Site icon Samastha News

Ankit Baiyanpuria: 75 ದಿನದಲ್ಲಿ ಬದಲಾಯ್ತು ಜೊಮ್ಯಾಟೊ ಡೆಲಿವರಿ ಹುಡುಗನ ಜೀವನ

Ankit Baiyanpuria

Ankit Baiyanpuria

‘ರಾಮ್ ರಾಮ್ ಭಾಯ್ ಸಾರೆಯಾಣೆ’ ಯೂಟ್ಯೂಬ್, ಇನ’ಸ್ಟಾಗ್ರಾಂ ಹೆಚ್ಚು ವೀಕ್ಷಿಸುವವರು ಈ ಡೈಲಾಗ್ ಕೇಳಿಯೇ ಇರುತ್ತಾರೆ. ಇಂದು ಭಾರತದಲ್ಲಿ ಅತಿ ಹೆಚ್ಚು ಫಾಲೋವರ್’ಗಳನ್ನು ಹೊಂದಿರುವ ಪ್ರಭಾವಿ ಇನ್’ಫ್ಲುಯೆನ್ಸರ್’ಗಳಲ್ಲಿ ಒಬ್ಬರಾಗಿರುವ ಅಂಕಿತ್ ಭಯಾನ್ಪುರಿಯಾ ತಮ್ಮ ಪ್ರತಿ ವಿಡಿಯೋದ ಆರಂಭದಲ್ಲಿ ಹೇಳುವ ಡೈಲಾಗ್ ಇದು. ಎಲ್ಲ ಸಹೋದರರಿಗೂ ನಮಸ್ಕಾರ ಎಂಬುದು ಇದರ ಅರ್ಥ.

ಹರಿಯಾಣಾದ ಸಣ್ಣ ಹಳ್ಳಿಯವರಾದ ಅಂಕಿತ್, ಕುಸ್ತಿಪಟು ಆಗಬೇಕೆಂದ ಕನಸು ಕಂಡಿದ್ದರು. ಅವರ ಕುಟುಂಬದವರೆಲ್ಲ ಸಣ್ಣ ಪುಟ್ಟ ಕೂಲಿ ಕೆಲಸ ಮಾಡುತ್ತಾ ದಿನದ ಊಟ ದುಡಿಯುವವರು. ಹೆಚ್ಷೇನು ಓದದ ಅಂಕಿತ್ ಸಹ ಕುಟುಂಬಕ್ಕೆ ಸಹಾಯ ಮಾಡಲೆಂದು ದಿನಗೂಲಿ ಮಾಡುತ್ತಿದ್ದರು, ಆ ನಂತರ ಸೇಲ್ಸ್ ಮ್ಯಾನ್ ಆದರು. ಕೊನೆಗೆ ಜೊಮ್ಯಾಟೊ ಡೆಲಿವರಿ ಬಾಯ್ ಆದರು. ಜೊತೆಗೆ ಕುಸ್ತಿಯನ್ನೂ ಮುಂದುವರೆಸಿದ್ದರು. ಆದರೆ ಕೇವಲ 75 ದಿನದಲ್ಲಿ ಅವರ ಜೀವನವೇ ಬದಲಾಗಿ ಹೋಯ್ತು.

