Ambani Family Wedding
ವಿಶ್ವದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿರುವ ಮುಕೇಶ್ ಅಂಬಾನಿಯ ಪುತ್ರ ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಜೊತೆ ವಿವಾಹವಾಗಲಿದ್ದಾರೆ. ಈ ಮದುವೆಗಾಗಿ 6000 ಕಪೊಟಿ ಹಣವನ್ನು ಅಂಬಾನಿ ಕುಟುಂಬ ಖರ್ಚು ಮಾಡಲಿದೆ. ಇದು ಭಾರತದ ಈವರೆಗಿನ ಅತಿ ಅದ್ದೂರಿ ಮದುವೆ ಆಗಲಿದೆ. ಈಗಾಗಲೇ ಎರಡು ಪ್ರೀ ವೆಡ್ಡಿಂಗ್ ಪಾರ್ಟಿಗಳನ್ನು ಈ ಕುಟುಂಬ ಮಾಡಿದ್ದು ವಿದೇಶದ ಖ್ಯಾತ ತಾರೆಯರನ್ನು ಕರೆಸಿ ಹಾಡಿಸಿ-ಕುಣಿಸಿದ್ದಾರೆ.
ಈ ಅದ್ಧೂರಿ ಮದುವೆಗೆ ದೇಶದ ಪ್ರಧಾನಿ ಸೇರಿದಂತೆ ವಿದೇಶದ ಹಲವು ಪ್ರಮುಖ ರಾಜಕಾರಣಿಗಳು, ಬ್ಯುಸಿನೆಸ್ ಮನ್ ಗಳು, ಕಲಾವಿದರು ಆಗಮಿಸಲಿದ್ದಾರೆ. ಅವರನ್ನು ಮದುವೆ ಸ್ಥಳಕ್ಕೆ ಕರೆದುಕೊಂಡು ಬರಲು ಅಂಬಾನಿ ನೂರಾರು ವಿಮಾನಗಳನ್ನು ಆಟೋಗಳಂತೆ ಬಳಸುತ್ತಿದ್ದಾರೆ. ಅತಿಥಿಗಳನ್ನು ಕರೆತರಲೆಂದು ನೂರಾರು ಪ್ರೈವೇಟ್ ಜೆಟ್ ಹಾಗೂ ಫಾಲ್ಕನ್-2000 ವಿಮಾನಗಳನ್ನು ಬಾಡಿಗೆಗೆ ಖರೀದಿ ಮಾಡಿದ್ದಾರೆ.
ವಿಶ್ವಕಪ್ ಗೆದ್ದುಕೊಟ್ಟ ಧೋನಿಯ ಬ್ಯಾಟು ಹರಾಜು, ಮಾರಾಟವಾಗಿದ್ದು ಭಾರಿ ಮೊತ್ತಕ್ಕೆ
ಕ್ಲಬ್ ಒನ್ ಏರ್ ಸಂಸ್ಥೆಯ ಮಾಲೀಕ ರಜನ್ ಶರ್ಮಾ ನೀಡಿರುವ ಮಾಹಿತಿಯಂತೆ, ಅವರ ಒಂದು ಸಂಸ್ಥೆಯಿಂದಲೇ ಮೂರು ಫ್ಯಾಲ್ಕನ್-2000 ವಿಮಾನಗಳನ್ನು ಹಾಗೂ ಹಲವಾರು ಪ್ರೈವೇಟ್ ಜೆಟ್ ಗಳನ್ನು ಅಂಬಾನಿ ಬಾಡಿಗೆಗೆ ಪಡೆದಿದ್ದಾರಂತೆ. ಅವರು ನೀಡಿರುವ ಮಾಹಿತಿಯಂತೆ ಸುಮಾರು 500 ಪ್ರೈವೇಟ್ ಜೆಟ್ ಗಳು ಅತಿಥಿಗಳನ್ನು ಕರೆತರಲೆಂದೇ ಬಾಡಿಗೆಗೆ ಪಡೆದು ವಿವಿಧ ವಿಮಾನ ನಿಲ್ದಾಣಗಳಲ್ಲಿ ನಿಲ್ಲಿಸಲಾಗಿದೆ.
ಇನ್ನು ಕಾರುಗಳ ಸಂಖ್ಯೆಗಳನ್ನಂತೂ ಕೇಳುವಂತೆಯೇ ಇಲ್ಲ. ಹಲವಾರು ರೋಲ್ಸ್ ರಾಯ್ಸ್ ಹಾಗೂ ಇನ್ನೂ ಹಲವಾರು ಕಾರುಗಳನ್ನು ಅತಿಥಿಗಳ ಸೇವೆಗೆಂದು ನೇಮಿಸಲಾಗಿದೆ. ಮುಂಬೈನಲ್ಲಿರುವ ಬಹುತೇಕ ಎಲ್ಲ ಫೈವ್ ಸ್ಟಾರ್, ಸೆವೆನ್ ಸ್ಟಾರ್ ಹೋಟೆಲ್ ಗಳನ್ನು ಈಗಾಗಲೇ ಅತಿಥಿಗಳ ವಾಸ್ತವ್ಯಕ್ಕಾಗಿ ಬುಕ್ ಮಾಡಲಾಗಿದೆ. ಜುಲೈ 12 ರಿಂದ 15 ರ ವರೆಗೆ ಮುಂಬೈನ ಜಿಯೋ ವರ್ಲಡ್ ಕಲ್ಚರ್ ಸೆಂಟರ್ ನಲ್ಲಿ ಅನಂತ್-ರಾಧಿಕಾ ಮರ್ಚೆಂಟ್ ಅವರ ವಿವಾಹ ನಡೆಯಲಿದೆ.