Hindu Temple: ಅಮೆರಿಕದಲ್ಲಿ‌ ಎರಡು ಹಿಂದೂ ದೇವಾಲಯಗಳ ಮೇಲೆ ದಾಳಿ: ಹಿಂದೂಗಳ ಮೇಲೆ ಏಕೆ ಈ ದ್ವೇಷ

0
95
Hindu Temple

Hindu Temple

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಸನಿಹದಲ್ಲಿದೆ. ಇದೇ ಸಮಯದಲ್ಲಿ ಅಚಾನಕ್ಕಾಗಿ ಹಿಂದೂಗಳ ಬಗ್ಗೆ ತೀವ್ರ ದ್ವೇಷ ಕಾಣಿಸಿಕೊಳ್ಳುತ್ತಿದೆ. ಒಂದೇ ವಾರದ ಅಂತರದಲ್ಲಿ ಅಮೆರಿಕದಲ್ಲಿನ ಎರಡು ಹಿಂದೂ ದೇವಾಲಯಗಳ ಮೇಲೆ ದಾಳಿ ಮಾಡಲಾಗಿದೆ. ಹಿಂದೂಗಳ ಬಗ್ಗೆ ಅವಹೇಳನಕಾರಿ ಸಾಲುಗಳನ್ನು ಬರೆಯಲಾಗಿದ್ದು, ‘ಹಿಂದೂಗಳೆ ಅಮೆರಿಕ ಬಿಟ್ಟು’ ತೊಲಗಿ ಎನ್ನಲಾಗುತ್ತಿದೆ.

ಸೆಪ್ಟೆಂಬರ್ 17 ರಂದು ಅಮೆರಿಕದ ನ್ಯೂಯಾರ್ಕ್ ನಗರದಲ್ಲಿದ್ದ ಹಿಂದೂ ದೇವಾಲಯದ ಮೇಲೆ ದಾಳಿ ನಡೆಸಲಾಗಿತ್ತು, ಈಗ ಸೆಪ್ಟೆಂಬರ್ 27 ರಂದು ಅಮೆರಿಕದ ಸಾಕ್ರಮೆಂಟೊ ಸಿಎ ನಲ್ಲಿರುವ ಬಾಪ್ಸ್ (ಬೋಚಸನ್ವಾಸಿ ಸ್ವಾಮಿನಾರಾಯಣ ಸನಾತನ) ದೇವಾಲಯದ ಮೇಲೆ ದಾಳಿ ಮಾಡಲಾಗಿದ್ದು, ದೇವಾಲಯದ ಕೆಲ ಭಾಗಗಳಿಗೆ ಹಲ್ಲೆ ಮಾಡಿದ್ದು, ದೇವಾಲಯದ ಗೋಡೆಗಳ ಮೇಲೆ ಹಿಂದೂಗಳ ಬಗ್ಗೆ ಅವಹೇಳನಕಾರಿ ಬರಹ ಬರೆಯಲಾಗಿದೆ. ಹಿಂದೂಗಳ ಬಗ್ಗೆ ಮಾತ್ರವೇ ಅಲ್ಲದೆ ಪ್ರಧಾನಿ‌ ಮೋದಿ ಬಗ್ಗೆಯೂ ಅವಹೇಳನಕಾರಿ ಸಾಲುಗಳನ್ನು ಬರೆಯಲಾಗಿದೆ.

ಅಮೆರಿಕ ಮಾತ್ರವೇ ಅಲ್ಲದೆ ಕೆನಡಾನಲ್ಲಿಯೂ ಸಹ ಕೆಲ ದಿನಗಳ ಹಿಂದೆ ಇದೇ ರೀತಿ ಹಿಂದೂ ದೇವಾಲಯವೊಂದರ ಮೇಲೆ ದಾಳಿ ನಡೆದಿತ್ತು. ಅಲ್ಲಿಯೂ ಸಹ ಹಿಂದೂಗಳ ಬಗ್ಗೆ ಅವಾಚ್ಯ, ಅಸಹನೆಯ ಸಾಲುಗಳನ್ನು ಬರೆಯಲಾಗಿತ್ತು. ಈಗ ಅಮೆರಿಕದಲ್ಲಿ ನಡೆದಿರುವ ದಾಳಿಯನ್ನು ಸ್ಥಳೀಯ ಸೆನೆಟರ್ ಚಕ್ ಸ್ಕಮ್ಮರ್ ಖಂಡಿಸಿದ್ದು, ‘ದ್ವೇಷ ಯಾವುದಕ್ಕೂ ಉತ್ತರವಲ್ಲ ಪ್ರೀತಿ ಮಾತ್ರವೇ ಉತ್ತರ, ದ್ವೇಷದ ವಿರುದ್ಧ ಅಮೆರಿಕದ ಎಲ್ಲ ನಾಗರೀಕರು ನಿಲ್ಲಬೇಕು’ ಎಂದಿದ್ದಾರೆ. ಘಟನೆಯನ್ನು ಖಂಡಿಸಿ ದೇವಾಲಯದ ಮುಂದೆ ವಿವಿಧ ಮುಖಂಡರು ಶಾಂತಿ ಪ್ರಾರ್ಥನೆ ಮಾಡಿದ್ದಾರೆ.

Kumki Elephant: ಆಂಧ್ರಕ್ಕೆ ನಾಲ್ಕು ಆನೆ ಉಡುಗೊರೆ ಕೊಡಲಿದೆ ಕರ್ನಾಟಕ‌ ಸರ್ಕಾರ

ಅಮೆರಿಕದ ಹಿಂದು ಸಮುದಾಯ ಸಹ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು ತನಿಖೆಗೆ ಆಗ್ರಹಿಸಿದೆ. ಅಮೆರಿಕದ ಸ್ಥಳೀಯರಲ್ಲಿ ಕಳೆದ ಕೆಲ ವರ್ಷಗಳಲ್ಲಿ ವಲಸಿಗರ ಮೇಲೆ ಅಸಮಾಧಾನ ಹೆಚ್ಚಾಗಿದೆ. ವಿಶೇಷವಾಗಿ ಹಿಂದೂಗಳು ಸ್ಥಳೀಯರ ಅವಕಾಶವನ್ನು ಕಿತ್ತುಕೊಳ್ಳುತ್ತಿದ್ದಾರೆ ಎಂಬ ಅಭಿಪ್ರಾಯ ವ್ಯಾಪಕವಾಗಿ ಮೂಡಿದೆ. ಇದೇ ಕಾರಣಕ್ಕೆ ಹಿಂದೂ ದೇವಾಲಯಗಳ ಮೇಲೆ ದಾಳಿ ಹೆಚ್ಚಾಗಿದ್ದು, ಹಿಂದೂಗಳೇ ಅಮೆರಿಕ ಬಿಟ್ಟು ತೊಲಗಿ ಘೋಷಣೆಗಳು ಸಾರ್ವಜನಿಕವಾಗಿ ಕೇಳಲು ಆರಂಭಿಸಿವೆ.

LEAVE A REPLY

Please enter your comment!
Please enter your name here