ಕುಸ್ತಿ ಮಾಡುವಾಗ ಒಮ್ಮೆ ಅವರ ಭುಜಕ್ಕೆ ಪೆಟ್ಟಾಗಿ, ಕುಸ್ತಿ ಅಖಾಡಕ್ಕೆ ಇಳಿಯದಂತಾಯ್ತು. ಅದಾದ ಬಳಿಮ ಅವರು ಇನ್’ಸ್ಟಾಗ್ರಾಂ ಕಡೆ ಹೊರಳಿದರು. ಇತರರ ವ್ಲಾಗ್, ವಿಡಿಯೋಗಳನ್ನು ನೋಡುತ್ತಾ. ತಮ್ಮ ದಿನನಿತ್ಯದ ವ್ಯಾಯಾಮ ಇನ್ನಿತರೆಗಳನ್ನು ಹಂಚಿಕೊಳ್ಳಲು ಆರಂಭಿಸಿದರು. ಆದರೆ 2023 ರ ಆರಂಭದಲ್ಲಿ ’75 ಡೇಅ್ ಹಾರ್ಡ್ ಚಾಲೆಂಜ್’ ಎಂಬ ಹೊಸ ಟ್ರೆಂಡ್ ಸಾಮಾಜಿಕ ಜಾಲತಾಣದಲ್ಲಿ ಚಾಲ್ತಿಗೆ ಬಂತು. ಚಾಲೆಂಜ್ ಏನಂದರೆ ಪ್ರತಿದಿನ 150 ನಿಮಿಷ ಅಂದರೆ ಒಂದೂವರೆ ಗಂಟೆ ವ್ಯಾಯಾಮ ಮಾಡಬೇಕು. ಅದರಲ್ಲಿ‌ 45 ನಿಮಿಷ ಔಟ್ ಡೋರ್ ಎಕ್ಸರ್ಸೈಸ್ ಮಾಡಬೇಕು. ದಿನಕ್ಕೆ  4 ಲೀಟರ್ ನೀರು ಕುಡಿಯಬೇಕು. 75 ದಿನ ಮದ್ಯ ಅಥವಾ ಸಿಗರೇಟು ಯಾವುದನ್ನೂ ಸೇವಿಸುವಂತಿಲ್ಲ. ಕಡ್ಡಾಯವಾಗಿ ಆರೋಗ್ಯಕರ ಆಹಾರವನ್ನೇ ಸೇವಿಸಬೇಕು. ಪ್ರತಿದಿನ ಯಾವುದೇ ಪುಸ್ತಕದ 10 ಪುಟ ಓದಬೇಕು. ಪ್ರತಿದಿನ ರಾತ್ರಿ ಮಲಗುವ ಮುಂಚೆ ಒಂದು ಫೋಟೊ ತೆಗೆದುಕೊಳ್ಳಬೇಕು.

ಈ 75 ಡೇಸ್ ಹಾರ್ಡ್ ಚಾಲೆಂಜ್ ಅನ್ನು ಅಂಕಿತ್ ತೆಗೆದುಕೊಂಡರು. ಪ್ರತಿದಿನವೂ ಕಡ್ಟಾಯವಾಗಿ ಅವರು ವ್ಯಾಯಾಮ ಮಾಡುತ್ತಿದ್ದರು. ಮನೆಯಲ್ಲಿ ಮಾಡಿದ ರೋಟಿ ಪಲ್ಯೆ ತಿನ್ನುತ್ತಿದ್ದರು. ಇದರ ಜೊತೆಗೆ ಬದಾಮಿ ಇನ್ನಿತರೆಗಳನ್ನು ತಾವೇ ಒರಳಿನಲ್ಲಿ ಅರೆದು ಸ್ಮೂತಿ ರೀತಿ ಮಾಡಿ ಕುಡಿಯುತ್ತಿದ್ದರು. ಪ್ರತಿದಿನವೂ ಭಗವದ್ಗೀತೆಯ ಹತ್ತು ಪುಟ ಓದುತ್ತಿದ್ದರು. ಇದೆಲ್ಲವನ್ನೂ ವಿಡಿಯೋ ಮಾಡಿ ಎಡಿಟ್ ಮಾಡಿ ತಮ್ಮ ಇನ್’ಸ್ಟಾಗ್ರಾಂ ಮತ್ತು ಯೂಟ್ಯೂಬ್ ನಲ್ಲಿ ಹಂಚಿಕೊಳ್ಳುತ್ತಿದ್ದರು.

