟದಲ್ಲಿ ರಾಮ್ ಚರಣ್ ಶರ್ಟ್ ಸಹ ಹರಿಯಿತು ಆದರೆ ರಾಮ್ ಚರಣ್ ನಗುತ್ತಲೇ ತಳ್ಳಾಟವನ್ನು ಸಹಿಸಿಕೊಂಡು ತಮ್ಮ ಗಾಡಿಯ ಕಡೆಗೆ ಹೋದರು.

ಇದರ ಜೊತೆಗೆ ಅಲ್ಲು ಅರ್ಜುನ್​ರ ಕೆಲ ಹಳೆಯ ವಿಡಿಯೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ‘ಪುಷ್ಪ’ ಸಿನಿಮಾ 2021 ರಲ್ಲಿ ಬಿಡುಗಡೆ ಆಗುತ್ತಿದ್ದಾಗ ಬೆಂಗಳೂರಿಗೆ ಬಂದಿದ್ದ ಅಲ್ಲು ಅರ್ಜುನ್, ಡಾಲಿ ಧನಂಜಯ್ ಜೊತೆ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಆಗ ಯಾರೇ ಪತ್ರಕರ್ತರು ಪ್ರಶ್ನೆ ಕೇಳಿದಾಗಲೂ ಮೈಕ್​ ಹಿಡಿದು ಉತ್ತರ ನೀಡುತ್ತಿದ್ದ ಅಲ್ಲು ಅರ್ಜುನ್, ತಮ್ಮ ಮಾತು ಮುಗಿಯುತ್ತಿದ್ದಂತೆ ಮೈಕ್ ಅನ್ನು ಪಕ್ಕದಲ್ಲಿ ಕುಳಿತಿದ್ದ ಡಾಲಿ ಧನಂಜಯ್​ಗೆ ಹಿಡಿದುಕೊಳ್ಳುವಂತೆ ನೀಡಿ ಬಿಡುತ್ತಿದ್ದರು. ಮುಂದಿನ ಪ್ರಶ್ನೆಗೆ ಮತ್ತೆ ಉತ್ತರ ಕೊಡಬೇಕಾದಾಗ ಡಾಲಿ ಧನಂಜಯ್ ಮೈಕ್ ಕೊಡಬೇಕಿತ್ತು. ಡಾಲಿಯನ್ನು ಮೈಕ್ ಬಾಯ್ ರೀತಿ ಅಂದು ಅಲ್ಲು ಅರ್ಜುನ್ ಬಳಸಿಕೊಂಡಿದ್ದರು.

LEAVE A REPLY

Please enter your comment!
Please enter your name here