Anjeer: ಅಂಜೂರ ತಿನ್ನುತ್ತೀರ? ಹಾಗಿದ್ದರೆ ಈ ಸುದ್ದಿ ಖಂಡಿತ ಓದಿ

0
253
Anjeer

Anjeer

ವಿಶ್ವದಲ್ಲೇ ಅತಿ ಹೆಚ್ಚು ಸಸ್ಯಹಾರಿಗಳು ಇರುವ ದೇಶ ಭಾರತ. ಸಸ್ಯಹಾರವನ್ನು ಸಾತ್ವಿಕ ಆಹಾರ ಪದ್ಧತಿ ಎಂದು ಪರಿಗಣಿಸಲಾಗುತ್ತದೆ‌. ಆದರೆ ಮಾಂಸಾಹಾರದಲ್ಲಿ ಸಿಗುವ ಪ್ರೋಟೀನ್ ಅಂಶ ಸಸ್ಯಹಾರದಲ್ಲಿ ತುಸು ಕಡಿಮೆ. ಹಾಗಾಗಿ ಶಕ್ತಿಗಾಗಿ ಸಸ್ಯಹಾರಿಗಳು, ಕೆಲ ಒಣಹಣ್ಣು, ಒಣ ಬೀಜಗಳನ್ನು ತಿನ್ನುತ್ತಾರೆ. ಉದಾಹರಣೆಗೆ ದ್ರಾಕ್ಷಿ, ಗೋಡಂಬಿ, ಬದಾಮಿ. ಇವುಗಳ‌ ಜೊತೆಗೆ ಅಂಜೂರವನ್ನು ಸಹ ತಿನ್ನಲಾಗುತ್ತದೆ. ಆದರೆ ಅಂಜೂರ ನೀವಂದುಕೊಂಡಂತೆ ಸಸ್ಯಹಾರ ಆಹಾರವಲ್ಲ!

ಹೌದು, ಮಾರುಕಟ್ಟೆಯಲ್ಲಿ ಭಾರಿ‌ ಮೊತ್ತಕ್ಕೆ ಮಾರಾಟವಾಗುವ ಅಂಜೂರ ಸಸ್ಯಹಾರವಲ್ಲ. ಅಂಜೂರ ಸಸ್ಯ ಜನ್ಯವಾದರೂ ಸಹ ಅದರೊಳಗೆ ಕೆಲವು ಜೀವಿಗಳು ಇರುತ್ತವೆ. ಅದರಲ್ಲಿ ಒಂದು ಬಗೆಯ ಹುಳ ಅಡಗಿರುತ್ತದೆ. ಅದು ಒಣಗಿದ ಮೇಲೆಯೂ ಸಹ ಅದು ಅದರ ಒಳಗೇ ಇರುತ್ತದೆ! ಅಂಜೂರವನ್ನು ಇಂಗ್ಲೀಷ್’ನಲ್ಲಿ ಫಿಗ್ಸ್ ಎಂದು ಕರೆಯಲಾಗುತ್ತದೆ. ಅಂಜೂರದ ಕಾಯಿಯ ಒಳಗೆ ಇದರ ಹೂವು ಇರುತ್ತದೆ‌. ಈ ಹೂವಿಗಾಗಿ ವಾಸ್ಪ್ ಜಾತಿಗೆ ಸೇರಿದ ಹುಳ ಕಾಯಿಯ ಮೇಲ್ಭಾಗದಲ್ಲಿ ತೂತು ಮಾಡಿ ಒಳಗೆ ಹೊಕ್ಕುತ್ತದೆ.

ಗಂಡು ಮತ್ತು ಹೆಣ್ಣು ವಾಸ್ಪ್ ಗಳು ಒಳಗೆ ಹೋಗಿ ಸಂತಾನೋತ್ಪತ್ತಿ ನಡೆಸುತ್ತವೆ. ಹೆಣ್ಣು ವಾಸ್ಪ್ ಕೀಟ ಒಳಗೆ ಮೊಟ್ಟೆಗಳನ್ನು ಅಹ ಇಡುತ್ತದೆ. ಮೊಟ್ಟೆಗಳೆಲ್ಲ ಒಡೆದು ಹೊರಬಂದ ಬಳಿಕ ಹೆಣ್ಣು ವಾಸ್ಪ್ ಹೊರಬರುತ್ತದೆ ಆದರೆ ಗಂಡು ವಾಸ್ಪ್ ಕೀಟ ಹಣ್ಣಿನ ಒಳಗೆ ಉಳಿಯುತ್ತದೆ. ಅದು ಹೊರಗೆ ಬರುವುದಿಲ್ಲ ಕಾರಣವೆಂದರೆ ಅದಕ್ಕೆ ರೆಕ್ಕೆಗಳು ಇರುವುದಿಲ್ಲ. ಅಂಜೂರ ಹಣ್ಣಾಗಿ ಒಳಗಿದ ಬಳಿಕವೂ ಆ ವಾಸ್ಪ್ ಕೀಟದ ದೇಹ ಹಣ್ಣಿನ ಒಳಗೆ ಇರುತ್ತದೆ. ಮಾತ್ರವಲ್ಲ, ಮೊಟ್ಟೆ ಹೊರಬಂದ ಹಲವಾರು ವಾಸ್ಪ್ ಕೀಟಗಳಲ್ಲಿ ಕೆಲವು ಅಲ್ಲೇ ಸತ್ತು ಹೋಗುತ್ತವೆ. ಅವು ಸಹ ಅಂಜೂರದ ಒಳಗೆ ಉಳಿದಿರುತ್ತದೆ.

Dreams: ಕನಸಿನಲ್ಲಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಸಂವಾದ! ಪ್ರಯೋಗ ಯಶಸ್ವಿಯೆಂದ ವಿಜ್ಞಾನಿಗಳು

ಇದೇ ಕಾರಣಕ್ಕೆ ಅಂಜೂರವನ್ನು ಜೈನ ಸಮುದಾಯದವರು ತಿನ್ನುವುದಿಲ್ಲ. ಕೆಲ ಬ್ರಾಹ್ಮಣರಲ್ಲಿಯೂ ಕೂಡ ಅಂಜೂರ ತಿನ್ನುವುದು ನಿಷಿದ್ಧವಾಗಿದೆ.

LEAVE A REPLY

Please enter your comment!
Please enter your name here