ಮೊದಲು 50 ದಿನದ ವರೆಗೆ ಹೆಚ್ಚಿನ ಜನ ಇವರ ವಿಡಿಯೋ ಅನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ‌. ಆದರೆ ಚಾಲೆಂಜ್ ಮುಗಿಯುತ್ತಾ ಬಂದಂತೆ ಇವರ ವಿಡಿಯೋಗಳು ವೈರಲ್ ಆಗಲು ಪ್ರಾರಂಭವಾದವು. 75 ದಿನದ ಚಾಲೆಂಜ್ ಮುಗಿಯಿವು ವೇಳೆಗೆ ಅಂಕಿತ್ ಸ್ಟಾರ್ ಆಗಿಬಿಟ್ಟರು. 75 ಡೇ ಚಾಲೆಂಜ್ ಮುಗಿದ ಸಿನ ಸ್ವತಃ ನರೇಂದ್ರ ಮೋದಿ ಟ್ವೀಟ್ ಮಾಡಿ ಅಂಕಿತ್’ಗೆ ಶುಭಾಶಯ ಹೇಳಿದ್ದರು. ಜೊಮ್ಯಾಟೊ ಸಿಇಓ ಸೇರಿದಂತೆ ಹಲವು ದೊಡ್ಡ ಫಿಟ್’ನೆಸ್ ಸಂಸ್ಥೆಗಳ ಮಾಲೀಕರು ಸಹ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದರು. ಭಾರತದ ಅತ್ಯುತ್ತಮ ಫಿಟ್’ನೆಸ್ ಇನ್’ಫ್ಲುಯೆನ್ಸರ್ ಪ್ರಶಸ್ತಿಯನ್ನು ಪ್ರಧಾನಿ ಮೋದಿಯವರಿಂದ ಪಡೆದುಕೊಂಡರು.

Beer Bottle: ಬಿಯರ್ ಬಾಟಲಿಗಳ ಬಣ್ಣಗಳು ಬೇರೆ ಇರುವುದು ಏಕೆ? ಇದರ ಹಿನ್ನೆಲೆ ಏನು?

ಇದೀಗ ಭಾರತದ ಟಾಪ್ ಇನ್’ಫ್ಲುಯೆನ್ಸರ್’ಗಳಲ್ಲಿ ಒಬ್ಬರಾಗಿರುವ ಅಂಕಿತ್, ಹಲವು ಫಿಟ್‌’ನೆಸ್ ಬ್ರ್ಯಾಂಡ್’ಗಳ‌ ಜೊತೆ ಕೊಲ್ಯಾಬರೇಟ್ ಆಗಿದ್ದಾರೆ. ಈಗ ಅವರ ತಿಂಗಳ ಆದಾಯ 20 ಲಕ್ಷಕ್ಕೂ ಹೆಚ್ಚಿದೆ‌. ಸಿನಿಮಾ ಆಫರ್’ಗಳು ಬಂದಿವೆ. ಕೆಲವು ಪಂಜಾಬಿ ರ್ಯಾಪ್’ ಹಾಡುಗಳಲ್ಲಿ ಕಾಣಿಸಿಕೊಂಡಿದ್ದಾರೆ. ದೊಡ್ಡ ಕಾರು, ದೊಡ್ಡ ಮನೆಗಳನ್ನು ಖರೀದಿ ಮಾಡಿದ್ದಾರೆ. ನೋಡಿ, ಕೇವಲ 75 ದಿನಗಳ ಕಾಲ ಅಂಕಿತ್ ಯಾವುದೇ ಚಾಂಚಲ್ಯಕ್ಕೂ ಒಳಗಾಗದೆ‌. ತಮ್ಮ ಗುರಿಯ ಮೇಲೆ ಫೋಕಸ್ ಆಗಿದ್ದಕ್ಕೆ ಅವರು ಇಂದು ಈ ಮಟ್ಟದಲ್ಲಿದ್ದಾರೆ.

Exit mobile version